ಬಾರ್ಬಿಕ್ಯೂ ನೇಷನ್‌ನ ಶೇಕಡಾ 10.76ರಷ್ಟು ಪಾಲನ್ನು ಖರೀದಿಸಲಿದೆ ಜ್ಯುಬಿಲೆಂಟ್ ಫುಡ್‌ವರ್ಕ್ಸ್

ನವದೆಹಲಿ, ಡಿಸೆಂಬರ್ 31: ಆಹಾರ ಸೇವಾ ಸಂಸ್ಥೆಯಾದ ಜ್ಯುಬಿಲೆಂಟ್ ಫುಡ್‌ವರ್ಕ್ಸ್ ಕಂಪನಿಯು ಬಾರ್ಬಿಕ್ಯೂ ನೇಷನ್‌ ಹಾಸ್ಪಿಟಾಲಿಟಿ ಲಿಮಿಟೆಡ್‌ನಲ್ಲಿ ಪಾಲನ್ನು ಪಡೆದುಕೊಳ್ಳಲು ಮುಂದಾಗಿದೆ.

ಭಾರತದಲ್ಲಿನ ಡೊಮಿನೊಸ್ ಪಿಜ್ಹಾ ಮತ್ತು ಡಂಕಿನ್ ಡೊನಟ್ಸ್ ಮಳಿಗೆಗಳ ನಿರ್ವಾಹಕರಾಗಿರುವ ಜ್ಯುಬಿಲೆಂಟ್ ಫುಡ್‌ವರ್ಕ್ಸ್, ಬಾರ್ಬೆಕ್ಯೂ ನೇಷನ್‌ನ ಶೇಕಡಾ 10.76ರಷ್ಟು ಪಾಲನ್ನು 92 ಕೋಟಿ ರೂಪಾಯಿಗೆ ಖರೀದಿಸಲು ಒಪ್ಪಿಕೊಂಡಿದೆ.

ಆಹಾರ ಸೇವಾ ಕಂಪನಿಯು ಶೇಕಡಾ 10.76ರಷ್ಟು ಪಾಲು ಅಥವಾ ಫೇಸ್ ವ್ಯಾಲ್ಯೂ 5 ರೂ. ಹೊಂದಿರುವ 36,50,794 ಷೇರುಗಳನ್ನು ಸುಮಾರು 92 ಕೋಟಿ ರೂ.ಗಳ ಮೊತ್ತಕ್ಕೆ ಖರೀದಿಸಲಿದ್ದು, ಎಲ್ಲಾ ನಗದು ವ್ಯವಹಾರವು ಜನವರಿ 25ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಸ್ಟಾಕ್‌ ಎಕ್ಸ್‌ಚೇಂಜ್‌ ಫೈಲಿಂಗ್‌ಗೆ ತಿಳಿಸಿದೆ.

Jubliant Foodworks To Buy 10.75 Percent Stake In Barbeque Nation

ನವೆಂಬರ್ 30, 2019 ರ ಹೊತ್ತಿಗೆ ಬಾರ್ಬಿಕ್ಯೂ ನೇಷನ್‌ ಭಾರತದ 73 ನಗರಗಳಲ್ಲಿ ಮತ್ತು ವಿದೇಶದಲ್ಲಿ 7 ರೆಸ್ಟೋರೆಂಟ್ ಸೇರಿದಂತೆ 138 ರೆಸ್ಟೋರೆಂಟ್‌ಗಳನ್ನು ನಿರ್ವಹಿಸುತ್ತಿದೆ. ಸ್ಟಾಕ್ ಫೈಲಿಂಗ್ ಪ್ರಕಾರ, ಮಾರ್ಚ್ 2019 ಕ್ಕೆ ಕೊನೆಗೊಂಡ ವರ್ಷದ ಆದಾಯವು ಶೇಕಡಾ 25.8 ರಷ್ಟು ಏರಿಕೆಯಾಗಿ 742.5 ಕೋಟಿ ರೂ. ತಲುಪಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+