LIC IPO; ಎಲ್ಐಸಿ ಐಪಿಒ ಬೆಲೆ 902 ರೂ. ಎಂದು ಘೋಷಣೆ
ನವದೆಹಲಿ, ಏಪ್ರಿಲ್ 27; ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಐಪಿಒ ಬೆಲೆಯನ್ನು ಘೋಷಣೆ ಮಾಡಲಾಗಿದೆ. 902 ರಿಂದ 949 ರೂ. ತನಕ ಐಪಿಒ ಬೆಲೆ ಇರಲಿದೆ ಎಂದು ಪ್ರಕಟಿಸಿದೆ.
ಬುಧವಾರ ಆರಂಭಿಕ ಸಾರ್ವಜನಿಕ ಷೇರು ಕೊಡುಗೆ (ಐಪಿಒ) ದರಗಳನ್ನು ಘೋಷಣೆ ಮಾಡಲಾಗಿದೆ. ಇದರ ಮೂಲಕ ಕೇಂದ್ರ ಸರ್ಕಾರ 21 ಸಾವಿರ ಕೋಟಿ ರೂ. ಬಂಡವಾಳ ಸಂಗ್ರಹ ಮಾಡುವ ಗುರಿ ಹೊಂದಿದೆ.
ಹೂಡಿಕೆದಾರರು ಮೇ 4 ರಿಂದ 9ರ ತನಕ ಷೇರು ಖರೀದಿ ಮಾಡಬಹುದಾಗಿದೆ. ಐಪಿಒ ಮೂಲಕ ಕೇಂದ್ರ ಸರ್ಕಾರ ಎಲ್‌ಐಸಿಯಲ್ಲಿ ತಾನು ಹೊಂದಿರುವ ಷೇರುಗಳ ಪೈಕಿ ಶೇ 3.5ರಷ್ಟನ್ನು ಮಾರಾಟ ಮಾಡಲಿದೆ. ಈ ಕುರಿತ ಪ್ರಕ್ರಿಯೆಗಳು ಹಲವು ತಿಂಗಳ ಹಿಂದೆಯೇ ಆರಂಭಗೊಂಡಿದ್ದವು.

ಆರಂಭಿಕ ಹೂಡಿಕೆದಾರರು ಮೇ 2 ರಿಂದ ಅರ್ಜಿ ಸಲ್ಲಿಸಬಹುದು. ಐಪಿಒ ಮೂಲಕ ಕೇಂದ್ರ ಸರ್ಕಾರ ಎಲ್‌ಐಸಿಯಲ್ಲಿ ತಾನು ಹೊಂದಿರುವ 22.13 ಕೋಟಿ ಷೇರುಗಳನ್ನು ಮಾರಲಿದೆ. 2.21 ಕೋಟಿ ಷೇರುಗಳು ಪಾಲಿಸಿ ಹೊಂದಿದವರಿಗಾಗಿ ಮೀಸಲಿಡಲಾಗಿದೆ. ನೌಕರರಿಗೆ 15 ಲಕ್ಷ ಷೇರುಗಳನ್ನು ಮೀಸಲಿಡಲಾಗಿದೆ.
ಈ ವರ್ಷದ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರ ಎಲ್‌ಐಸಿಯಲ್ಲಿನ ಷೇರುಗಳನ್ನು ಮಾರಾಟ ಮಾಡುವ ಉದ್ದೇಶವಿದೆ ಎಂದು ಹೇಳಿತ್ತು. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ ಕಡಡು ದಾಖಲೆಗಳನ್ನು ಸಲ್ಲಿಕೆ ಮಾಡಿತ್ತು.












Click it and Unblock the Notifications