ಜೂನ್ 1ರಿಂದ ಯಾವೆಲ್ಲ ನಿಯಮಗಳು ಬದಲಾವಣೆ? ವಿವರ ಇಲ್ಲಿದೆ
ನವದೆಹಲಿ, ಜೂನ್, 01: ಗುರುವಾರದಿಂದ ಅಂದರೆ ಜೂನ್ 1, 2023ರಿಂದಲೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ ಆಗಿದೆ. ಅದೇ ರೀತಿಯಲ್ಲಿ ಇಂದಿನಿಂದ ಈ ತಿಂಗಳ ಅಂತ್ಯದವರೆಗೂ ಹಲವು ಬದಲಾವಣೆಗಳು ಆಗಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಈಗ ಯಾವೆಲ್ಲ ನಿಯಮಗಳು ಬದಲಾಗಿವೆ ಮತ್ತು ಮುಂದೆ ಬದಲಾವಣೆ ಆಗಲಿರುವ ನಿಯಮಗಳ ವಿವರವನ್ನು ಇಲ್ಲಿ ತಿಳಿಯಿರಿ.
ಕೇಂದ್ರ ಸರ್ಕಾರ ನೀಡುತ್ತಿದ್ದ ಸಬ್ಸಿಡಿಯನ್ನು ಶೇ.ಕಡಾ 40 -15ಕ್ಕೆ ಇಳಿಕೆ ಮಾಡಿರುವ ಹಿನ್ನೆಲೆ, ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಕಾರುಗಳ ಬೆಲೆಯಲ್ಲಿ ಇಂದಿನಿಂದಲೇ ಭಾರೀ ಪ್ರಮಾಣದಲ್ಲಿ ಏರಿಕೆ ಆಗಲಿವೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇನ್ನು ಮಾಹಿತಿಯ ಪ್ರಕಾರ, ಜೂನ್ 1ರಿಂದ ಥರ್ಡ್ ಪಾರ್ಟಿ ವಿಮೆಯನ್ನು ಹೆಚ್ಚಿಸಲು ಎಲ್ಲಾ ತಯಾರಿಗಳು ನಡೆಯುತ್ತಿವೆ.

ಅಲ್ಲದೆ ಈ ಬಗ್ಗೆ ಕಂಪನಿಗಳಿಂದ ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ. ಆದರೂ, ಥರ್ಡ್ ಪಾರ್ಟಿ ವಿಮೆಯ ಅವಧಿಯನ್ನು ಇಂದಿನಿಂದ ವಿಸ್ತರಿಸಲಾಗುತ್ತದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಹಾಗೆಯೆ ಹೆದ್ದಾರಿ ಸಚಿವಾಲಯವು ತನ್ನ ಗೆಜೆಟ್ ಪ್ರಕಟಿಸಲು ಕರಡನ್ನು ಸಿದ್ಧಪಡಿಸಿದೆ ಎಂದು ತಿಳಿದುಬಂದಿದೆ.
ಈ ನಿಯಮ 1000 ಸಿಸಿಗಿಂತ ಕಡಿಮೆ ಸಾಮರ್ಥ್ಯವುಳ್ಳ ಕಾರುಗಳಿಗೆ ಅನ್ವಯ ಆಗುತ್ತದೆ ಎಂದು ಹೇಳಲಾಗುತ್ತಿದೆ. ಇನ್ನು 1000 ರಿಂದ 1500 ಸಿಸಿ ಕಾರುಗಳಿಗೆ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅನ್ನು 3221ರಿಂದ 3416 ರೂಪಾಯಿಗೆ ಹೆಚ್ಚಿಸಲಾಗಿದೆ. ಅದನ್ನು ಇದೀಗ ಮತ್ತಷ್ಟು ಹೆಚ್ಚಿಸಲು ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ 1500 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯವುಳ್ಳ ವಾಹನಗಳಿಗೆ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅನ್ನು 7890ದಿಂದ 7897 ರೂಪಾಯಿಗೆ ಹೆಚ್ಚಿಸಲಾಗುತ್ತದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಚಿನ್ನದ ಎರಡನೇ ಸುತ್ತಿನ ಹಾಲ್‌ಮಾರ್ಕಿಂಗ್ ಆದೇಶ ಇಂದಿನಿಂದ ಜಾರಿಗೆ ಬರಲಿದೆ. ದೇಶದ 256 ಜಿಲ್ಲೆಗಳಲ್ಲಿ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳ ಹಾಲ್‌ಮಾರ್ಕಿಂಗ್ ಆದೇಶ ಕಡ್ಡಾಯ ಆಗಲಿದೆ. ಮತ್ತು 32 ಹೊಸ ಜಿಲ್ಲೆಗಳನ್ನು ಸೇರಿಸಲಾಗುವುದು. ಈ ಆದೇಶವು ಕಳೆದ ವರ್ಷದದ್ದಾಗಿವೆ. ಆದರೂ ಅನೇಕ ಜಿಲ್ಲೆಗಳಲ್ಲಿ ಈ ಆದೇಶವನ್ನು ಇನ್ನೂ ಅನುಸರಿಸುತ್ತಿಲ್ಲ ಎನ್ನುವುದು ತಿಳಿದುಬಂದಿದೆ.
ಈಗಾಗಲೇ ಹಾಲ್‌ಮಾರ್ಕಿಂಗ್ ಆದೇಶವನ್ನು ಪಾಲಿಸದ ಜಿಲ್ಲೆಗಳನ್ನು ಗುರುತಿಸಲಾಗಿದೆ. ಮತ್ತು ಅಂತಹ ಜಿಲ್ಲೆಗಳಲ್ಲಿ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸೂಚಿಸಲಾಗಿದೆ. ಒಂದು ವೇಳೆ ಆದೇಶವನ್ನು ಪಾಲಿಸದಿದ್ದರೆ ಕ್ರಮವನ್ನು ಎದುರಿಸಲು ಸಿದ್ಧರಾಗಿರಿ ಎಂದು ಎಚ್ಚರಿಕೆಯನ್ನು ನೀಡಲಾಗಿದೆ. ಹಾಗೆಯೆ ಇಂದಿನಿಂದ ಹಾಲ್‌ಮಾರ್ಕಿಂಗ್ ಇಲ್ಲದೆ ಆಭರಣಗಳ ಮಾರಾಟ ಇರುವುದಿಲ್ಲ ಎನ್ನುವ ನಿಯಮವನ್ನು ಜಾರಿಗೊಳಿಸಲಾಗಿದೆ.
ಎಲ್‌ಪಿಜಿ ಸಿಲಿಂಡರ್ ದರ ಇಳಿಕೆಗೆ ಕಾರಣ ಏನು?
ಇನ್ನು ಇಂದಿನಿಂದ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡಲಾಗಿದೆ. ಕಳೆದ ಒಂದು ವಾರದಿಂದ ಕಚ್ಚಾ ತೈಲಗಳ ಬೆಲೆಗಳು ಕುಸಿಯುತ್ತಿದ್ದು, ಈ ಹಿನ್ನೆಲೆ ದೇಶೀಯ ಸಿಲಿಂಡರ್‌ಗಳ ಬೆಲೆಯಲ್ಲಿ ಕಡಿಮೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಹಿಂದೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 1,000 ರೂಪಾಯಿ ಗಡಿ ದಾಟಿತ್ತು. ಇದೇ ವಿಚಾರವಾಗಿ ಕಾಂಗ್ರೆಸ್ ನಾಯಕರು ಆಗಿನ ಆಡಳಿತ ಸರ್ಕಾರ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 500 ರೂಪಾಯಿ ಇಳಿಕೆ ಮಾಡುತ್ತೇವೆಂದು ಹೇಳಿದ್ದರು. ಆದರೆ ಇದೀಗ ಇಂದಿನಿಂದಲೇ ಅಂದರೆ ಜೂನ್ 1ರಿಂದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಹಾಗಾದರೆ ಎಷ್ಟು ಕಡಿತವಾಗಿದೆ ಎಂದು ಇಲ್ಲಿ ತಿಳಿಯಿರಿ
2023ರ ಜೂ ತಿಂಗಳ ಮೊದಲ ದಿನವೇ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ. ತೈಲ ಕಂಪನಿಗಳು ಜೂನ್ 1ರಂದು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಕಡಿತ ಮಾಡಿವೆ ಎನ್ನುವ ಮಾಹಿರಿ ಲಭ್ಯವಾಗಿದೆ. ಸರ್ಕಾರಿ ತೈಲ ಕಂಪನಿಗಳು ಬಿಡುಗಡೆ ಮಾಡಿದ ಬೆಲೆಯ ಪ್ರಕಾರ, ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 83 ರೂಪಾಯಿನಷ್ಟು ಇಳಿಕೆಯಾಗಿದೆ ಎಂದು ದಿ ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.
19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗೆ ಈಗ 1773 ರೂಪಾಯಿ ಆಗಿದೆ. ಈ ಮೊದಲು ಸಿಲಿಂಡರ್ ಬೆಲೆ 1856.50 ರೂಪಾಯಿ ಇತ್ತು. ಆದರೆ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಮೊದಲಿನ ದರದಲ್ಲೇ ದೊರೆಯಲಿದೆ ಎನ್ನುವ ಮಾಹಿತಿ ಲಭ್ಯವಾಗುದೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳಲ್ಲಿ ಪರಿಹಾರ ನೀಡುವುದಲ್ಲದೆ, ಜೆಟ್ ಇಂಧನ ಬೆಲೆಯನ್ನು ತೈಲ ಕಂಪನಿಗಳು ಕಡಿತಗೊಳಿಸಿವೆ.












Click it and Unblock the Notifications