ಮೋದಿ ಸರ್ಕಾರಕ್ಕೆ ಸಿಕ್ತು ಮೂಡಿ ಬೆಂಬಲ, ರೇಟಿಂಗ್ ಏರಿಕೆ
ಬೆಂಗಳೂರು, ನವೆಂಬರ್ 17: ಭಾರತದ ಸ್ಥಳೀಯ ಹಾಗೂ ವಿದೇಶಿ ಕರೆನ್ಸಿ ವಿತರಣೆ ರೇಟಿಂಗ್ ಸುಧಾರಣೆಗೊಂಡಿದೆ. ಸುಮಾರು 14 ವರ್ಷಗಳ ಬಳಿಕ ಭಾರತ ರೇಟಿಂಗ್ Baa3 ನಿಂದ Baa2ಗೆ ಬಂದಿದೆ ಎಂದು ಅಂತಾರಾಷ್ಟ್ರೀಯ ರೇಟಿಂಗ್ ನೀಡುವ ಮೂಡಿ'ಸ್ ಹೂಡಿಕೆ ಸೇವಾ ಸಂಸ್ಥೆ ಪ್ರಕಟಿಸಿದೆ. ಈ ಮೂಲಕದ ಮೋದಿ ಸರ್ಕಾರದ ಆರ್ಥಿಕ ನೀತಿಗೆ ಬೆಂಬಲ ಸಿಕ್ಕಿದೆ.
ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ರೇಟಿಂಗ್ ಬದಲಾಗಿತ್ತು. ಆದರೆ,ಭಾರತದ ಸಾಲದ ಹೊರೆ ಪರಿಸ್ಥಿತಿ ಹಾಗೇ ಇದೆ. ಆರ್ಥಿಕ ಸುಧಾರಣೆ ನಂತರ ಸಾಲದ ಹೊರೆಯಿಂದ ತೀವ್ರವಾದ ಅಪಾಯಗಳು ಎದುರಾಗದಿದ್ದರೂ ಹೊರೆಯಂತೂ ತಗ್ಗಿಲ್ಲ.

ಇನ್ನು ವಿದೇಶಾಂಗ ನೀತಿ ವಿಷಯದಲ್ಲೂ ಭಾರತಕ್ಕೆ ಒಳ್ಳೆ ರೇಟಿಂಗ್ ಸಿಕ್ಕಿದ್ದು, Baa2 ನಿಂದ Baa1 ಗೆ ಏರಿಕೆಯಾಗಿದೆ. ದೀರ್ಘಾವಧಿ ವಿದೇಶಿ ಕರೆನ್ಸಿ ಬ್ಯಾಂಕಿನಲ್ಲಿ ಠೇವಣಿ ವಿಷಯದಲ್ಲಿ Baa3 ನಿಂದ Baa2 ಗೆ ರೇಟಿಂಗ್ ಏರಿಕೆಯಾಗಿದೆ.
ಸಣ್ಣ ಉದ್ದಿಮೆದಾರರು ಹಾಗೂ ರಫ್ತುದಾರರಿಗೆ ಅನುಕೂಲವಂತೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ)ಯಲ್ಲಿ ತಿದ್ದುಪಡಿ ತಂದಿರುವುದರಿಂದ 2018ರ ಆರ್ಥಿಕ ವರ್ಷದಲ್ಲಿ ಶೇ7.5ರ ಜಿಡಿಪಿ ಪ್ರಗತಿ ಕಾಣಬಹುದಾಗಿದೆ ಎಂದು ಮೂಡಿ ಸಂಸ್ಥೆ ಹೇಳಿದೆ.












Click it and Unblock the Notifications