ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಕ್ರೋಸಾಫ್ಟ್ ನಿಂದ 18 ಸಾವಿರ ಉದ್ಯೋಗ ಕಡಿತ

By Mahesh
|
Google Oneindia Kannada News

ನೂಯಾರ್ಕ್‌, ಜು.18: ಸಾಫ್ಟ್ ವೇರ್ ಕ್ಷೇತ್ರದ ದಿಗ್ಗಜ 'ಮೈಕ್ರೊಸಾಫ್ಟ್‌' ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರಿ ಪ್ರಮಾಣದಲ್ಲಿ ತನ್ನ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ವಿತರಿಸಲು ಮುಂದಾಗಿದೆ. ಸರಿಸುಮಾರು 18 ಸಾವಿರಕ್ಕೂ ಅಧಿಕ ಪ್ರಮಾಣದ ಉದ್ಯೋಗ ಕಡಿತಕ್ಕೆ ಸಂಸ್ಥೆ ಮುಂದಾಗಿದೆ.

ಮೈಕ್ರೋಸಾಫ್ಟ್ ಕಂಪೆನಿ 39 ವರ್ಷಗಳ ದೀರ್ಘ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಭಾರತದಲ್ಲಿನ ಕಚೇರಿಗಳ ಮೇಲೆ ಈ ಉದ್ಯೋಗ ಕಡಿತದ ಪ್ರಮಾಣ ಬಹಳ ಕಡಿಮೆ ಇರಲಿದೆ ಎಂದು ಭಾರತೀಯ ಸಂಜಾತ (ಆಂಧ್ರಪ್ರದೇಶದಲ್ಲಿ ಜನನ) ಮೈಕ್ರೊಸಾಫ್ಟ್‌ನ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ) ಸತ್ಯಾ ನಾದೆಲ್ಲಾ ಹೇಳಿದ್ದಾರೆ.

ಗುರುವಾರ ನಾಸ್ಡಾಕ್ ನಲ್ಲಿ ಮೈಕ್ರೋಸಾಫ್ಟ್ ಷೇರುಗಳು 44.88 ಯುಎಸ್ ಡಾಲರ್ ನಂತೆ ಶೇ 1.8ರಷ್ಟು ಏರಿಕೆಯಾಗಿದೆ. 2000ರ ನಂತರ ಇದೇ ಮೊದಲ ಬಾರಿಗೆ ಈ ರೀತಿ ಏರಿಕೆ ಕಂಡು ಬಂದಿರುವುದು ಷೇರುಪೇಟೆಯಲ್ಲಿ ಸಂತಸ ಮೂಡಿಸಿದೆ.

Microsoft set to cut 18,000 jobs

ಇತ್ತೀಚೆಗಷ್ಟೇ ಫಿನ್ಲೆಂಡ್‌ ಮೂಲದ ಮೊಬೈಲ್‌ ಫೋನ್‌ ಹ್ಯಾಂಡ್‌ಸೆಟ್‌ ತಯಾರಿಕಾ ಕಂಪೆನಿ ನೋಕಿಯಾ ಖರೀದಿಸಿರುವುದರಿಂದ ಎದುರಾದ ಆರ್ಥಿಕ ಹೊರೆ ಕಡಿಮೆ ಮಾಡಿಕೊಳ್ಳಲು ಹಾಗೂ ವೆಚ್ಚ ಕಡಿತದ ಭಾಗವಾಗಿ ಈ ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಉದ್ಯೋಗ ಕಳೆದುಕೊಳ್ಳುವ 18 ಸಾವಿರ ಮಂದಿಯಲ್ಲಿ 12,500 ಉದ್ಯೋಗಿಗಳಲ್ಲಿ ಕಚೇರಿ ಸಿಬ್ಬಂದಿ ಮತ್ತು ಫ್ಯಾಕ್ಟರಿ ಕೆಲಸಗಾರರೂ ಸೇರಿದ್ದಾರೆ. ಈ ಕ್ರಮ ಬಹಳ ನೋವು ತರುವಂತಹದ್ದು, ಕಠಿಣವಾದುದು. ಕಂಪೆನಿಯ ಹಿತದೃಷ್ಟಿಯಿಂದ ಅಷ್ಟೇ ಅನಿವಾರ್ಯವೂ ಆಗಿದೆ ಎಂದು ನಾದೆಲ್ಲಾ ಹೇಳಿದ್ದಾರೆ.

ಭಾರತದಲ್ಲಿನ ಮೈಕ್ರೊಸಾಫ್ಟ್‌ ಮತ್ತು ನೋಕಿಯಾ ಘಟಕಗಳಲ್ಲಿ 6,500 ನೌಕರರಿದ್ದು, ಕೆಲವರಷ್ಟೇ ನಿರ್ಗಮಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ವಿಶ್ವದ ವಿವಿಧ ದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಮೈಕ್ರೊಸಾಫ್ಟ್‌ ನಲ್ಲಿ 99,000 ಮಂದಿ ಪೂರ್ಣಾವಧಿ ನೌಕರರಿದ್ದಾರೆ. ಇವರಲ್ಲಿ 58 ಸಾವಿರ ಮಂದಿ ಅಮೆರಿಕದ ಕಚೇರಿಗಳಲ್ಲಿದ್ದಾರೆ.

English summary
Microsoft announced its decision to cut 18,000 jobs this year, the biggest-ever in its history.The lay-off will mean Microsoft's workforce could be reduced by nearly 15 per cent since the acquisition of Nokia in April this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X