ಭಾರತದಲ್ಲಿ ಫ್ಲಿಪ್ ಕಾರ್ಟಲ್ಲಿ ನೋಕಿಯಾ 5.4 ಮಾರಾಟ ಆರಂಭ
ಬೆಂಗಳೂರು, ಫೆಬ್ರವರಿ 17: ಎಚ್‍ಎಂಡಿ ಗ್ಲೋಬಲ್ ಹೊಸ ನೋಕಿಯಾ 5.4 ಭಾರತದಲ್ಲಿ ಮಾರಾಟಕ್ಕೆ ಲಭ್ಯವಾಗಿಸಿದೆ. ಫ್ಲಿಪ್ ಕಾರ್ಟ್ ಹಾಗೂ ನೋಕಿಯಾ ವೆಬ್ ತಾಣದಲ್ಲಿ ಪೋಲಾರ್ ನೈಟ್ ಮತ್ತು ಡಸ್ಕ್ ಬಣ್ಣದ ಆಯ್ಕೆಗಳಲ್ಲಿ ಹೊಸ ಫೋನ್ ಲಭ್ಯವಿದೆ. ಆರ್‍ಎಎಂ/ಆರ್‍ಓಎಂ ಅವತರಣಿಕೆಗಳು 4ಜಿನಿ/64ಜಿಬಿ ಹಾಗೂ 6ಜಿಬಿ/64ಜಿಬಿಯಲ್ಲಿ ಲಭ್ಯ. ಖರೀದಿ ದರ ಕ್ರಮವಾಗಿ 13,999 ರೂಪಾಯಿ ಹಾಗೂ 15499 ರೂಪಾಯಿ ಆಗಿರುತ್ತದೆ.
ಜಿಯೊ ಸಂಪರ್ಕ ಹೊಂದಿರುವ ನೋಕಿಯಾ 3.4 ಗ್ರಾಹಕರು 4000 ರೂಪಾಯಿ ಮೌಲ್ಯದ ವಿಶೇಷ ಲಾಭಗಳಿಗೆ ಅರ್ಹರಾಗಿರುತ್ತಾರೆ. ಈ ಪ್ರಯೋಜನಗಳಲ್ಲಿ 349 ರೂಪಾಯಿ ಪ್ಲಾನ್‍ನ ಪ್ರಿಪೆಯ್ಡ್ ರೀಚಾರ್ಜ್ ಮೇಲೆ 2000 ರೂಪಾಯಿ ಇನ್‍ಸ್ಟಂಟ್ ಕ್ಯಾಶ್‍ಬ್ಯಾಕ್ ಮತ್ತು ಪಾಲುದಾರರಿಂದ 2000 ರೂಪಾಯಿ ಮೌಲ್ಯದ ವೋಚರ್‍ಗಳು ಸೇರಿರುತ್ತವೆ. ಈ ಆಫರ್ ಗಳು ಹೊಸ ಹಾಗೂ ಹಾಲಿ ಇರುವ ಜಿಯೊ ಗ್ರಾಹಕರಿಗೆ ಅನ್ವಯವಾಗುತ್ತವೆ.
ಕೈಗೆಟುಕುವ ದರದಲ್ಲಿ ನೋಕಿಯಾ 5.4 ಮತ್ತು ನೋಕಿಯಾ 3.4 ಬಿಡುಗಡೆ
ನೋಕಿಯಾ 5.4, 48 ಎಂಪಿ ಕ್ವಾಡ್ ಕ್ಯಾಮೆರಾ ಹೊಂದಿದೆ. ಅತ್ಯಾಧುನಿಕ ರೆಕಾರ್ಡಿಂಗ್ ಸಾಮರ್ಥ್ಯವನ್ನು ಮತ್ತು ಸಿನಿಮ್ಯಾಟಿಕ್ ಪರಿಣಾಮದೊಂದಿಗೆ ಲಭ್ಯವಿದ್ದು, ಎರಡು ದಿನಗಳ ಬ್ಯಾಟರಿ ಜೀವಿತಾವಧಿಯನ್ನು ಹೊಂದಿದೆ. ಕ್ವಾಲ್‍ಕಾಂ ಸ್ನ್ಯಾಪ್‍ಡ್ರಾಗನ್ 662 ಮೊಬೈಲ್ ಪ್ಲಾಟ್‍ಫಾರಂ ಹೊಂದಿದ್ದು, ಇದು ಹಣಕ್ಕೆ ಅದ್ಭುತ ಮೌಲ್ಯವನ್ನು ನೀಡುತ್ತದೆ.
48ಎಂಪಿ ಕ್ವಾಡ್ ಕ್ಯಾಮೆರಾ, 16ಎಂಬಿ ಮುಂಬದಿ ಕ್ಯಾಮೆರಾ, ಓಝೆಡ್‍ಓ ಸ್ಪೇಷಿಯಲ್ ಆಡಿಯೊದಿಂದ ಸುಸಜ್ಜಿತವಾಗಿರುವ ನೋಕಿಯಾ 5.4. ವಿಶಿಷ್ಟ ಸಿನಿಮಾ ಕಾರ್ಯಾಚರಣೆಯ ವಿಶೇಷತೆಯನ್ನು ಹೊಂದಿದ್ದು, 24 ಎಫ್‍ಪಿಎಸ್ (ಚಿತ್ರೋದ್ಯಮದ ಮಾನದಂಡ) ಗುಣಮಟ್ಟದಂತೆ ಚಿತ್ರಗಳನ್ನು ಸೆರೆ ಹಿಡಿಯುತ್ತದೆ. ಜತೆಗೆ 21:9 ಅನುಪಾತದಲ್ಲಿ ಸಿನಿಮ್ಯಾಟಿಕ್ ವಿಧಾನದಲ್ಲಿ ಚಿತ್ರಗಳನ್ನು ಸೆರೆಹಿಡಿಯಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.
ಫ್ಲಿಪ್‍ಕಾರ್ಟ್ ಮೊಬೈಲ್ಸ್‍ನ ಹಿರಿಯ ನಿರ್ದೇಶಕ ಆದಿತ್ಯ ಸೋನಿ, "ಹೊಸ ನೋಕಿಯಾ 5.4ನ್ನು ಭಾರತದಾದ್ಯಂತ ಗ್ರಾಹಕರಿಗೆ ತಲುಪಿಸಲು ನಮಗೆ ರೋಮಾಂಚನವಾಗುತ್ತಿದೆ. ಇದು ವೃತ್ತಿಪರ ಹಾಗೂ ವೈಯಕ್ತಿಕ ಅಗತ್ಯತೆ ಎರಡಕ್ಕೂ ಸರ್ವಶ್ರೇಷ್ಠ ಆಯ್ಕೆಯಾಗಿದ್ದು, ಅತ್ಯುತ್ತಮ ಗುಣಮಟ್ಟದ ಫೋಟೊ ಮತ್ತು ವಿಡಿಯೊ ಸಾಮಥ್ರ್ಯವನ್ನು, ಓಝೆಡ್‍ಓ ಸ್ಪೇಶಿಯಲ್ ಆಡಿಯೊವನ್ನು ಕೂಡಾ ಹೊಂದಿದೆ. ಗ್ರಾಹಕರು ಮೊದಲು ಎಂಬ ತತ್ವಕ್ಕೆ ಅನುಗುಣವಾಗಿ ನೋಕಿಯಾ 5.4 ಬಿಡುಗಡೆಯೊಂದಿಗೆ, ವಿಸ್ತøತ ಶ್ರೇಣಿಯ ರೂಪುಗೊಳ್ಳುತ್ತಿರುವ ಅಗತ್ಯತೆಗೆ ಅನುಸಾರವಾಗಿ ನಮ್ಮ ಮಧ್ಯಮ- ಪ್ರಿಮಿಯಂ ಶೃಏಣಿಯನ್ನು ಮತ್ತಷ್ಟು ಬಲಗೊಳಿಸಿದ್ದೇವೆ ಎಂದು ಬಣ್ಣಿಸಿದರು.
ನಿಮ್ಮ ನೋಕಿಯಾ 5.4 ಈ ಸೌಲಭ್ಯಗಳನ್ನು ಹೊಂದಿದೆ
• 4000 ಎಂಎಎಚ್ ಬ್ಯಾಟರಿ- 42 ಕಮ್ಯೂಟ್‍ಗಳನ್ನು (ಸರಾಸರಿ ಜಾಗತಿಕ ಕಮ್ಯೂಟ್ 67 ನಿಮಿಷಗಳು) ನಿರ್ವಹಿಸಲು ಹಾಗೂ ನಿಮ್ಮ ಮಕ್ಕಳನ್ನು ಪರಿಶೀಲಿಸಲು ಹಾಗೂ ಇ-ಮೇಲ್ ಪರಿಶೀಲಿಸಲು ಬ್ಯಾಟರಿ ಉಳಿದಿರುತ್ತದೆ.
• ಮೂರು ವರ್ಷಗಳ ಮಾಸಿಕ ಭದ್ರತಾ ಅಪ್‍ಡೇಟ್‍ಗಳು- ಇದೇ ವೇಳೆ ಇದು ಮಗುವಿನ ನಡೆದಾಟ, ಮಾತು, ಮಾತಿನ ಕಲಿಕೆ ಮತ್ತು ತಮ್ಮದೇ ಕಥೆ ಹೇಳುವುದನ್ನು ಸೆರೆ ಹಿಡಿಯುತ್ತದೆ.
• ಕಠಿಣ ಪಾಲಿಕಾರ್ಬೊನೇಟ್ ಬಾಡಿ: 10 ವರ್ಷದ ಮಗುವಿನ ತೂಕವನ್ನು ತಾಳಿಕೊಳ್ಳುವಷ್ಟು ಶಕ್ತಿಶಾಲಿಯಾಗಿದೆ (ಜಾಗತಿಕ ಸರಾಸರಿ ತೂಕ 70.5ಎಲ್‍ಬಿ)
• 48 ಎಂಪಿ ಕ್ಯಾಮೆರಾ: ನೋಕಿಯಾದ ಮೊಟ್ಟಮೊದಲ ಕ್ಯಾಮೆರಾ ಫೋನ್ (ನೋಕಿಯಾ 7650)ಗೆ ಹೋಲಿಸಿದರೆ 160 ಪಟ್ಟು ಹೆಚ್ಚು ವಿಸ್ತøತವಾಗಿದೆ.
• ಶೂನ್ಯ ಶಟರ್ ವಿಳಂಬ: ನಿಮ್ಮ ಮಗುವಿನ ಮೊದಲ ಕಾರ್ಟ್‍ವೀಲನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವ 100% ರಷ್ಟು ಅವಕಾಶ.
• 60ಎಫ್‍ಪಿಎಸ್: ಸೆರೆಹಿಡಿದ ಕ್ರಿಯೆಗಳು ಸ್ಟ್ಯಾಂಡರ್ಡ್ 24ಎಫ್‍ಪಿಎಸ್ ಸಿನಿಮಾ ಉದ್ಯಮದ ಕ್ಯಾಮೆರಾಗಳು ಸೆರೆಹಿಡಿದ ತುಣುಕಿಗಿಂತ ಮೂರು ಪಟ್ಟು ನಾಜೂಕಾಗಿರುತ್ತವೆ.