ಮೊಬೈಲ್‌ನಲ್ಲಿ ಇಡೀ ಜಗತ್ತು, ಇದು ಮೋದಿ ಕನಸು

ಗಾಂಧಿನಗರ, ಜ. 30: "ಸಾಧ್ಯವಾದಷ್ಟು ಹೆಚ್ಚು ಸೇವೆಗಳನ್ನು ಮೊಬೈಲ್ ಮೂಲಕ ನೀಡಲು ಸಾಧ್ಯವಾಗಿಸುವಂತಹ ಅವಕಾಶಗಳನ್ನು ಹುಡುಕಿ. ಸಂಪೂರ್ಣ ಜಗತ್ತನ್ನು ನಾವು ಮೊಬೈಲ್‌ನೊಳಗೆ ತರೋಣ..."

ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಅವರು ಐಟಿ ಕ್ಷೇತ್ರದ ಪ್ರಮುಖರಿಗೆ ಕರೆ ನೀಡಿದ್ದಾರೆ. ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಟ್ವಿಟ್ಟರ್ ಮೂಲಕ ನರೇಂದ್ರ ಮೋದಿ ಅವರು ಸಂವಾದ ನಡೆಸಿದರು. [ಇ ಆಡಳಿತ ಸ್ನೇಹಿ ಭಾರತ್ ಫೋನ್]

modi

ದೇಶದಲ್ಲೇ ಪ್ರಥಮ ಬಾರಿಗೆ ಎಂ ಆಡಳಿತ ಜಾರಿಗೆ ತಂದ ಹೆಗ್ಗಳಿಕೆ ಕರ್ನಾಟಕದ ಸಿದ್ದರಾಮಯ್ಯ ಸರ್ಕಾರದ್ದು. ಇದರಿಂದ ಪ್ರಭಾವಿತರಾಗಿರುವ ನರೇಂದ್ರ ಮೋದಿ ಈ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಐಟಿ ಪ್ರವೀಣರಿಗೆ ಸೂಚಿಸಿದ್ದಾರೆ. [ಮೋದಿಯಿಂದ ಸಾರ್ವಜನಿಕರ ಸಂಪರ್ಕ ವೆಬ್ ತಾಣ ]

ಮೊಬೈಲ್ ಮೂಲಕ ಆಡಳಿತ ನೀಡಲು ಅನುಕೂಲವಾಗುವಂತೆ ಅವಕಾಶಗಳನ್ನು ರೂಪಿಸಬೇಕು. ಇ ಆಡಳಿತವು ಡಿಜಿಟಲ್ ಇಂಡಿಯಾ ಪ್ರೊಜೆಕ್ಟ್‌ನ ಪ್ರಮುಖ ಭಾಗ ಎಂದು ಹೇಳಿದ್ದಾರೆ. [ಎಂ ಒನ್ ಆಪ್ ಗೆ ಆಧಾರ್ ಸಂಖ್ಯೆಯೇ ಐಡಿ]

ಇ ಆಡಳಿತದತ್ತ ನೋಡುವ ಮೊದಲು ಮೊಬೈಲ್‌ನಲ್ಲ ನೋಡೋಣ. ಇ ಗಿಂತ ಮೊದಲು ಎಂ ಆಡಳಿತಕ್ಕೆ ಮಹತ್ವ ನೀಡೋಣ. ತಂತ್ರಜ್ಞಾನ ಹಾಗೂ ಇ ಆಡಳಿತವು ಕೆಲಸದ ಪ್ರಕ್ರಿಯೆಗಳನ್ನು ಸರಳಗೊಳಿಸುತ್ತದೆ. ಇದಕ್ಕಾಗಿ ಆಧುನಿಕ ತಂತ್ರಜ್ಞಾನಗಳನ್ನು ಹೆಚ್ಚು ಉಪಯೋಗಿಸಬೇಕೆಂದು ನರೇಂದ್ರ ಮೋದಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+