ವರ್ಷದ ಕೊನೆಯಲ್ಲಿ ಪೇಟಿಎಂ ಶಾಕ್: 1,000 ಜನರನ್ನು ಕೆಲಸದಿಂದ ತೆಗೆದ ಕಂಪೆನಿ
ನವದೆಹಲಿ, ಡಿಸೆಂಬರ್ 25: ಪಾವತಿ ವ್ಯವಸ್ಥೆ ಸಂಸ್ಥೆ ಪೇಟಿಎಂ ತನ್ನ ಕಂಪೆನಿಯಲ್ಲಿ 1,000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ವಜಾಗೊಳಿಸಿದೆ. ನಿರ್ವಹಣಾ ವೆಚ್ಚ ಸರಿದೂಗಿಸುವ ಕ್ರಮದ ಭಾಗವಾಗಿ ಅನಗತ್ಯ ಉದ್ಯೋಗಗಳಿಗೆ ಕತ್ತರಿ ಹಾಕಿದೆ. ಈ ಜಾಗಕ್ಕೆ ಕೃತಕ ಬುದ್ದಿಮತ್ತೆ ಬಳಸಲು ಮುಂದಾಗಿದೆ.
ಈ ವಜಾ ಪ್ರಕ್ರಿಯೆಯು ಹಲವಾರು ತಿಂಗಳುಗಳಿಂದ ನಡೆಯುತ್ತಿದೆ ಎಂದು ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ. ನೌಕರರ ವಜಾಗೊಳಿಸುವಿಕೆ ಪ್ರಕಿಯೆಯು ಹಣಕಾಸು ತಂತ್ರಜ್ಞಾನ (ಫಿನ್‌ಟೆಕ್) ಕಂಪನಿಯ ನೌಕರರ ಸಂಖ್ಯೆಯ ಅಂದಾಜು 10 ಪ್ರತಿಶತಕ್ಕಿಂತ ಕಡಿಮೆಯಿರಬಹುದು ಎನ್ನಲಾಗಿದೆ.

ಮೆಟಾ, ವಿಪ್ರೋ, ಮೈಕ್ರೋಸಾಫ್ಟ್, ಗೂಗಲ್‌ನಂತಹ ಟೆಕ್ ಟೈತ್ಯ ಕಂಪೆನಿಗಳು ಸಾವಿರಾರು ನೌಕರರನ್ನು ಇಡೀ ವರ್ಷ ವಜಾ ಮಾಡುತ್ತಾ ಬಂದಿವೆ. ಈಗ ಈ ಸಾಲಿಗೆ ಭಾರತ ಮೂಲದ ಪೇಟಿಎಂ ಕೂಡ ಸೇರಿದೆ. ವರದಿಯ ಪ್ರಕಾರ, ಮೇಲೆ ತಿಳಿಸಲಾದ ಹೆಚ್ಚಿನ ಉದ್ಯೋಗ ಕಡಿತಗಳು ಪೇಟಿಎಂ ಕಂಪೆನಿಯ ಗ್ರಾಹಕ ಸಾಲ ವಿಭಾಗದಲ್ಲಿ ನಡೆದಿವೆ ಎಂದು ನಿರೀಕ್ಷಿಸಲಾಗಿದೆ. ಈ ಕ್ರಮವು 10-15 ಪ್ರತಿಶತ ಸಿಬ್ಬಂದಿ ವೆಚ್ಚವನ್ನು ಉಳಿಸುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ.
ಕೃತಕಬುದ್ದಿಮತ್ತೆ ಬಳಕೆ ಹೆಚ್ಚಾದ್ದರಿಂದ ಕೆಲಸ ಯಾಂತ್ರೀಕೃತಗೊಂಡಿದ್ದು, ಈ ಮೂಲಕ ಅನಗತ್ಯ ಉದ್ಯೋಗಗಳನ್ನು ತೆಗೆಯಲಾಗುತ್ತಿದೆ. ಹಣ ಪಾವತಿ ವ್ಯವಹಾರಕ್ಕೆ 15,000 ಹೆಚ್ಚುವರಿ ಮಾನವಶಕ್ತಿ ಬೇಕಾಗಬಹುದು. ಆದರೆ ಎಐ ಪುನರಾವರ್ತಿತ ಕಾರ್ಯಗಳನ್ನು ನಿಭಾಯಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.
ಪೇಟಿಎಂ ಉದ್ಯೋಗಿಗಳ ಕಡಿತ ಏಕೆ:
ಗ್ರಾಹಕ ಸಾಲ ವಿಭಾಗದಲ್ಲಿ ಸಾಲ ನೀಡಲು ಆರ್‌ಬಿಐ ನಿಯಮಗಳನ್ನು ಬಿಗಿಗೊಳಿಸಿದ ನಂತರ ಪೇಟಿಎಂ ಸಣ್ಣ-ಟಿಕೆಟ್ ಸಾಲಗಳನ್ನು 50,000 ರೂ.ಗಿಂತ ಕಡಿಮೆ ಸಾಲವನ್ನು ಕಡಿತಗೊಳಿಸಿದೆ. ಇದು ಡಿಸೆಂಬರ್ 6, 2023 ರಂದು ಸೂಚನೆ ಮರುದಿನ ಕಂಪನಿಯ ಷೇರು ಮೌಲ್ಯದಲ್ಲಿ 20 ಪ್ರತಿಶತದಷ್ಟು ಕುಸಿತಕ್ಕೆ ಕಾರಣವಾಯಿತು. RBI ಡಿಸೆಂಬರ್ ಅಧಿಸೂಚನೆಯಲ್ಲಿ ವಿವಿಧ ಸಾಲ ನೀಡುವ ವರ್ಗಗಳಿಗೆ ಅಪಾಯದ ತೂಕವನ್ನು ಹೆಚ್ಚಿಸಿದೆ. ಇದು ಸಣ್ಣ-ಟಿಕೆಟ್ ಸಾಲಗಳನ್ನು ಕಡಿಮೆ ಲಾಭದಾಯಕವಾಗಿಸಿದೆ. ಏಕೆಂದರೆ ಸಂಭಾವ್ಯ ಡೀಫಾಲ್ಟ್‌ಗಳ ವಿರುದ್ಧ ಸಾಲಗಳನ್ನು ಬ್ಯಾಕ್ ಮಾಡಲು ಬ್ಯಾಂಕುಗಳು ಮತ್ತು ಬ್ಯಾಂಕೇತರ ಸಾಲದಾತರು ಹೆಚ್ಚಿನ ಹಣವನ್ನು ನಿಯೋಜಿಸಬೇಕಾಗುತ್ತದೆ.
ಈ ಕ್ರಮವು ಕಂಪೆನಿಯ ಸಾಲದ ಪ್ರಮಾಣದಲ್ಲಿ ಶೇಕಡಾ 40-50 ರಷ್ಟು ಕಡಿಮೆಯಾಗಬಹುದು ಎಂದು ಪೇಟಿಎಂ ಅಧ್ಯಕ್ಷ ಮತ್ತು ಸಿಒಒ ಭವೇಶ್ ಗುಪ್ತಾ ಅವರನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. 2024 ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು ಸಾಲಗಳಲ್ಲಿ ಪೋಸ್ಟ್‌ಪೇಯ್ಡ್ ಸಾಲಗಳು ಸುಮಾರು 56 ಪ್ರತಿಶತವನ್ನು ಹೊಂದಿವೆ ಎಂದು ವರದಿ ತಿಳಿಸಿದೆ.












Click it and Unblock the Notifications