ಮಾರುತಿ ಸುಜುಕಿ ಕಾರುಗಳ ಮಾರಾಟ ಡಿಸೆಂಬರ್‌ನಲ್ಲಿ ಶೇ. 20ರಷ್ಟು ಏರಿಕೆ
ನವದೆಹಲಿ, ಜನವರಿ 01: ದೇಶದ ಅಗ್ರಮಾನ್ಯ ಕಾರುಗಳ ತಯಾರಕ ಮಾರುತಿ ಸುಜುಕಿ ಡಿಸೆಂಬರ್ ತಿಂಗಳಲ್ಲಿ ಒಟ್ಟಾರೆ ಮಾರಾಟದಲ್ಲಿ ಶೇಕಡಾ 20ರಷ್ಟು ಹೆಚ್ಚಳವನ್ನು ವರದಿ ಮಾಡಿದೆ. ಡಿಸೆಂಬರ್ ತಿಂಗಳಿನಲ್ಲಿ 1,60,226 ಯುನಿಟ್‌ಗಳನ್ನು ಮಾರಾಟ ಮಾಡಿದೆ.
ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಕಾಂಪ್ಯಾಕ್ಟ್ ವಾಹನಗಳು, ಎಲ್‌ಸಿವಿಗಳು ಮತ್ತು ವ್ಯಾನ್‌ಗಳು ಸೇರಿದಂತೆ ಒಟ್ಟು 1,60,226 ಯುನಿಟ್‌ಗಳನ್ನು 2020 ರ ಡಿಸೆಂಬರ್‌ನಲ್ಲಿ ಮಾರಾಟ ಮಾಡಿತು. ಕಳೆದ ವರ್ಷ ಇದೇ ತಿಂಗಳಲ್ಲಿ ಮಾರಾಟವಾದ 1,33,296 ಯುನಿಟ್‌ಗಳಿಗಿಂತ ಇದು ಶೇಕಡಾ 20.2ರಷ್ಟು ಹೆಚ್ಚಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ದೇಶೀಯ ಮಾರಾಟವು ಶೇ. 19.5ರಷ್ಟು ಏರಿಕೆ ಕಂಡು 1,50,288 ಕ್ಕೆ ತಲುಪಿದೆ ಮತ್ತು ರಫ್ತು ಶೇಕಡಾ 31.4ರಷ್ಟು ಏರಿಕೆ ಕಂಡು 9,938 ಕ್ಕೆ ತಲುಪಿದೆ. ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಮಾರುತಿ ಸುಜುಕಿ ಶೇಕಡಾ 13.4ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಒಟ್ಟು 4,95,897 ಯುನಿಟ್ ಮಾರಾಟವಾಗಿದೆ.

ಇನ್ನು ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟೆಡ್‌ನ ಆಟೋಮೋಟಿವ್ ವಿಭಾಗವು 2020 ರ ಡಿಸೆಂಬರ್‌ನಲ್ಲಿ ಮಾರಾಟದಲ್ಲಿ ಶೇಕಡಾ 10.3ರಷ್ಟು ಕುಸಿತವನ್ನು ಕಂಡು 35,187 ಕ್ಕೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 39,230 ಯುನಿಟ್ ಮಾರಾಟವಾಗಿದೆ.
ಒಟ್ಟು ಪ್ರಯಾಣಿಕರ ವಾಹನಗಳ ಮಾರಾಟವು 16,182 ಯುನಿಟ್‌ಗಳೊಂದಿಗೆ ಶೇಕಡಾ 3ರಷ್ಟು ಬೆಳವಣಿಗೆಯನ್ನು ದಾಖಲಿಸಿದರೆ, 2,210 ಯುನಿಟ್‌ಗಳೊಂದಿಗೆ ರಫ್ತು ಶೇಕಡಾ 3ರಷ್ಟು ಬೆಳವಣಿಗೆಯನ್ನು ಕಂಡಿದೆ.












Click it and Unblock the Notifications