ಭಾರತದಲ್ಲಿ ಎಲ್ಲಾ ರೀತಿಯ ಬಡತನವನ್ನು ನಿರ್ಮೂಲನೆ, ಅದಾನಿ ಭರವಸೆ
ನವದೆಹಲಿ, ಏಪ್ರಿಲ್ 22: ದೇಶವು 2050 ರ ವೇಳೆಗೆ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯಾದರೆ ಅದು ವಿಶ್ವದಲ್ಲಿ ಪ್ರಬುದ್ಧ ರಾಷ್ಟ್ರವಾಗಬಹುದು. ಆ ಸಂದರ್ಭದಲ್ಲಿ ಈ ದೇಶದಲ್ಲಿ ಯಾರೂ ಕೂಡಾ ಖಾಲಿ ಹೊಟ್ಟೆಯಲ್ಲಿ ಮಲಗಬೇಕಾದ ಸ್ಥಿತಿ ಬರುವುದಿಲ್ಲ ಎಂದು ಕೈಗಾರಿಕೋದ್ಯಮಿ ಗೌತಮ್ ಅದಾನಿ ಹೇಳಿದ್ದಾರೆ.
"ನಾವು 2050 ರಿಂದ ಸುಮಾರು 10,000 ದಿನಗಳ ದೂರದಲ್ಲಿದ್ದೇವೆ. ಈ ಅವಧಿಯಲ್ಲಿ, ನಾವು ನಮ್ಮ ಆರ್ಥಿಕತೆಗೆ ಸುಮಾರು 25 ಟ್ರಿಲಿಯನ್ ಅನ್ನು ಸೇರ್ಪಡೆ ಮಾಡುವ ನಿರೀಕ್ಷೆಯನ್ನು ನಾನು ಹೊಂದಿದ್ದೇನೆ. ಪ್ರತಿ ದಿನ ನಮ್ಮ ಜಿಡಿಪಿಗೆ 2.5 ಶತಕೋಟಿ ಡಾಲರ್ ಸೇರ್ಪಡೆ ಆಗಬೇಕಾಗಿದೆ," ಎಂದು ವಿವರಿಸಿದ್ದಾರೆ.
"ನಾವು ಭಾರತದಲ್ಲಿ ಎಲ್ಲಾ ರೀತಿಯ ಬಡತನವನ್ನು ನಿರ್ಮೂಲನೆ ಮಾಡಬೇಕಾದರೆ, ದೇಶವು 2050 ರ ವೇಳೆಗೆ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಬೇಕು. ನಾವು ಎಲ್ಲಾ ರೀತಿಯ ಬಡತನವನ್ನು ದೇಶದಲ್ಲಿ ನಿರ್ಮೂಲನೆ ಮಾಡುತ್ತೇವೆ," ಎಂದು ಗೌತಮ್ ಅದಾನಿ ತಿಳಿಸಿದ್ದಾರೆ.

49 ಶತಕೋಟಿ ಡಾಲರ್ ಹೆಚ್ಚುವರಿ ಸಂಪತ್ತು ಹೊಂದಿರುವ ಗೌತಮ್ ಅದಾನಿ 2021 ರಲ್ಲಿ ವಿಶ್ವದ ಇಬ್ಬರು ಶ್ರೀಮಂತ ವ್ಯಕ್ತಿಗಳಾದ ಎಲೋನ್ ಮಸ್ಕ್ ಮತ್ತು ಜೆಫ್ ಬೆಜೋಸ್‌ಗಿಂತ ಹೆಚ್ಚಿನ ಸಂಪತ್ತನ್ನು ಒಟ್ಟು 81 ಬಿಲಿಯನ್ ಡಾಲರ್ ಹೊಂದಿದ್ದಾರೆ. "ಕೇವಲ 10,000 ದಿನಗಳಲ್ಲಿ ದೇಶವನ್ನು 30 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿಸಬೇಕಾಗಿದೆ," ಎಂದು ಗೌತಮ್ ಅದಾನಿ ಉಲ್ಲೇಖ ಮಾಡಿದ್ದಾರೆ.
ಯೋಜಿಸಿದಂತೆ ಬೆಳವಣಿಗೆಯಾದರೆ ಮುಂದೇನು?
"ಆರ್ಥಿಕತೆಯು ಯೋಜಿಸಿದಂತೆ 2050 ರ ವೇಳೆಗೆ 30 ಟ್ರಿಲಿಯನ್ ಡಾಲರ್‌ಗೆ ಬೆಳವಣಿಗೆ ಹೊಂದಿದರೆ, ಈ 10,000 ದಿನಗಳಲ್ಲಿ ಸ್ಟಾಕ್ ಮಾರುಕಟ್ಟೆಗಳು ಸುಮಾರು 40 ಟ್ರಿಲಿಯನ್ ಮಾರುಕಟ್ಟೆ ಬಂಡವಾಳವನ್ನು ಸೇರುತ್ತದೆ. ಇದು 2050 ರವರೆಗೆ ಪ್ರತಿದಿನ 4 ಶತಕೋಟಿಯಷ್ಟು ಹೆಚ್ಚುವರಿ ಬಂಡವಾಳ ಸೇರ್ಪಡೆಗೆ ಕಾರಣವಾಗುತ್ತದೆ," ಎಂದು ಕೈಗಾರಿಕೋದ್ಯಮಿ ಗೌತಮ್ ಅದಾನಿ ಹೇಳಿದರು. "1.4 ಶತಕೋಟಿ ಜನರ ಜೀವನವನ್ನು ಉನ್ನತೀಕರಿಸುವುದು ಅಲ್ಪಾವಧಿಯಲ್ಲಿ ಮ್ಯಾರಥಾನ್‌ನಂತೆ ಭಾಸವಾಗಬಹುದು. ಆದರೆ ಇದು ದೀರ್ಘಾವಧಿಯಲ್ಲಿ ಕಾರ್ಯ," ಎಂದು ಕೂಡಾ ಅದಾನಿ ಹೇಳಿದ್ದಾರೆ.
ದೇಶದಲ್ಲಿ ಬಡತನ ಎಷ್ಟು ಪ್ರಮಾಣವಿದೆ?
ದೇಶದಲ್ಲಿನ ಬಡತನದ ಕುರಿತು ವಿಶ್ವ ಬ್ಯಾಂಕ್ ತನ್ನ ಇತ್ತೀಚಿನ ವರದಿಯಲ್ಲಿ ಉಲ್ಲೇಖ ಮಾಡಿದೆ. 2011 ಮತ್ತು 2019 ರ ನಡುವೆ ಭಾರತವು ತೀವ್ರ ಬಡತನದಲ್ಲಿ ಶೇಕಡಾ 12.3 ಅಂಕಗಳ ಕುಸಿತವನ್ನು ಕಂಡಿದೆ ಎಂದು ವಿಶ್ವ ಬ್ಯಾಂಕ್ ತನ್ನ ಇತ್ತೀಚಿನ ವರದಿಯಲ್ಲಿ ಹೇಳಿದೆ. 2011 ರಲ್ಲಿ ಶೇಕಡಾ 22.5 ರಿಂದ 2019 ರಲ್ಲಿ ಶೇಕಡಾ 10.2 ಕ್ಕೆ ಭಾರತದಲ್ಲಿ ಬಡತನ ಕುಸಿತ ಕಂಡಿದೆ ಎಂದು ಉಲ್ಲೇಖವಾಗಿದೆ.












Click it and Unblock the Notifications