ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್ನಾರೈಗಳಿಗೆ ಆರ್ ಬಿಐನಿಂದ ಸಿಹಿ ಸುದ್ದಿ

By Mahesh
|
Google Oneindia Kannada News

ಬೆಂಗಳೂರು, ಜೂ.3: ಅನಿವಾಸಿ ಭಾರತೀಯರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಮಂಗಳವಾರ ಸಿಹಿ ಸುದ್ದಿ ಸಿಕ್ಕಿದೆ. ಆರ್ ಬಿಐ ತನ್ನ ನಿಯಮಗಳಲ್ಲಿ ಬದಲಾವಣೆ ತಂದಿದ್ದು, ಎನ್ನಾರೈಗಳು ಭಾರತದಿಂದ ತೆರಳುವಾಗ ಸಾವಿರಾರು ರುಪಾಯಿ ಭಾರತೀಯ ನಗದು ತಮ್ಮೊಂದಿಗೆ ಒಯ್ಯಬಹುದಾಗಿದೆ.

ಇನ್ಮುಂದೆ ಭಾರತದಿಂದ ಎನ್ನಾರೈಗಳು 25,000 ರು ತನಕ ನಗದು ಮೊತ್ತವನ್ನು ಪ್ರಯಾಣದ ವೇಳೆ ಒಯ್ಯಬಹುದಾಗಿದೆ. ಇದಕ್ಕೂ ಮುಂಚೆ ಅನಿವಾಸಿ ಭಾರತೀಯರು ಭಾರತಕ್ಕೆ ಬಂದು ಇಲ್ಲಿಂದ ತೆರಳುವಾಗ ಭಾರತೀಯ ಕರೆನ್ಸಿ ಒಯ್ಯಲು ಅನುಮತಿ ಇರಲಿಲ್ಲ. ಉಳಿದಂತೆ, ಭಾರತೀಯ ನಿವಾಸಿಗಳು ವಿದೇಶ ಪ್ರಯಾಣಕ್ಕೆ ತೆರಳುವಾಗ 10,000 ರು ಮೌಲ್ಯದ ಭಾರತೀಯ ಕರೆನ್ಸಿಯನ್ನು ಮಾತ್ರ ಒಯ್ಯಬಹುದಾಗಿದೆ.

NRIs now allowed to carry Indian currency up to Rs 25,000 out of India

ಎನ್ನಾರೈಗಳು 25,000 ರು ಕರೆನ್ಸಿ ನೋಟುಗಳನ್ನು ಭಾರತದಿಂದ ಒಯ್ಯಬಹುದಾಗಿದ್ದರೂ ಪಾಕಿಸ್ತಾನ ಹಾಗೂ ಬಾಂಗ್ಲಾದೇಶಕ್ಕೆ ಈ ಸೌಲಭ್ಯ ನೀಡಲಾಗಿಲ್ಲ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ.

2013-14ರ ಆರ್ಥಿಕ ವರ್ಷದಲ್ಲಿ ಭಾರತೀಯ ಚಾಲ್ತಿ ವಿತ್ತೀಯ ಕೊರತೆ(CAD) ಜಿಡಿಪಿ ಎದುರು ಶೇ 1.7 ಪ್ರಮಾಣದಲ್ಲಿದೆ. ಚಿನ್ನ ಹಾಗೂ ಚಿನ್ನದ ಉತ್ಪನ್ನಗಳ ಆಮದು ಇಳಿಕೆ, ಎಣ್ಣೆ ಬೆಳೆಕಾಳೇತರ ಪದಾರ್ಥಗಳ ಆಮದು ಬೇಡಿಕೆ ತಗ್ಗಿರುವುದು ಇದಕ್ಕೆ ಮುಖ್ಯ ಕಾರಣ ಎನ್ನಬಹುದು. ವಿದೇಶಿ ನೇರ ಬಂಡವಾಳ ಹೂಡಿಕೆ ಹಾಗೂ ಬಾಹ್ಯ ವಾಣಿಜ್ಯ ಸ್ವೀಕೃತಿ ಕಾರಣದಿಂದ ಆರ್ಥಿಕ ಸ್ಥಿತಿಗತಿ ಸುಧಾರಣೆ ಕಾಣಬಹುದಾಗಿದೆ ಎಂದು ಆರ್ ಬಿಐ ಹೇಳಿದೆ.

ಉಳಿದಂತೆ, ಆರ್ ಬಿಐ ಗವರ್ನರ್ ಡಾ.ರಘುರಾಮನ್ ಜಿ ರಾಜನ್ ಅವರು ಹೊರಡಿಸಿರುವ ಪ್ರಕಟಣೆಯಂತೆ:
* ಲಿಕ್ವಿಡಿಟಿ ಅಡ್ಜಸ್ಟ್ ಮೆಂಟ್ ಫೆಸಿಲಿಟಿ(LAF) ಶೇ 8 ರಷ್ಟಿದೆ.
* ನಗದು ಮೀಸಲು ಅನುಪಾತ(CRR) ಬದಲಾವಣೆ ಕಂಡಿಲ್ಲ ಶೇ 4 ರಷ್ಟಿದೆ. ಬ್ಯಾಂಕ್‌ಗಳ ಠೇವಣಿಗಳನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಎಸ್‌ಎಲ್‌ಆರ್ ಕಡಿತವನ್ನು ಶೇ.0.50 ರಿಂದ ಶೇ.22.5 ಕ್ಕೆ ಕಡಿತಗೊಳಿಸಲಾಗಿದೆ, 2014-15ರ ವರ್ಷದ ಆರ್ಥಿಕ ಬೆಳವಣಿಗೆಯನ್ನು ಶೇ.5-6ಕ್ಕೆ ಹೆಚ್ಚಿಸಲು ಕ್ರಮ.

ಹಣದುಬ್ಬರ ದರ ಪತನ ಮುಂದುವರೆದರೆ ಮುಂದೆಯೂ ಕೂಡ ನೀತಿಗಳನ್ನು ಬಲಪಡಿಸುವ ಬಗ್ಗೆ ಖಚಿತತೆ ಇಲ್ಲ, ಜನವರಿ 2015ಕ್ಕೆ ಹಣದುಬ್ಬರ ಶೇ.8ರ ಗುರಿ ಇದ್ದರೆ 2016ಕ್ಕೆ ಶೇ.6ರಷ್ಟು ಇರಲಿದೆ. ಇತ್ತೀಚೆಗೆ ಮುಗಿದ ಲೋಕಸಭಾ ಚುನಾವಣೆಗಳು, ಆರ್ಥಿಕ ಅಭಿವೃದ್ಧಿಯನ್ನು ನಿಧಾನಗತಿಯಲ್ಲೇ ಸುಧಾರಿಸುವ ನಿರೀಕ್ಷೆ ಇದೆ. ಹೆಚ್ಚಿನ ವಿವರಗಳನ್ನು ಈ ಲಿಂಕ್ ನಲ್ಲಿ ಪಡೆದುಕೊಳ್ಳಿ

English summary
The Reserve Bank of India (RBI) today in its Monetary Policy allowed Non Resident Indians (NRIs) to carry up to Rs 25,000 in Indian currency out of the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X