ಮುಂಗಾರು ಕೊಡುಗೆ : ಸ್ಪೈಸ್ ಜೆಟ್ ನಿಂದ 888 ರುಗೆ ವಿಮಾನಯಾನ
ನವದೆಹಲಿ, ಜುಲೈ 03: ಕಡಿಮೆ ದರದಲ್ಲಿ ವಿಮಾನಯಾನ ಒದಗಿಸುವ ಸಂಸ್ಥೆ ಸ್ಪೈಸ್ ಜೆಟ್ ತನ್ನ ಪ್ರಯಾಣಿಕರಿಗೆ ಮುಂಗಾರು ಸೀಸನ್ ಹೊಸ ಕೊಡುಗೆ ಘೋಷಿಸಿದೆ. ದೇಶಿ ಪ್ರಯಾಣವನ್ನು 888 ರುನಿಂದ ಹಾಗೂ ವಿದೇಶಿ ಯಾತ್ರೆಯಲ್ಲಿ 3,499 ರು ನಿಂದ ಆರಂಭಿಸಬಹುದು.
ಈ ಕಡಿಮೆ ದರದ ಪ್ರಯಾಣದ ಆಫರ್ ಗಳು ಮಂಗಳವಾರದಿಂದ ಆರಂಭವಾಗಿದ್ದು, ಜುಲೈ 06, 2019ರ ತನಕ ಟಿಕೆಟ್ ಬುಕ್ ಮಾಡಬಹುದು. ಸೆಪ್ಟೆಂಬರ್ 25, 2019 ರ ತನಕ ಪ್ರಯಾಣದ ಅವಧಿ ಲಭ್ಯವಿರಲಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ ಟಿಕೆಟ್ ಸಿಗಲಿದೆ.

ಅಮೆರಿಕನ್ ಎಕ್ಸ್ ಪ್ರೆಸ್ ಕಾರ್ಡ್ ಆಫರ್ : ಸ್ಪೈಸ್ ಜೆಟ್ ವೆಬ್ ತಾಣದ ಮೂಲಕ ಟಿಕೆಟ್ ಬುಕ್ ಮಾಡಿದರೆ ಶೇ 25ರಷ್ಟು ರಿಯಾಯಿತಿ ಸಿಗಲಿದೆ. ಇದಕ್ಕೆ ಸೂಕ್ತ ಪ್ರೋಮೊ ಕೊಡ್ ಬಳಸಬೇಕು. ಇದರ ಜೊತೆಗೆ 250 ಬೋನಸ್ ಅಂಕ, ಸ್ಪೈಸ್ ಕ್ಲಬ್ ನೋಂದಣಿ ಸಿಗಲಿದೆ. ಅಮೆರಿಕನ್ ಎಕ್ಸ್ ಪ್ರೆಸ್ ಕಾರ್ಡ್ ಬಳಸಿ ಬುಕ್ ಮಾಡಿದರೆ ಸ್ಪೈಸ್ ಮ್ಯಾಕ್ಸ್ ಸೀಟುಗಳ ಮೇಲೆ ಶೇ50ರಷ್ಟು ರಿಯಾಯಿತಿ ಸಿಗಲಿದೆ.
ಇದಲ್ಲದೆ, ಸ್ಪೈಸ್ ಜೆಟ್ ಮೊಬೈಲ್ ಆಪ್ ನಿಂದ ಹೋಟೆಲ್ ಬುಕ್ಕಿಂಗ್ ಮಾಡಿದರೆ ಪ್ರತಿ ಪ್ರಯಾಣಕ್ಕೂ 1000 ರು ರಿಯಾಯಿತಿ ಸಿಗಲಿದೆ.












Click it and Unblock the Notifications