ಅಗ್ರಮಾನ್ಯ ಕಾರು ತಯಾರಕ ಮಾರುತಿ ಸುಜುಕಿಯಿಂದ ಮಹತ್ವದ ಘೋಷಣೆ

ನವದೆಹಲಿ, ಡಿ. 14: ಕೊರೊನಾವೈರಸ್‌ನಿಂದಾಗಿ ಆರ್ಥಿಕ ಹಿಂಜರಿತಕ್ಕೆ ಒಳಗಾಗಿದ್ದ ದೇಶದ ಅಗ್ರಮಾನ್ಯ ಕಾರು ತಯಾರಕ ಮಾರುತಿ ಸುಜುಕಿ ಕಂಪನಿ(MSI) ಮಹತ್ವದ ಘೋಷಣೆ ಮಾಡಿದೆ. 2021ರ ಆರಂಭದಲ್ಲೇ ಡೀಸೆಲ್ ಕಾರುಗಳನ್ನು ಮತ್ತೆ ಮಾರುಕಟ್ಟೆಗೆ ಪರಿಚಯಿಸುವುದಾಗಿ ಪ್ರಕಟಿಸಿದೆ

2020-21 ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಪ್ರಯಾಣಿಕ ವಾಹನ ರಫ್ತು ಶೇ. 75ರಷ್ಟು ಇಳಿಕೆಯಾಗಿತ್ತು. ಜೊತೆಗೆ ಬಿಎಸ್ 6 ಮಾನ್ಯತೆ ಸಿಗದ ಹಿನ್ನೆಲೆಯಲ್ಲಿ ಡೀಸೆಲ್ ಕಾರುಗಳನ್ನು ಮಾರುಕಟ್ಟೆಗೆ ಬಿಟ್ಟಿರಲಿಲ್ಲ.

ಸದ್ಯ ಲಭ್ಯವಾಗಿರುವ ಮಾಹಿತಿಯಂತೆ, ಬಿಎಸ್6 ಸುಧಾರಣೆಯೊಂದಿಗೆ ಮಾನೇಸರ್ ಘಟಕದಲ್ಲಿ ಡೀಸೆಲ್ ಇಂಜಿನ್ ಸದ್ದು ಮಾಡಲಿವೆ. ಮುಂದಿನ ಹಬ್ಬದ ಸೀಸನ್ ನಲ್ಲಿ ಡೀಸೆಲ್ ಕಾರುಗಳು ಹೊರ ಬರಲಿವೆ.

Maruti Suzuki India to bring back diesel cars next year

ದೇಶಿ ಮಾರುಕಟ್ಟೆಯಲ್ಲಿ ಎರ್ಟಿಗಾ ಹಾಗೂ ವಿಟಾರಾ ಬ್ರೆಜಾ ವಾಹನಗಳ ಡೀಸೆಲ್ ಆವೃತ್ತಿಯನ್ನು ಹೆಚ್ಚಾಗಿ ಪ್ರಚುರಗೊಳಿಸಲಾಗುತ್ತದೆ ಎಂಬ ಸುದ್ದಿ ಸಿಕ್ಕಿದೆ. ಆದರೆ, ಮಾರುಕಟ್ಟೆಗೆ ಡೀಸೆಲ್ ಕಾರುಗಳ ಮರು ಪ್ರವೇಶದ ಹಿಂದಿನ ಕಾರಣ ಮಾತ್ರ ಸ್ಪಷ್ಟಗೊಂಡಿಲ್ಲ.

ಡಿಜೈರ್, ಸ್ವಿಫ್ಟ್, ಎಸ್ ಕ್ರಾಸ್ ಹಾಗೂ ಬಲೇನೋಗಳಲ್ಲಿ ಫಿಯೆಟ್ 1,300 ಡೀಸೆಲ್ ಇಂಜಿನ್ ಬಳಸಲಾಗುತ್ತಿದೆ, ಮಾನೇಸರ್ ಘಟಕದಲ್ಲಿ ಇದನ್ನು ಅಪ್ಗ್ರೇಡ್ ಮಾಡಿ 1,500 ಸಿಸಿ ಡೀಸೆಲ್ ಇಂಜಿನ್ ಅಳವಡಿಕೆಗೆ ಮುಂದಾಗಲಿದೆ. ಸದ್ಯ ಬಿಎಸ್ 6 ಮಾನ್ಯತೆಯಂತೆ 1 ಲೀಟರ್, 1.2 ಲೀಟರ್ ಹಾಗೂ 1.5 ಲೀಟರ್ ಪೆಟ್ರೋಲ್ ಇಂಜಿನ್ ಬಳಸಲಾಗುತ್ತದೆ. ಸಿಎನ್ ಜಿ ಆವೃತ್ತಿಯನ್ನು ಮಾರಾಟ ಮಾಡಲು ಮಾರುತಿ ಸುಜುಕಿ ಚಿಂತಿಸಿದೆ.

Maruti Suzuki India to bring back diesel cars next year

ಡೀಸೆಲ್ ಇಂಜಿನ್ ಸುಧಾರಣೆ ಹಾಗೂ ಡೀಸೆಲ್ ಕಾರುಗಳ ಬಗ್ಗೆ ಏಪ್ರಿಲ್ 26, 2019ರಂದು ಎಂಎಸ್ಐ ಚೇರ್ಮನ್ ಆರ್ .ಸಿ ಭಾರ್ಗವ ಅವರು ಘೋಷಿಸಿ, ಏಪ್ರಿಲ್ 1, 2020ರಂದು ಕಾರುಗಳು ಮಾರುಕಟ್ಟೆ ಪ್ರವೇಶಿಸಲಿವೆ ಎಂದಿದ್ದರು. ಆದರೆ, ಕೊರೊನಾವೈರಸ್ ಆರ್ಥಿಕ ಬಿಕ್ಕಟ್ಟಿನಿಂದ ವಿಳಂಬವಾಗಿ 2021ರಲ್ಲಿ ಡೀಸೆಲ್ ಕಾರುಗಳನ್ನು ಹೊರ ತರಲಾಗುತ್ತಿದೆ. ಗ್ರಾಹಕರ ಪ್ರತಿಕ್ರಿಯೆ ನೋಡಿಕೊಂಡು ಉತ್ಪಾದನೆ ಸಂಖ್ಯೆ ಹೆಚ್ಚಿಸಲಾಗುತ್ತದೆ ಎಂದು ಕಾರ್ಯಕಾರಿ ನಿರ್ದೇಶಕ ಶಶಾಂಕ್ ಶ್ರೀವಾತ್ಸವ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+