ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4ಜಿ ಮೊಬೈಲ್ ವೇಗ -ಜೂನ್ ತಿಂಗಳಿನಲ್ಲೂ ಜಿಯೋ ಪ್ರಥಮ

By Mahesh
|
Google Oneindia Kannada News

ನವದೆಹಲಿ, ಜುಲೈ 4 : ರಿಲಯನ್ಸ್ ಜಿಯೋ, ಜೂನ್ ತಿಂಗಳಿನಲ್ಲಿ 18.8 ಮೆಗಾಬಿಟ್ ಪ್ರತಿ ಸೆಕೆಂಡ್ (ಎಂಬಿಪಿಎಸ್) ಸರಾಸರಿ ಡೌನ್ಲೋಡ್ ವೇಗ ದಾಖಲಿಸಿದೆ. ಈ ಮೂಲಕ ಮತ್ತೊಮ್ಮೆ ಅತಿವೇಗದ 4ಜಿ ಮೊಬೈಲ್ ಜಾಲವಾಗಿ ಹೊರಹೊಮ್ಮಿದೆ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ವರದಿ ಮಾಡಿದೆ.

ಜಿಯೋ ಜಾಲದ ಸರಾಸರಿ ಡೌನ್ಲೋಡ್ ವೇಗ ಮೇ ತಿಂಗಳಿನ 19.12 ಎಂಬಿಪಿಎಸ್ ಹೋಲಿಕೆಯಲ್ಲಿ ಈ ಬಾರಿ ಕೊಂಚ ಕಡಿಮೆಯಾಗಿದೆ. ಆದರೆ, ಇತರೆ ಸಂಸ್ಥೆಗಳ ವೇಗಕ್ಕೆ ಹೋಲಿಸಿದರೆ, ಅಗ್ರಸ್ಥಾನದಲ್ಲೇ ಮುಂದುವರೆದಿದೆ. ಇದರೊಂದಿಗೆ ಜಿಯೋ ಸತತವಾಗಿ ಕಳೆದ ಏಳು ತಿಂಗಳಿನಿಂದ ಭಾರತದ ಅತಿವೇಗದ 4ಜಿ ಮೊಬೈಲ್ ಜಾಲವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Jio tops 4G mobile speed chart in June: Trai

12.29 ಎಂಬಿಪಿಎಸ್ ಸರಾಸರಿ ಡೌನ್ಲೋಡ್ ವೇಗದೊಡನೆ ಈ ಬಾರಿಯ ಎರಡನೇ ಸ್ಥಾನವನ್ನು ವೋಡಾಫೋನ್ ಪಡೆದುಕೊಂಡಿದೆ. 11.68 ಎಂಬಿಪಿಎಸ್ ವೇಗದೊಡನೆ ಐಡಿಯಾ ಹಾಗೂ 8.23 ಎಂಬಿಪಿಎಸ್ ನೊಂದಿಗೆ ಭಾರ್ತಿ ಏರ್ಟೆಲ್ ಮೂರು-ನಾಲ್ಕನೇ ಸ್ಥಾನದಲ್ಲಿವೆ.

ವಿವಿಧ ಜಾಲಗಳಿಂದ ಮಾಹಿತಿ ಸಂಗ್ರಹಿಸುವ ಟ್ರಾಯ್ 'ಮೈಸ್ಪೀಡ್' ತಂತ್ರಾಂಶದ ನೆರವಿನಿಂದ ವಿಶ್ಲೇಷಿಸಿ ಸರಾಸರಿ ಡೌನ್ಲೋಡ್ ವೇಗವನ್ನು ಲೆಕ್ಕಹಾಕುತ್ತದೆ. ಇನ್ನುಳಿದ ಜಾಲಗಳ 4ಜಿ ಮೊಬೈಲ್ ವೇಗದ ಕುರಿತ ವಿವರಗಳು ಈ ಬಾರಿ ಪ್ರಕಟವಾಗಿಲ್ಲ.

3ಜಿ ಜಾಲಗಳ ಪೈಕಿ 5.65 ಎಂಬಿಪಿಎಸ್ ಡೌನ್ಲೋಡ್ ವೇಗದೊಡನೆ ವೋಡಾಫೋನ್ ಜೂನ್ ತಿಂಗಳ ಮೊದಲ ಸ್ಥಾನ ಪಡೆದಿದೆ. ನಂತರದ ಸ್ಥಾನಗಳಲ್ಲಿ 3.59 ಎಂಬಿಪಿಎಸ್ 3ಜಿ ಡೌನ್ಲೋಡ್ ವೇಗದೊಡನೆ ಐಡಿಯಾ, 3.37 ಎಂಬಿಪಿಎಸ್ ವೇಗದೊಡನೆ ಏರ್ಟೆಲ್, 2.36 ಎಂಬಿಪಿಎಸ್ನೊಡನೆ ಏರ್ಸೆಲ್ ಹಾಗೂ 1.59 ಎಂಬಿಪಿಎಸ್ನೊಡನೆ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಇವೆ. (ಪಿಟಿಐ)

English summary
Reliance Jio has again emerged as the fastest 4G mobile service provider with an average download speed of 18.8 megabit per second (mbps) in June, according to regulator Trai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X