ಜೂನ್ 24 ರಂದು ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ
ನವದೆಹಲಿ, ಜೂ. 1: ವಿವಿಧ ಬೇಡಿಕೆ ಈಡೇರಿಗೆಗೆ ಒತ್ತಾಯಿಸಿ ರಾಷ್ಟ್ರೀಕೃತ ಬ್ಯಾಂಕ್‌ಗಳ ನೌಕರರು ಜೂನ್ 24 ರಂದು ದೇಶವ್ಯಾಪಿ ಮುಷ್ಕರ ಹಮ್ಮಿಕೊಂಡಿದ್ದಾರೆ. ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಟನೆ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಹ ಬೆಂಬಲ ಸೂಚಿಸಿದೆ.
ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಇಂಡಿಯಾದ ಸಹ ಬ್ಯಾಂಕ್ ಗಳಾದ ಸ್ಟೇಟ್ ಬ್ಯಾಂಕ್ ಅಫ್ ಬಿಕೇನರ್ ಅಂಡ್ ಜೈಪುರ್, ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್, ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್‌ನಂತಹ ಹಲವು ಬ್ಯಾಂಕ್‌ಗಳು ಅಖಿಲ ಭಾರತೀಯ ಬ್ಯಾಂಕ್ ನೌಕರರ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ತಿಳಿಸಿದ್ದಾರೆ.[ಬ್ಯಾಂಕ್ ಸಿಬ್ಬಂದಿಗೆ ವೈದ್ಯಕೀಯ ವೆಚ್ಚದ ತಲೆಬಿಸಿ ಇಲ್ಲ]

ಸಂಘಟನೆಯ ಬೇಡಿಕೆಗಳು ಏನು?
* ಭಾರತೀಯ ಸ್ಟೇಟ್ ಬ್ಯಾಂಕ್‌ನಿಂದ ಸಹಬ್ಯಾಂಕ್‌ಗಳ ಸಂಪರ್ಕ ಮುಕ್ತ ಮಾಡಬೇಕು.
* ಕಾರ್ಮಿಕ ಒಕ್ಕೂಟಗಳ ಪ್ರಾತಿನಿಧ್ಯ ಮತ್ತು ಹಕ್ಕುಗಳಿಗೆ ಯಾವುದೇ ನಿರ್ಬಂಧ ಹೇರಬಾರದು[ಬ್ಯಾಂಕ್ ಉದ್ಯೋಗಿಗಳಿಗೆ ಸಂಬಳ, ವೇತನ ಭತ್ಯೆ ಏರಿಕೆ]
* ಸಹಾನುಭೂತಿಯ ನೇಮಕ, ಉಪಸಿಬ್ಬಂದಿ ಮತ್ತು ಅರೆಕಾಲಿಕ ಸಿಬ್ಬಂದಿ ನೇಮಕದಲ್ಲಿ ಇರುವ ಗೊಂದಲ ಬಗೆಹರಿಸಬೇಕು
* ಭಾರತೀಯ ಸ್ಟೇಟ್ ಬ್ಯಾಂಕ್ ಆಡಳಿತ ಮಂಡಳಿ ನಡೆಸುತ್ತಿರುವ ಅರಧಿಕಾರ ಚಲಾವಣೆಗೆ ಕಡಿವಾಣ ಹಾಕಬೇಕು.
ಜನವರಿ ಮತ್ತು ಫೆಬ್ರವರಿಯಲ್ಲಿ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಇಟ್ಟುಕೊಂಡು ಬ್ಯಾಂಕ್ ನೌಕರರು ಮುಷ್ಕರ ನಡೆಸಿದ್ದರು. ಆದರೆ ಇತ್ತೀಚೆಗೆ ಬ್ಯಾಂಕ್ ನೌಕರರ ವೇತನದಲ್ಲಿ ಗಣನೀಯ ಹೆಚ್ಚಳ ಮಾಡಲಾಗಿತ್ತು.












Click it and Unblock the Notifications