ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆ

ನವದೆಹಲಿ, ಜನವರಿ 11: ದೇಶದ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆ ಮಾರುತಿ ಸುಜುಕಿ ಲಿಮಿಟೆಡ್, ಕಾರುಗಳ ಬೆಲೆಯನ್ನು 1,700 ರು ನಿಂದ 17, 000ರ ತನಕ ಏರಿಕೆ ಮಾಡಿದೆ.

ಹ್ಯುಂಡೈ ಮೋಟರ್ಸ್ ಲಿಮಿಟೆಡ್, ಟಾಟಾ ಮೋಟರ್ಸ್ ಲಿಮಿಟೆಡ್ ನಂತರ ಮಾರುತಿ ಸುಜುಕಿ ಕೂಡಾ ಅದೇ ಹಾದಿ ಹಿಡಿದಿದೆ. ಜಪಾನ್ ಮೂಲದ ಕಾರು ಉತ್ಪಾದನಾ ಸಂಸ್ಥೆ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ಕೂಡಾ ಕಾರುಗಳ ಬೆಲೆ ಏರಿಕೆ ಮಾಡಿದೆ. 6,000 ರಿಂದ 32,000 ರು ತನಕ ಹೋಂಡಾ ಕಾರುಗಳ ಬೆಲೆ ಏರಿಕೆಯಾಗಿದೆ.

Maruti Suzuki increases car prices by up to Rs17,000

ಮಾರುತಿ ಸುಜುಕಿ ಬೆಲೆ ಏರಿಕೆ 1,700 ರು ನಿಂದ 17, 000ರ ತನಕ ಅಂತರದಲ್ಲಿದ್ದು, ಬಹುತೇಕ ಎಲ್ಲಾ ಮಾಡೆಲ್ ಗಳಿಗೂ ಇದು ಅನ್ವಯವಾಗಲಿದೆ. ಭಾರತದೆಲ್ಲೆಡೆ ಈ ಹೊಸ ದರಗಳು ಜನವರಿ 10, 2018ರ ಅನ್ವಯ ಜಾರಿಗೆ ಬರಲಿದೆ ಎಂದು ಪ್ರಕಟಿಸಿದೆ.

ಸದ್ಯ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನದಲ್ಲಿರುವ ಹ್ಯುಂಡೈ ಮೋಟರ್ಸ್, ಡಿಸೆಂಬರ್ 2017ರಲ್ಲಿ ಹ್ಯುಂಡೈ, ತನ್ನ ಉತ್ಪನ್ನಗಳ ಬೆಲೆಯನ್ನು ಶೇ2ರಷ್ಟು ಏರಿಕೆ ಮಾಡಿವೆ. ವರ್ಷದ ಆರಂಭದಲ್ಲಿ ಟಾಟಾ ಮೋಟರ್ಸ್ ಕೂಡಾ ತನ್ನ ಉತ್ಪನ್ನಗಳ ಬೆಲೆ ಏರಿಕೆ ಮಾಡಿತ್ತು. ಕೇಂದ್ರ ಬಜೆಟ್ ನಂತರ ವಾಹನಗಳ ಬೆಲೆಯಲ್ಲಿ ಇನ್ನಷ್ಟು ವ್ಯತ್ಯಯವಾಗುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+