ತೆರಿಗೆ ಟೋಪಿ ತಪ್ಪಿಸಲು ಇಲಾಖೆ ಮಾಸ್ಟರ್ ಪ್ಲ್ಯಾನ್

Subscribe to Oneindia Kannada

ನವದೆಹಲಿ, ಜುಲೈ, 22: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಅಂತಿಮ ದಿನಗಳು ಹತ್ತಿರ ಬರುತ್ತಿವೆ. ತೆರಿಗೆ ಪಾವತಿಯಿಂದ ನುಣುಚಿಕೊಳ್ಳುತ್ತಿರುವವರನ್ನು ಹಿಡಿದು ಹಾಕಲು ಆದಾಯ ತೆರಿಗೆ ಇಲಾಖೆ ಏಳು ಲಕ್ಷ ತೆರಿಗೆದಾರರ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್‌ ನಂಬರ್ ) ವಿವರ ಪಡೆಯಲು ನಿರ್ಧರಿಸಿದೆ.

ಗರಿಷ್ಠ ಮೊತ್ತದ ವಹಿವಾಟು ನಡೆಸಿದವರು ಮತ್ತು ತಮ್ಮ ಉಳಿತಾಯ ಖಾತೆಯಲ್ಲಿ 10 ಲಕ್ಷ ರು. ಗಿಂತ ಹೆಚ್ಚಿನ ಮೊತ್ತ ಹೊಂದಿದವರಿಂದ 'ಪ್ಯಾನ್‌' ಕಾರ್ಡ್‌ ವಿವರ ಪಡೆಯಲು ತೆರಿಗೆ ಇಲಾಖೆ ಮುಂದಾಗಿದೆ. ವಿಶೇಷವಾಗಿ ಉಳಿತಾಯ ಖಾತೆ ಮೇಲೆ ಗಮನ ಕೇಂದ್ರಿಕರಣ ಮಾಡಿದೆ.[ಅರ್ಜಿ ಹಾಕಿದ 48 ಗಂಟೆಗಳಲ್ಲಿ ಪ್ಯಾನ್ ಕಾರ್ಡ್]

Non-PAN Transactions: Tax Department To Issue Letters To Taxapyers

ಹಿಂದಿನ ತೆರಿಗೆ ಸಲ್ಲಿಕೆ ದಾಖಲೆಯನ್ನು ಕಲೆಹಾಕಿರುವ ತೆರಿಗೆ ಇಲಾಖೆ ಅತಿ ಹೆಚ್ಚು ತೆರಿಗೆ ಮಾಡಿದವರಿಗೆ ಪತ್ರ ಬರೆಯಲು ಮುಂದಾಗಿದೆ. ಪತ್ರಕ್ಕೆ ಸಮರ್ಪಕ ಉತ್ತರ ನೀಡದಿದ್ದರೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದೆ.[ಪಾನ್ ಕಾರ್ಡ್ ಕಳೆದುಕೊಂಡರೆ ಏನು ಮಾಡಬೇಕು?]

ಎಲ್ಲಿ ಮಾಹಿತಿ ನೀಡಬೇಕು?
'ಇ-ಫೈಲಿಂಗ್‌' ಅಂತರ್ಜಾಲ ತಾಣದಲ್ಲಿ ಒದಗಿಸಿರುವ ಸೌಲಭ್ಯ ಬಳಸಿಕೊಂಡು ವಹಿವಾಟು ಮತ್ತು ಪ್ಯಾನ್‌ ವಿವರಗಳನ್ನು ನೀಡಬಹುದಾಗಿದೆ. ಹಣಕಾಸು ಸಚಿವಾಲಯದಿಂದ ಪತ್ರ ಪಡೆದವರು, ಪತ್ರದಲ್ಲಿ ಉಲ್ಲೇಖಿಸಿರುವ ನಿರ್ದಿಷ್ಟ ಸಂಖ್ಯೆ ಉಲ್ಲೇಖಿಸಿ ತಾವು ನಡೆಸಿದ ವಹಿವಾಟು ಮತ್ತು ಪ್ಯಾನ್ ಕಾರ್ಡ್ ಮಾಹಿತಿಯನ್ನು ನೀಡಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Income tax department said that there are various types of high-value transactions being reported under the Annual Information Returns (AIR). These transactions include reporting of cash deposits of Rs 10,00,000 or more in a saving bank account, sale/purchase of immovable property valued at Rs 30,00,000 or more, etc.
Please Wait while comments are loading...