ಮಾರುಕಟ್ಟೆಯಲ್ಲಿ 10 ಸಾವಿರ ಅಂಶಗಳ ಗಡಿ ದಾಟಿದ ನಿಫ್ಟಿ

Posted By:
Subscribe to Oneindia Kannada

ಮುಂಬೈ, ಜುಲೈ 25: ದೇಶೀಯ ಮಾರುಕಟ್ಟೆಯ ಷೇರುಗಳಾದ ನಿಫ್ಟಿ 50ಯು ಸೋಮವಾರ ಉತ್ತಮ ಏರಿಕೆ ಕಂಡಿದ್ದು ಇದೇ ಮೊದಲ ಬಾರಿಗೆ ಐದು ಅಂಕಿಗಳ ಗಡಿ ದಾಟಿದೆ. ಇದು ಷೇರು ವಹಿವಾಟುದಾರರ ಮೊಗದಲ್ಲಿ ಮಂದಹಾಸ ತಂದಿದೆ.

30 ನಿಮಿಷದಲ್ಲಿ 7 ಸಾವಿರ ಕೋಟಿ ಕಳೆದುಕೊಂಡ ಎಲ್ ಐಸಿǃ

ಸೋಮವಾರದ ವ್ಯವಹಾರದಲ್ಲಿ ಎಸಿಸಿ, ಅಂಬುಜಾ ಸಿಮೆಂಟ್ಸ್, ಎಚ್ ಡಿಎಫ್ ಸಿ ಬ್ಯಾಂಕ್, ಭಾರ್ತಿ ಏರ್ ಟೆಲ್, ಐಸಿಐಸಿಐ ಬ್ಯಾಂಕ್, ಎಚ್ ಡಿಎಫ್ ಸಿ, ಝೀ ಎಂಟರ್ ಟೈನ್ ಮೆಂಟ್, ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್, ಹೀರೋಮೋಟೋ ಕಾರ್ಪ್ ಹಾಗೂ ವೇದಾಂತ ಕಂಪನಿಗಳ ಷೇರುಗಳು ಭಾರೀ ಬಂಡವಾಳ ಆಕರ್ಷಿಸಿದ ಹಿನ್ನೆಲೆಯಲ್ಲಿ ನಿಫ್ಟಿ 50ಯು ಭಾರೀ ಏರಿಕೆಯನ್ನು ದಾಖಲಿಸಿತು.

Nifty 50 hits 10000 for the first time ever

ಒಟ್ಟು 40 ಅಂಶಗಳಷ್ಟು ಏರಿಕೆ ಕಂಡ ನಿಫ್ಟಿ, ದಿನಾಂತ್ಯದ ಹೊತ್ತಿಗೆ 10 ಸಾವಿರ ಅಂಕಗಳ ಗಡಿ ದಾಟಿ, ಹೊಸ ದಾಖಲೆ ಮೆರೆಯಿತು. ನಿಫ್ಟಿ ಗ್ರೂಪ್ ನ 2ನೇ ಅತಿ ದೊಡ್ಡ ಸಂಸ್ಥೆಯಾದ ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್, ಮಿಕ್ಕೆಲ್ಲಾ ಸಂಸ್ಥೆಗಳಿಗಿಂತ ಹೆಚ್ಚು (ಶೇ. 25) ಏರಿಕೆ ಕಂಡಿತು.

Kohli shared his views about performance | Oneindia Kannada

ಭಾರತೀಯ ಕಂಪನಿಗಳ ಈ ಸಾಧನೆಯನ್ನು ಬೆರಗಾಗಿರುವ ವಿಶ್ವ ಸಂಸ್ಥೆಯ ಅಂಗ ಸಂಸ್ಥೆಯಾದ, ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್), 2018ರ ಹೊತ್ತಿಗೆ ಭಾರತವು ತನ್ನ ಆರ್ಥಿಕ ಪ್ರಗತಿಯಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಎಂದು ಅಂದಾಜಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The domestic markets hit record highs on Monday as the broader Nifty 50 hit the historical five-digit mark of 10,000 points in the early morning trade.
Please Wait while comments are loading...