Get Updates
Get notified of breaking news, exclusive insights, and must-see stories!

ಗ್ರಾಹಕರಿಗೆ ಶಾಕ್ ಕೊಟ್ಟ ಪಾರ್ಲೆ-ಜಿ: ನೆಚ್ಚಿನ ಬಿಸ್ಕತ್ ಈಗ ತುಂಬಾ ದುಬಾರಿ

ನವದೆಹಲಿ ನವೆಂಬರ್ 24: ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದರಿಂದ ಜನಸಾಮಾನ್ಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೇ ವೇಳೆ ಭಾರತದ ಜನಪ್ರಿಯ ಬಿಸ್ಕೆಟ್ 'ಪಾರ್ಲೆ ಜಿ' ಬೆಲೆಯೂ ಏರಿಕೆಯಾಗಿದೆ. ಪಾರ್ಲೆ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ 'ಆಮ್ ಆದ್ಮಿಯ ಬಿಸ್ಕೆಟ್‌ಗಳು' ಎಂದು ಕರೆಯಲ್ಪಡುವ 'ಪಾರ್ಲೆ-ಜಿ' ಬೆಲೆಯನ್ನು ಶೇಕಡಾ 10 ರಷ್ಟು ಹೆಚ್ಚಿಸಿದೆ. ಕಂಪನಿಯ ಅಧಿಕಾರಿಯೊಬ್ಬರು ಬಿಸ್ಕತ್ ತಯಾರಿಕೆಗೆ ಅಗತ್ಯವಿರುವ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗಿರುವುದರಿಂದ 'ಪಾರ್ಲೆ-ಜಿ' ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಪಾರ್ಲೆ-ಜಿ ದುಬಾರಿ: ಪಾರ್ಲೆ ಉತ್ಪನ್ನಗಳ ಉನ್ನತ ವಿಭಾಗದ ಮುಖ್ಯಸ್ಥ ಮಯಾಂಕ್ ಶಾ ಅವರ ಪ್ರಕಾರ, ಪ್ಯಾಕೆಟ್‌ನ 'ಗ್ರಾಂ' ನಲ್ಲಿ ಸ್ವಲ್ಪ ಇಳಿಕೆಯಾಗಿದ್ದರೂ, ಬೆಲೆಯನ್ನು ಆಕರ್ಷಕ ಮಟ್ಟದಲ್ಲಿ ಇರಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗಿದೆ. ಸಕ್ಕರೆ, ಗೋಧಿ ಮತ್ತು ಖಾದ್ಯ ತೈಲದಂತಹ ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಕಂಪನಿಯು ತನ್ನ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಬೇಕಾಗಿದೆ ಎಂದು ಅವರು ಹೇಳಿದರು. ಹೀಗಾಗಿ ಜನಪ್ರಿಯ ಪಾರ್ಲೆ ಜಿ ಗ್ಲೂಕೋಸ್ ಬಿಸ್ಕೆಟ್‌ಗಳ ಬೆಲೆಯನ್ನು ಶೇ 6-7ರಷ್ಟು ಹೆಚ್ಚಿಸಲಾಗಿದೆ ಎಂದಿದ್ದಾರೆ.

ಹಣದುಬ್ಬರದಿಂದಾಗಿ ಕಂಪನಿಗಳ ಮೇಲೆ ಒತ್ತಡ

ಹಣದುಬ್ಬರದಿಂದಾಗಿ ಕಂಪನಿಗಳ ಮೇಲೆ ಒತ್ತಡ

ಇದೇ ಸಮಯದಲ್ಲಿ, ಕಂಪನಿಯು ರಸ್ಕ್‌ ಮತ್ತು ಕೇಕ್ ಮೇಲಿನ ಬೆಲೆಯನ್ನು ಶೇಕಡಾ 5 ರಿಂದ 10 ರಷ್ಟು ಹೆಚ್ಚಿಸಿದೆ. ಹೈಡ್ ಅಂಡ್ ಸೀಕ್ ಮತ್ತು ಕ್ರ್ಯಾಕ್‌ಜಾಕ್ ಕೂಡ ಪಾರ್ಲೆಯ ಜನಪ್ರಿಯ ಬ್ರಾಂಡ್‌ಗಳಾಗಿವೆ. ಅವುಗಳ ಉತ್ಪನ್ನಗಳ ಬೆಲೆಗಳನ್ನು ಸಹ ಹೆಚ್ಚಿಸಲಾಗಿದೆ. ಕಂಪನಿಯು 20 ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಬಿಸ್ಕೆಟ್ ಮತ್ತು ಇತರ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿದೆ ಎಂದು ಮಯಾಂಕ್ ಶಾ ಹೇಳಿದರು. ಉತ್ಪಾದನಾ ವೆಚ್ಚದ ಮೇಲೆ ಹೆಚ್ಚುತ್ತಿರುವ ಹಣದುಬ್ಬರದ ಒತ್ತಡವನ್ನು ಪರಿಗಣಿಸಿ ಕಂಪನಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಅವರು ಹೇಳಿದರು.

ಈ ತ್ರೈಮಾಸಿಕದಲ್ಲಿ ಮೊದಲ ಬಾರಿಗೆ ಬೆಲೆ ಏರಿಕೆ

ಈ ತ್ರೈಮಾಸಿಕದಲ್ಲಿ ಮೊದಲ ಬಾರಿಗೆ ಬೆಲೆ ಏರಿಕೆ

ಮಾಯಾಂಕ್ ಶಾ ಅವರು, "ಕಳೆದ ವರ್ಷಕ್ಕಿಂತ ಖಾದ್ಯ ತೈಲದಂತಹ ಕಚ್ಚಾ ವಸ್ತುಗಳ ಬೆಲೆಯಲ್ಲಿ ಶೇಕಡಾ 50-60 ರಷ್ಟು ಹೆಚ್ಚಳದಿಂದಾಗಿ ಹೆಚ್ಚಿನ ಕಂಪನಿಗಳು ಹಣದುಬ್ಬರದ ಒತ್ತಡವನ್ನು ಎದುರಿಸುತ್ತಿವೆ. ಈ ಹಣಕಾಸು ವರ್ಷದಲ್ಲಿ ಕಂಪನಿಯು ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿರುವುದು ಇದೇ ಮೊದಲು, ಅದಕ್ಕೂ ಮೊದಲು 2020-2021 ಹಣಕಾಸು ವರ್ಷದಲ್ಲಿ ಜನವರಿ-ಮಾರ್ಚ್ (2021) ತ್ರೈಮಾಸಿಕದಲ್ಲಿ ಕಂಪನಿಯು ಬೆಲೆಗಳನ್ನು ಹೆಚ್ಚಿಸಿದೆ.

ಕೊರೋನಾ ಅವಧಿಯಲ್ಲಿ ದಾಖಲೆಯ ಮಾರಾಟ

ಕೊರೋನಾ ಅವಧಿಯಲ್ಲಿ ದಾಖಲೆಯ ಮಾರಾಟ

ಕೊರೊನಾ ವೈರಸ್‌ನಿಂದಾಗಿ ರಾಷ್ಟ್ರವ್ಯಾಪಿ ಹೇರಲಾದ ಲಾಕ್‌ಡೌನ್‌ನಲ್ಲಿ, ಅನೇಕ ಕಂಪನಿಗಳ ಸ್ಥಿತಿ ಕ್ಷೀಣಿಸಿತು. ಆದರೆ 82 ವರ್ಷಗಳಿಂದ, ದೇಶದ ಸಾಮಾನ್ಯ ಜನರ ನೆಚ್ಚಿನ ಬಿಸ್ಕೆಟ್ ಪಾರ್ಲೆ-ಜಿ ಈ ಅವಧಿಯಲ್ಲಿ ತನ್ನ ಎಲ್ಲಾ ಮಾರಾಟ ದಾಖಲೆಗಳನ್ನು ಮುರಿದಿದೆ. ಲಾಕ್‌ಡೌನ್ ಸಮಯದಲ್ಲಿ ಪಾರ್ಲೆ-ಜಿ ಬ್ರಾಂಡ್ ಬಿಸ್ಕೆಟ್‌ಗಳು ಅತಿ ಹೆಚ್ಚು ಮಾರಾಟವಾಗಿವೆ. ಲಾಕ್‌ಡೌನ್‌ನಲ್ಲಿ ಬಹುತೇಕ ಜನ ಮನೆಗಳಲ್ಲಿ ಅದನ್ನು ಸಂಗ್ರಹಿಸುವ ಮೂಲಕ ತಿಂದಿದ್ದಾರೆ. ಇದು ಅನೇಕ ಜನರು ಇದರ ಸಹಾಯದಿಂದ ಸಂಪೂರ್ಣ ಲಾಕ್‌ಡೌನ್ ಅನ್ನು ಕಳೆದಿರುವುದು ತೋರಿಸುತ್ತದೆ.

ಜನರಿಗೆ ಅತ್ಯಂತ ನೆಚ್ಚಿನ ಬಿಸ್ಕತ್ತು

ಜನರಿಗೆ ಅತ್ಯಂತ ನೆಚ್ಚಿನ ಬಿಸ್ಕತ್ತು

82 ವರ್ಷಗಳಿಂದ ಪಾರ್ಲೆ-ಜಿ ಬಹುಶಃ ರಾಷ್ಟ್ರದೊಳಗಿನ ಜನರಿಗೆ ಅತ್ಯಂತ ನೆಚ್ಚಿನ ಬಿಸ್ಕತ್ತು. ಲಾಕ್‌ಡೌನ್ ಸಮಯದಲ್ಲಿ ಅದರ ಎಲ್ಲಾ ಒಟ್ಟು ಮಾರಾಟದ ಡೇಟಾವನ್ನು ಮುರಿದಿದೆ. ಲಾಕ್‌ಡೌನ್ ಸಮಯದಲ್ಲಿ ಪಾರ್ಲೇಜಿ ಹೆಚ್ಚು ಮಾರಾಟವಾಗಿದೆ. ಜನ ಅದನ್ನು ಹೆಚ್ಚು ಖರೀದಿ ಮಾಡಿರುವ ವರದಿ ನೀಡಲಾಗಿದೆ. ನೆಚ್ಚಿನ ಬಿಸ್ಕೆಟ್ಟು ಬೆಲೆ ಹೆಚ್ಚಳವಾಗಿರುವುದರಿಂದ ಜನ ಕೊಂಚ ಬೇಸರಗೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+