ಸ್ನಾಪ್ ಚಾಟ್ ಬಾಸ್ ಜತೆ ಮಾಡೆಲ್ ಮಿರಾಂಡಾ ನಿಶ್ಚಿತಾರ್ಥ!

Posted By:
Subscribe to Oneindia Kannada

ಲಾಸ್ ಏಂಜಲೀಸ್, ಜುಲೈ 21: ರೂಪದರ್ಶಿ ಮಿರಾಂಡಾ ಕೆರ್ ಅವರು ಸ್ನಾಪ್ ಚಾಟ್ ಬಾಸ್ ಸ್ಪೈಜೆಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಂತೆ. ಈ ವಿಷಯವನ್ನು ಖುದ್ದು ಮಿರಾಂಡಾ ಅವರು ಸ್ನಾಪ್ ಚಾಟ್ ಬಳಸಿ ವಜ್ರದ ಉಂಗುರ ಜೊತೆಗೆ 'I Said Yes' ಎಂದು ಇನ್ಸ್ಟಾ ಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

33 ವರ್ಷ ವಯಸ್ಸಿನ ಕೆರ್ ಅವರು ಹಂಚಿಕೊಂಡ 'ಮ್ಯಾರಿ ಮೀ' ಎಂಬ ಚಿತ್ರಕ್ಕೆ 14 ಸಾವಿರಕ್ಕೂ ಅಧಿಕ ಕಾಮೆಂಟ್ಸ್ ಬಂದಿವೆ. 26 ವರ್ಷ ವಯಸ್ಸಿನ ಸ್ಪೈಗೆಲ್ ಅವರು ಸ್ನಾಪ್ ಚಾಟ್ ನ ಸಹ ಸ್ಥಾಪಕರಾಗಿದ್ದಾರೆ. [ಸುಂದರಿ ಮಿರಾಂಡಾ ಬಿಕಿನಿ ಚಿತ್ರಗಳ ಗ್ಯಾಲರಿ]

Miranda Kerr Engaged To Snapchat Boss Spiegel

ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಸ್ನಾಪ್ ಚಾಟ್ ಆರಂಭಿಸಿದ್ದರು. ಇದು ಅವರ ಮೊದಲ ಮದುವೆಯಾಗಿದೆ.

I said yes!!! ❤️😍❤️😍❤️

A photo posted by Miranda (@mirandakerr) on Jul 20, 2016 at 8:39am PDT

ಮಿರಾಂಡಾ ಅವರಿಗೆ ಇದು ಎರಡನೇ ಮದುವೆಯಾಗಿದ್ದು, 2010ರಲ್ಲಿ ನಟ ಓರ್ಲೊಂಡೊ ಬ್ಲೂಮ್ ಜತೆ ಮದುವೆಯಾಗಿದ್ದರು. ಇಬ್ಬರಿಗೂ ಫಿನ್ ಹೆಸರಿನ ಐದು ವರ್ಷದ ಮಗನಿದ್ದಾನೆ.

ವಿಕ್ಟೋರಿಯಾ ಸೀಕ್ರೇಟ್ ಮಾಡೆಲ್ ಮಿರಾಂಡಾ ಅವರು 2015ರಿಂದ ಸ್ಪೈಗೆಲ್ ಜತೆ ಡೇಟಿಂಗ್ ಮಾಡುತ್ತಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Australian supermodel Miranda Kerr and Snapchat co-founder Evan Spiegel are engaged.Kerr, 33, made the announcement on her Instagram account - using a Snapchat filter, naturally - on Wednesday.
Please Wait while comments are loading...