ಪಾಕಿಸ್ತಾನ, ಶ್ರೀಲಂಕಾ, ನೇಪಾಳ ಜಿಡಿಪಿಗಿಂತಲೂ ಹೆಚ್ಚಿದೆ LIC ಒಟ್ಟು ಆಸ್ತಿ
ಭಾರತದ ಆರ್ಥಿಕತೆ ವೇಗವಾಗಿ ಬೇಳೆಯುತ್ತಿದೆ. ಇದು ವಿವಿಧ ದೇಶಗಳ ಕಣ್ಣು ಕುಕ್ಕುತ್ತಿದೆ. ಇನ್ನೇನು ಕೆಲವೇ ವರ್ಷಗಳಲ್ಲಿ ಭಾರತದ ಜಿಡಿಪಿ ದಾಖಲೆಯ ಮಟ್ಟಕ್ಕೆ ಏರಲಿದೆ ಎಂದು ತಜ್ಞರು ಹೇಳಿದ್ದಾರೆ. ಇದೇ ಬೆನ್ನಲ್ಲೆ ಎಲ್‌ಐಸಿಯ ಒಟ್ಟು ಆಸ್ತಿಯು ಲೆಕ್ಕಾ ಸಿಕ್ಕಿದ್ದು, ಇದು ನೆರೆಯ ರಾಷ್ಟ್ರಗಳ ನಿದ್ದೆ ಗೆಡಿಸಿದೆ.
ಪಾಕಿಸ್ತಾನದಲ್ಲಿ ದಿನ ಬಳಿಕೆ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಈ ದೇಶದಲ್ಲಿ ಜನರು ಆಹಾರಕ್ಕಾಗಿ ಆಹಾಕಾರ ಪಡುತ್ತಿದ್ದಾರೆ. ಶ್ರೀಲಂಕಾದಲ್ಲಿ ಸ್ಥಿತಿ ಬೇರೆಯಾಗಿದ್ದು, ದಿನಬಳಿಕೆ ವಸ್ತುಗಳ ಬೆಲೆ ಆಗಸದತ್ತ ಮುಖ ಮಾಡಿವೆ. ಈ ವೇಳೆ ಭಾರತದಲ್ಲಿ ಮಾರುಕಟ್ಟೆ ಸುಧಾರಿಸುತ್ತಿರುವುದು ನಿಜಕ್ಕೂ ಸಮಾಧಾನಾದ ಸಂಗತಿ. ಸರ್ಕಾರಿ ಸೌಮ್ಯದ ಕಂಪನಿಯೊಂದರ ಒಟ್ಟು ಮೌಲ್ಯವೇ ನೆರೆಯ ಮೂರು ರಾಷ್ಟ್ರಗಳ ಜಿಡಿಪಿಗಿಂತಲೂ ಹೆಚ್ಚಿದೆ.

ಭಾರತದ ಹಳೆಯ ವಿಮಾ ಕಂಪನಿಯ ಒಟ್ಟು ಆಸ್ತಿ ಮೌಲ್ಯ ಬಹಿರಂವಾಗಿದ್ದು, ಇದು ನೆರೆಯ ಶ್ರೀಲಂಕಾ, ನೇಪಾಳ, ಪಾಕಿಸ್ತಾನ ಜಿಡಿಪಿಗಿಂತಲೂ ಹೆಚ್ಚಾಗಿದೆ. ಕಂಪನಿಯ ವಾರ್ಷಿಕ ಆದಾಯ ವರ್ಷದಿಂದ ವರ್ಷಕ್ಕೆ ಶೇಕಡಾ 16.48 ಹೆಚ್ಚಾಗುತ್ತಿದೆ. ಸದ್ಯ ಎಲ್ ಐಸಿಯ ಒಟ್ಟು ಆಸ್ತಿ 616 ಶತಕೋಟಿ ಡಾಲರ್ ಆಗಿದೆ. ಅಂದರೆ ಭಾರತೀಯ ರೂಪಾಯಿಗಳಲ್ಲಿ 51,21,887 ಕೋಟಿ ರೂ. ಆಗಿದೆ.
ಕಳೆದ ಹಣಕಾಸು ವರ್ಷದಲ್ಲಿ ಈ ಕಂಪನಿಯ ಮೌಲ್ಯ 43,97,205 ಕೋಟಿ ರೂ. ಆಗಿತ್ತು. ಮಾರ್ಕೆಟ್ ಕ್ಯಾಪಿಟಲ್ ವ್ಯಾಲ್ಯೂ ದೃಷ್ಟಿಯಿಂದ ಇದು ದೇಶದ ಏಳನೇ ದೊಡ್ಡ ಕಂಪನಿಯಾಗಿದೆ. ಕಂಪನಿಯ ಪ್ರಸ್ತುತ ಮಾರುಕಟ್ಟೆ ಬಂಡವಾಳ 6.46 ಲಕ್ಷ ಕೋಟಿ ರೂ.

ನೆರೆಯ ರಾಷ್ಟ್ರಗಳ ಜಿಡಿಪಿ ಎಷ್ಟು?
ಎಲ್‌ಐಸಿಯ ಆಸ್ತಿಗಳು ಪಾಕಿಸ್ತಾನ, ನೇಪಾಳ ಮತ್ತು ಶ್ರೀಲಂಕಾದಂತಹ ನೆರೆಯ ರಾಷ್ಟ್ರಗಳ ಒಟ್ಟು ಜಿಡಿಪಿಗಿಂತ ಹೆಚ್ಚಾಗಿದೆ. ಈ ಮೂರು ದೇಶಗಳ ಒಟ್ಟು ಜಿಡಿಪಿಯನ್ನು ಕೂಡಿಸಿದರೂ ಸಹ ಅದು ಎಲ್‌ಐಸಿಯ ಜಿಡಿಪಿಗಿಂತ ಕಡಿಮೆ ಆಗುತ್ತದೆ. ಪಾಕಿಸ್ತಾನದ ಜಿಡಿಪಿ ಪ್ರಸ್ತುತ ಸುಮಾರು 338 ಬಿಲಿಯನ್ ಡಾಲರ್, ನೇಪಾಳದ GDP ಸುಮಾರು 44.18 ಶತಕೋಟಿ ಡಾಲರ್, ಮತ್ತು ಶ್ರೀಲಂಕಾದ GDP 74.85 ಬಿಲಿಯನ್ ಡಾಲರ್ ಆಗಿದೆ.
ಷೇರುದಾರರಿಗೆ ಉಡುಗೊರೆ
ಎಲ್‌ಐಸಿ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿದ್ದು, ತನ್ನ ಷೇರುದಾರರಿಗೆ ಲಾಭಾಂಶದ ಉಡುಗೊರೆಯನ್ನು ಸಹ ನೀಡಿದೆ. ಎಲ್‌ಐಸಿ ಪ್ರತಿ ಷೇರು ದಾರರಿಗೆ 4 ರೂಪಾಯಿ ಲಾಭಾಂಶವನ್ನು ನೀಡಿದೆ. ಈ ಕಂಪನಿಯ ದೊಡ್ಡ ಪಾಲು ಸರ್ಕಾರದ್ದಾಗಿದ್ದು, ಸರ್ಕಾರ 96.50 ಷೇರನ್ನು ಹೊಂದಿದೆ. ಈ ತ್ರೈಮಾಸಿಕದಲ್ಲಿ ಕಂಪನಿನ 3,662 ಕೋಟಿ ರೂ.ಗಳನ್ನು ಲಾಭವನ್ನು ಘೋಷಿಸಿದೆ.
ಮಾರ್ಚ್ ಅಂತ್ಯದ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭವು 2.50 ರಷ್ಟು ಏರಿಕೆಯಾಗಿದ್ದು, 13,762 ಕೋಟಿ ರೂ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು ರೂ.13,421 ಕೋಟಿ ಲಾಭ ಗಳಿಸಿತ್ತು.












Click it and Unblock the Notifications