• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Oppo F17 ಭಾರತದಲ್ಲಿ ಸದ್ಯದಲ್ಲೇ ಬಿಡುಗಡೆ: ಬೆಲೆ, ವೈಶಿಷ್ಟ್ಯವೇನು?

|

ನವದೆಹಲಿ, ಸೆಪ್ಟೆಂಬರ್ 04: ಪ್ರಚಲಿತ ಮೊಬೈಲ್ ತಯಾರಕ ಒಪ್ಪೋ ಕಂಪನಿಯು ಸದ್ಯದಲ್ಲೇ ಅತ್ಯಂತ ಆಕರ್ಷಣೆಯ ಒಪ್ಪೊ F17 ಮೊಬೈಲ್‌ ಅನ್ನು ಭಾರತದಲ್ಲಿ ಸದ್ಯದಲ್ಲೇ ಬಿಡುಗಡೆ ಮಾಡಲಿದೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ಈ ಲಿಮಿಟೆಡ್ ಹೊಸ ಸ್ಮಾರ್ಟ್‌ಫೋನ್ ಸರಣಿಯು ಒಪ್ಪೋ F17 ಮತ್ತು ಒಪ್ಪೋ F17 ಪ್ರೊ ಮಾಡೆಲ್‌ಗಳನ್ನು ಒಳಗೊಂಡಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಕ್ವಾಡ್‌ ಕ್ಯಾಮೆರಾ ಹಾಗೂ ಬಿಗ್ ಬ್ಯಾಟರಿ ಗಳಂತಹ ಹೈ ಎಂಡ್‌ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿವೆ.

ಕಡಿಮೆ ದರದ ಫೋನ್: ಭಾರತದಲ್ಲಿ ರೆಡ್‌ಮಿ 9A ಮೊಬೈಲ್ ಬಿಡುಗಡೆ

ಅಲ್ಟ್ರಾ-ಫಾಸ್ಟ್ ಸೂಪರ್ ವಿಒಸಿ ಚಾರ್ಜಿಂಗ್ ಪರಿಹಾರ, ಕೃತಕ ಬುದ್ಧಿಮತ್ತೆ (ಎಐ) ಅಥವಾ ಕ್ಯಾಮೆರಾ ಸಾಮರ್ಥ್ಯಗಳ ಬಳಕೆ ಇರಲಿ, ಸ್ಮಾರ್ಟ್‌ಫೋನ್ ಉದ್ಯಮದಲ್ಲಿ ವೈಶಿಷ್ಟ್ಯಗಳನ್ನು ಪ್ರಾರಂಭಿಸುವಲ್ಲಿ ಒಪ್ಪೊ ಮುಂಚೂಣಿಯಲ್ಲಿದೆ. ಪ್ರತಿ ಬಾರಿಯೂ ಉತ್ತಮವಾದದ್ದನ್ನು ಗ್ರಾಹಕರಿಗೆ ಸತತವಾಗಿ ತಾಂತ್ರಿಕ ನಾವೀನ್ಯತೆಯನ್ನು ಪ್ರಾರಂಭಿಸಿದೆ. ಮತ್ತು ಅದರ ಇತ್ತೀಚಿನ ಕೊಡುಗೆಯಾದ ಒಪ್ಪೊ ಎಫ್ 17 ಪ್ರೊ ಕೂಡ ಯಾವುದೇ ಭಿನ್ನವಾಗಿಲ್ಲ.

ಒಪ್ಪೋ F17 ಪ್ರೊ ಮೀಡಿಯಾ ಟೆಕ್ ಹಿಲಿಯೋ P95 ಪ್ರೊಸೆಸರ್‌ ಒಳಗೊಂಡಿದೆ. ಹಾಗೆಯೇ ಒಪ್ಪೋ F17 ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 662 ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದೆ. ಇವೆರಡೂ ಆಂಡ್ರಾಯ್ಡ್ 10 ಓಎಸ್‌ ಸಪೋರ್ಟ್‌ ಪಡೆದುಕೊಂಡಿವೆ.

6.3 ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿರುವ ಈ ಮೊಬೈಲ್ ಕಲರ್OS 7.2 ಸಾಫ್ಟ್‌ವೇರ್‌ನೊಂದಿಗೆ ಬರುತ್ತದೆ. ಇದು ಆಂಡ್ರಾಯ್ಡ್ 10 ಅನ್ನು ಆಧರಿಸಿದೆ. ಜೊತೆಗೆ ನಿಮ್ಮ ಸ್ಮಾರ್ಟ್‌ಫೋನ್ ಫ್ರೀಜ್ ಆಗಲು ಕಾರಣವಾಗುವ ಡೇಟಾವನ್ನು ಪತ್ತೆ ಮಾಡುತ್ತದೆ ಮತ್ತು ತೆರವುಗೊಳಿಸುತ್ತದೆ.

ಒಪ್ಪೊ ಎಫ್ 17 ಪ್ರೊ ಫೋನ್ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಸೆನ್ಸಾರ್‌ನಲ್ಲಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 4,000mAh ಬ್ಯಾಟರಿಯನ್ನು ಪಡೆದಿದ್ದು, ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ.

ಸೆಪ್ಟೆಂಬರ್ 7ರಂದು ಮಾರುಕಟ್ಟೆ ಬರಲಿದೆ ಎನ್ನಲಾಗಿರುವ ಈ ಮೊಬೈಲ್ ಬೆಲೆ 22,990 ರೂಪಾಯಿ ಆಗಿದೆ.

English summary
The OPPO F17 Pro is the sleekest smartphone of 2020. It looks great and packs a punch with its wide arrays of features. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X