ಪನಾಮಾ ಪೇಪರ್ ಔಟ್: ಗುಪ್ತನಿಧಿ ಪಟ್ಟಿಯಲ್ಲಿ ಬಿಗ್ ಬಿ, ಐಶ್ ಹೆಸರು!

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 04: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವಾಗ ಕಪ್ಪು ಹಣ ತಂದು ಭಾರತದ ನಾಗರಿಕರ ಬ್ಯಾಂಕ್ ಖಾತೆಗೆ 15 ಲಕ್ಷ ರು ಹಾಕುತ್ತದೆಯೋ ಗೊತ್ತಿಲ್ಲ. ಆದರೆ, ಕಪ್ಪು ಹಣ, ಗುಪ್ತನಿಧಿ ಇರಿಸಿಕೊಂಡಿರುವ ಸೆಲೆಬ್ರಿಟಿಗಳ ಪಟ್ಟಿ ಬಹಿರಂಗವಾಗಿದ್ದು, ಅದರಲ್ಲಿ ನಟ ಅಮಿತಾಬ್ ಬಚ್ಚನ್, ನಟಿ ಐಶ್ವರ್ಯಾ ರೈ ಹೆಸರು ಕಾಣಿಸಿಕೊಂಡಿದೆ.

ಅಮೆರಿಕದ ಪನಾಮಾದ ಸಂಸ್ಥೆಯೊಂದು ವಿಶ್ವದಲ್ಲೆಡೆ ಇರುವ ಹಲವಾರು ಕ್ಷೇತ್ರದ ಗಣ್ಯರ ಪಟ್ಟಿಯನ್ನು ಹೊರ ಹಾಕಿದೆ. ಈ ಪಟ್ಟಿಯಲ್ಲಿ 500ಕ್ಕೂ ಅಧಿಕ ಭಾರತ ಮೂಲದ ಗಣ್ಯರ ಹೆಸರಿದೆ. ಸಿನಿಮಾ, ಸಂಗೀತ, ರಾಜಕೀಯ ಕ್ಷೇತ್ರದ ಗಣ್ಯರು ಇದರಲಿದ್ದಾರೆ.[ಕಪ್ಪು ಹಣ ತರಲು ಮೋದಿಯಿಂದ ಫೇರ್ ಅಂಡ್ ಲವ್ಲಿ ಯೋಜನೆ"]

Panama papers reveal hidden wealth of world celebrities, Amitabh, Aishwarya figure in list

ಪನಾಮಾದ ಸಂಸ್ಥೆ ಮೊಸಾಕ್ ಫೋನೆಸ್ಕಾ ಸಂಗ್ರಹಿಸಿರುವ 11.5 ಮಿಲಿಯನ್ ದಾಖಲೆ ಪ್ರಕಾರ ಅನೇಕ ಗಣ್ಯಾತಿಗಣ್ಯರ ವಿದೇಶಿ ಗುಪ್ತನಿಧಿ ಖಾತೆಗಳ ವಿವರ ಹೊರಬೀಳುವ ಸಾಧ್ಯತೆಯಿದೆ. ಸುಮಾರು 35ದೇಶಗಳಲ್ಲಿ ತನ್ನ ಕೇಂದ್ರವನ್ನು ಮೊಸಾಕ್ ಸಂಸ್ಥೆ ಹೊಂದಿದೆ.[ಸ್ವಿಸ್ ಲೀಕ್ ಪಟ್ಟಿಯಲ್ಲಿರುವ 100 ಜನ ವಂಚಕರು]

ವಿಶ್ವದ ಗಣ್ಯರ ಪಟ್ಟಿಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಶರೀಫ್, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೆಸರಿದೆ.

ಭಾರತದಿಂದ ಪಟ್ಟಿಯಲ್ಲಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ ಬಚ್ಚನ್, ಡಿಎಲ್ ಎಫ್ ಸಂಸ್ಥೆಯ ಕೆಪಿ ಸಿಂಗ್, ಇಂಡಿಯಾ ಬುಲ್ಸ್ ಪ್ರವರ್ತಕ ಸಮೀರ್ ಗೆಹ್ಲೊಟ್, ಅಪೊಲೊ ಟೈರ್ಸ್ ಸಂಸ್ಥೆಯ ಅಧಿಕಾರಿಗಳ ಹೆಸರಿದೆ.[ಕಾಳ ಧನಿಕರ ಹೆಸರು ಸಿಕ್ಕರೂ ಕಾನೂನು ಕ್ರಮ ಸಾಧ್ಯವಿಲ್ಲ?!]

ಅಮಿತಾಬ್ ಅವರು 1993ರಲ್ಲಿ ಸ್ಥಾಪನೆಯಾದ ನಾಲ್ಕು ಆಫ್ ಶೋರ್ ಶಿಪ್ಪಿಂಗ್ ಕಂಪನಿಗಳ ನಿರ್ದೇಶಕರಾಗಿದ್ದಾರೆ. ಐಶ್ವರ್ಯಾ ಅವರು ತಮ್ಮ ಕುಟುಂಬಸ್ಥರು 2005ರಲ್ಲಿ ಆರಂಭಿಸಿದ ಅಮಿತ್ ಪಾರ್ಟ್ನರ್ಸ್ ಲಿಮಿಟೆಡ್ ನ ನಿರ್ದೇಶಕರಾಗಿದ್ದಾರೆ. 2008ರ ನಂತರ ರೈ ಅವರು ಸಂಸ್ಥೆಯ ಶೇರುದಾರರಾದರು.

ಡಿಎಲ್ ಎಫ್ ಪ್ರವರ್ತಕರಾದ ಕೆಪಿ ಸಿಂಗ್ ಅವರು ಬ್ರಿಟಿಷ್ ವರ್ಜಿನ್ ಐಲ್ಯಾಂಡ್ ನಲ್ಲಿ 2010ರಲ್ಲಿ ಒಂದು ಕಂಪನಿಯನ್ನು ಖರೀದಿಸಿದ್ದು, 10 ಮಿಲಿಯನ್ ಡಾಲರ್ ಗೂ ಅಧಿಕ ಮೌಲ್ಯದ ವಹಿವಾಟು ಹೊಂದಿದ್ದಾರೆ. (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
At a time when Modi government is doing his best to bring back black money stashed in safe overseas, a shocking revelation has come to light.In the list, name of over 500 Indians including top Bollywood celebrities, politicians have also been included.
Please Wait while comments are loading...