Air India crash: ಏರ್ ಇಂಡಿಯಾ ದುರಂತಕ್ಕೆ ಮುಕೇಶ್ ಅಂಬಾನಿ ತೀವ್ರ ಸಂತಾಪ; ಸಕಲ ರೀತಿ ನೆರವು ಘೋಷಣೆ
Air India crash: ಕನಿಷ್ಠ 265 ಜನರ ಸಾವಿಗೆ ಕಾರಣವಾದ ಏರ್ ಇಂಡಿಯಾದ ವಿಮಾನ ಅಪಘಾತದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಮುಕೇಶ್ ಅಂಬಾನಿ ಅವರು, ಈಗ ನಡೆಯುತ್ತಿರುವ ಪರಿಹಾರ ಪ್ರಯತ್ನಕ್ಕೆ ಬೆಂಬಲ ಮತ್ತು ಎಲ್ಲ ಬಗೆಯ ನೆರವು ನೀಡುವುದಾಗಿ ಹೇಳಿದ್ದಾರೆ.
'ನೀತಾ, ನಾನು ಹಾಗೂ ರಿಲಯನ್ಸ್ ನ ಸಂಪೂರ್ಣ ಕುಟುಂಬ ಬಹಳ ನೋವಿನಲ್ಲಿದೆ ಮತ್ತು ಅಹಮದಾಬಾದ್ ನಲ್ಲಿ ನಡೆದ ವಿಮಾನ ದುರಂತದಿಂದ ಆದ ಜೀವಹಾನಿಗಳಿಗೆ ತೀವ್ರ ಸಂತಾಪ ವ್ಯಕ್ತಪಡಿಸುತ್ತೇವೆ. ಈ ದುರಂತದಿಂದ ಭರಿಸಲಾರದ ನಷ್ಟಕ್ಕೆ ಗುರಿಯಾಗಿರುವ ಪ್ರತಿ ಕುಟುಂಬಕ್ಕೆ ನಮ್ಮ ಪ್ರಾಮಾಣಿಕ ಹಾಗೂ ಹೃದಯಸ್ಪರ್ಶಿ ಸಂತಾಪ ಇದೆ. ಇಂಥ ದುಃಖದ ಸನ್ನಿವೇಶದಲ್ಲಿ ರಿಲಯನ್ಸ್ ನಿಂದ ಸಂಪೂರ್ಣವಾದ ಬೆಂಬಲ ನೀಡಲಾಗುತ್ತದೆ. ಈಗ ನಡೆಯುತ್ತಿರುವ ಪರಿಹಾರ ಕಾರ್ಯಾಚರಣೆಗೆ ಸಾಧ್ಯವಿರುವ ಎಲ್ಲ ಮಾರ್ಗದಲ್ಲಿಯೂ ನೆರವಾಗುತ್ತೇವೆ. ಈ ರೀತಿಯ ಊಹಿಸಲು ಕೂಡ ಸಾಧ್ಯವಾಗದಂಥ ದುರ್ಘಟನೆಯಿಂದ ದುಃಖ ಅನುಭವಿಸುತ್ತಿರುವ ಪ್ರತಿಯೊಬ್ಬರಿಗೆ ಇದರಿಂದ ಹೊರಬರುವುದಕ್ಕೆ ಶಕ್ತಿ ದೊರೆಯಲಿ ಮತ್ತು ನಮ್ಮ ಸಾಂತ್ವನ ಅವರ ಜೊತೆಗಿದೆ. ಓಂ ಶಾಂತಿ' ಎಂದು ಅವರು ತಮ್ಮ ಹೇಳಿಕೆಯಲ್ಲಿ ಹೇಳಿದ್ದಾರೆ.

ಲಂಡನ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಗುರುವಾರದಂದು ಅಹಮದಾಬಾದ್ ನ ವೈದ್ಯಕೀಯ ಕಾಲೇಜು ಸಮುಚ್ಚಯದಲ್ಲಿ ಪತನವಾಗಿತ್ತು. ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಈ ದುರಂತ ಸಂಭವಿಸಿತ್ತು. ಬಿಜೆ ವೈದ್ಯಕೀಯ ಕಾಲೇಜು ಮತ್ತು ಸಿವಿಲ್ ಆಸ್ಪತ್ರೆಯ ಕಾಂಪೌಂಡ್ ನಲ್ಲಿ ಇದ್ದ ಕೆಲವರು ಸಹ ಈ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಈ ದುರಂತದ ತೀವ್ರತೆ ಎಷ್ಟೆಂದರೆ ಎಷ್ಟೋ ದೇಹಗಳನ್ನು ಗುರುತಿಸಲು ಸಹ ಸಾಧ್ಯವಾಗುತ್ತಿಲ್ಲ.
ಬೋಯಿಂಗ್ 787 ಡ್ರೀಮ್ ಲೈನರ್ (AI 171) ವಿಮಾನದಲ್ಲಿ 230 ಪ್ರಯಾಣಿಕರು ಹಾಗೂ ಸಿಬ್ಬಂದಿ 12 ಮಂದಿ ಸೇರಿ ಒಟ್ಟು 242 ಜನ ಇದ್ದರು. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಕಂಡುಕೇಳರಿಯದಂಥ ಭೀಕರ ವಿಮಾನ ದುರಂತ ಇದಾಗಿದೆ.











Click it and Unblock the Notifications