ಹಳೆ ನೋಟು ವಿನಿಮಯಕ್ಕೆ ಕೆಲ ದಿನಗಳಷ್ಟೇ ಬಾಕಿ!

ನವದೆಹಲಿ,ಜೂ.22: 2005 ಇಸವಿಗೂ ಮುಂಚಿನ 1,000 ಮತ್ತು 500 ರು ಮುಖಬೆಲೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಕೆಲ ದಿನಗಳು ಮಾತ್ರ ಬಾಕಿ ಇದ್ದು , ಈ ಅವಧಿ ಜೂ.30ಕ್ಕೆ ಅಂತ್ಯವಾಗಲಿದೆ.

2005ರ ಪೂರ್ವ ಕರೆನ್ಸಿ ನೋಟುಗಳನ್ನು ಹಿಂದಕ್ಕೆ ತೆಗೆದುಕೊಳ್ಳಲು ಸಾರ್ವಜನಿಕರಿಗೆ ಜೂ.30ರ ಗಡುವು ವಿಧಿಸಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಆದೇಶ ನೀಡಿದೆ.

ಜೂ.30ರೊಳಗಾಗಿ ನಿಮ್ಮಲ್ಲಿರುವ 1,000 ಹಾಗೂ 500 ರು. ನೋಟುಗಳನ್ನು ನಿಮ್ಮ ಸಮೀಪದ ಬ್ಯಾಂಕ್‌ಗಳಲ್ಲಿ ಜಮಾ ಮಾಡಿ ಅಥವಾ ಬದಲಾಯಿಸಿಕೊಳ್ಳಬೇಕು. [ಭಾರತೀಯ ರುಪಾಯಿಗೆ ಬೆಲೆ ತಂದ ಮೋದಿ]

Only few Days Left to Exchange Your Pre-2005 Currency Notes

ಈ ಮುಂಚೆ ನೋಟು ಬದಲಾಯಿಸಲು ಜನವರಿ 1, 2015 ಕೊನೆ ದಿನಾಂಕ ಎಂದು ಹೇಳಲಾಗಿತ್ತು. ನಂತರ ಜನತೆಯ ಅನುಕೂಲಕ್ಕಾಗಿ ಈ ತಿಂಗಳ 30ರ ವರೆಗೆ ಈ ಅವಧಿಯನ್ನು ವಿಸ್ತರಿಸಿದೆ.

2005ರ ಪೂರ್ವ ಮುದ್ರಿತ ನೋಟುಗಳನ್ನು ಗುರುತಿಸುವುದು ತುಂಬಾ ಸುಲಭ. ಹಳೆ ನೋಟುಗಳ ಹಿಂಬದಿಯಲ್ಲಿ ಮುದ್ರಣದ ವರ್ಷವನ್ನು ಮುದ್ರಿಸಿರುವುದಿಲ್ಲ.

2005ರ ನಂತರದ ನೋಟುಗಳ ಕೆಳಭಾಗದಲ್ಲಿ ಮುದ್ರಿತ ವರ್ಷವನ್ನು ನಮೂದಿಸಲಾಗಿರುತ್ತದೆ. ಖೋಟಾ ನೋಟು ಚಲಾವಣೆ ನಿಯಂತ್ರಣಕ್ಕೆ ಈ ಯೋಜನೆ ರೂಪಿಸಲಾಗಿದೆ ಎಂದು ಆರ್ ಬಿಐ ಹೇಳಿದೆ.

ಸುಮಾರು 100 ರು ಮುಖಬೆಲೆಯ 86.87 ಕೋಟಿರು ನೋಟುಗಳು, 500 ರುನ 56.19 ಕೋಟಿ ರು ಹಾಗೂ 1,000 ರು ಬೆಲೆಯ 21.75 ಕೋಟಿ ರು ನೋಟುಗಳು ವಿನಿಮಯವಾಗಲಿದೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+