• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಶದ ಆರ್ಥಿಕತೆ ಚೇತರಿಕೆಗೆ ಯಾವುದೇ ರಿಸ್ಕ್‌ ತೆಗೆದುಕೊಳ್ಳಲು ಸಿದ್ಧ: ನಿರ್ಮಲಾ ಸೀತಾರಾಮನ್

|

ನವದೆಹಲಿ, ಸೆಪ್ಟೆಂಬರ್ 29: ಕೋವಿಡ್ -19 ಸಾಂಕ್ರಾಮಿಕ ರೋಗದ ಪರಿಣಾಮವನ್ನು ತಗ್ಗಿಸಲು ದೇಶಾದ್ಯಂತ ಕಟ್ಟು ನಿಟ್ಟಿನ ಲಾಕ್‌ಡೌನ್ ಜಾರಿಗೆ ತಂದ ನಂತರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ. 23.9ರಷ್ಟು ಕುಸಿದಿದೆ. ಸಾಂಕ್ರಾಮಿಕ ರೋಗದ ಅಂತ್ಯಕ್ಕೆ ಸ್ಪಷ್ಟವಾದ ದಿನಾಂಕವಿಲ್ಲದೆ, ಅದಕ್ಕೆ ಖಚಿತವಾದ ಲಸಿಕೆ ದೊರೆಯದ ಕಾರಣ ಆರ್ಥಿಕತೆಯು ವಿಭಿನ್ನ ಸ್ವರೂಪದ ಸವಾಲುಗಳನ್ನು ಎದುರಿಸುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯ ಪಟ್ಟಿದ್ದಾರೆ.

ಆರ್ಥಿಕ ಪರಿಣಾಮವನ್ನು ನಿಭಾಯಿಸಲು ಮತ್ತು ಅದರ ಹರಡುವಿಕೆಯನ್ನು ನಿಧಾನಗೊಳಿಸಲು 68 ದಿನಗಳ ಲಾಕ್‌ಡೌನ್ ಕುರಿತು ಅವರು ನೀಡಿದ ಪ್ರತಿಕ್ರಿಯೆಯಲ್ಲಿ "ರಿಸ್ಕ್ ರಿವರ್ಸ್" ಆಗಿಲ್ಲ ಎಂದು ಸೀತಾರಾಮನ್ ಹೇಳಿದ್ದಾರೆ. ಜೊತೆಗೆ ಆರ್ಥಿಕತೆ ಚೇತರಿಕೆಗೆ ಯಾವುದೇ ರಿಸ್ಕ್‌ ತೆಗೆದುಕೊಳ್ಳಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ.

 2021ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 9ರಷ್ಟು ಕುಸಿತ : ಎಸ್ & ಪಿ ಗ್ಲೋಬಲ್ ರೇಟಿಂಗ್ಸ್ 2021ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 9ರಷ್ಟು ಕುಸಿತ : ಎಸ್ & ಪಿ ಗ್ಲೋಬಲ್ ರೇಟಿಂಗ್ಸ್

ಸರ್ಕಾರದ ಖರ್ಚು ಹೆಚ್ಚಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಹೇಳಿದ ಅವರು "ಲಾಕ್‌ಡೌನ್ ನಂತರ, ಆರ್ಥಿಕತೆಯನ್ನು ಬೆಂಬಲಿಸುವ ನಾಲ್ಕು ಎಂಜಿನ್‌ಗಳಲ್ಲಿ, ಮೂರು ಸಂಪೂರ್ಣ ಸ್ಥಗಿತಗೊಂಡಿವೆ. ಇದು ಸಾರ್ವಜನಿಕ ಖರ್ಚು, ಈ ಭಾರವನ್ನು ಎತ್ತುವಿಕೆಯನ್ನು ಮಾಡಬೇಕಾಗಿದೆ. " ಎಂದು ಸೀತಾರಾಮನ್ ಹೇಳಿದರು.

ಫೆಬ್ರವರಿಯಲ್ಲಿ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ 7.8 ಲಕ್ಷ ಕೋಟಿಯಿಂದ ಸರ್ಕಾರ ಈಗಾಗಲೇ ತನ್ನ ಒಟ್ಟು ಮಾರುಕಟ್ಟೆ ಸಾಲ ಗುರಿಯನ್ನು 12 ಲಕ್ಷ ಕೋಟಿ ರೂ.ಗೆ ಏರಿಸಿದೆ. ಸಾಲ ಮಾರುಕಟ್ಟೆ ವಿಶ್ಲೇಷಕರು ಇದನ್ನು 13 ಲಕ್ಷ ಕೋಟಿ ರೂ.ಗೆ ಮತ್ತಷ್ಟು ಹೆಚ್ಚಿಸುವುದನ್ನು ನಿರೀಕ್ಷಿಸಿದ್ದಾರೆ ಎಂದಿದ್ದಾರೆ.

ಈ ವರ್ಷದ ಜಿಡಿಪಿ ಎಷ್ಟಿರಬಹುದು ಎಂದು ಗ್ರಹಿಸಲು ಅವರು ನಿರಾಕರಿಸಿದ್ದಾರೆ. 2020-21ರ ಮೊದಲ ತ್ರೈಮಾಸಿಕದಲ್ಲಿ ಶೇ. 23.9 ರಷ್ಟಿದ್ದ ಜಿಡಿಪಿಯಲ್ಲಿನ ಕುಸಿತ ಗಣನೀಯವಾಗಿದ್ದರೂ, ಇಡೀ ವರ್ಷದ ಸಂಖ್ಯೆಯ ಬಗ್ಗೆ ಇನ್ನೂ ಏನನ್ನೂ ತೀರ್ಮಾನಿಸಲು ನಾನು ಬಯಸುವುದಿಲ್ಲ ಎಂದು ಸೀತಾರಾಮನ್ ಹೇಳಿದರು. ಹಣಕಾಸಿನ ವರ್ಷದ ಎರಡನೇ ಮತ್ತು ಮೂರನೇ ತ್ರೈಮಾಸಿಕವು ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

English summary
Finance minister Nirmala Sitharaman said she is not being “risk averse” in her response to coping with the economic impact of the Covid-19 pandemic and the 68-day lockdown imposed to slow its spread.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X