ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾವಿ ದ್ವೀಪದಲ್ಲಿ ಮನೆ ಖರೀದಿ ಮಾಡಿದ ಅಮೆಜಾನ್ ಸಂಸ್ಥಾಪಕ

|
Google Oneindia Kannada News

ವಾಷಿಂಗ್ಟನ್‌, ನವೆಂಬರ್‌ 04: ಅಮೆಜಾನ್ ಸಂಸ್ಥಾಪಕ ಹಾಗೂ ಮಾಜಿ ಸಿಇಒ ಜೆಫ್ ಬೇಜೋಸ್ ಕಳೆದ ಕೆಲವು ವಾರಗಳಿಂದ ಸ್ಥಳೀಯ ಸಂಸ್ಥೆಗಳಿಗೆ ದೇಣಿಗೆಗಳನ್ನು ನೀಡುತ್ತಿದ್ದಾರೆ. ಈ ನಡುವೆ ಹವಾಯಿಯ ಎರಡನೇ ಅತೀ ದೊಡ್ಡ ದ್ವೀಪವಾದ ಮಾವಿ(Maui)ಯಲ್ಲಿ ಜೆಫ್ ಬೇಜೋಸ್ ನಿವಾಸವನ್ನು ಖರೀದಿಸಿದ್ದಾರೆ ಎಂದು ವರದಿಯು ತಿಳಿಸಿದೆ.

ಜೆಫ್ ಬೇಜೋಸ್ ಹಾಗೂ ಅವರ ಪ್ರೇಯಸಿ ಲಾರೆನ್ ಸ್ಯಾಂಚೆಜ್ ಇತ್ತೀಚೆಗೆ ಮಾವಿಯಲ್ಲಿ ದ್ವೀಪವನ್ನು ಖರೀದಿ ಮಾಡಿದ್ದಾರೆ. ಆದರೆ ಈ ನಿವಾಸವನ್ನು ಎಷ್ಟು ಮೊತ್ತದಲ್ಲಿ ಖರೀದಿಸಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಜೆಫ್ ಬೇಜೋಸ್ ನಿವಾಸವು ದ್ವೀಪದ ದಕ್ಷಿಣ ದಡದಲ್ಲಿರುವ ಪ್ರತ್ಯೇಕ ಪ್ರದೇಶದಲ್ಲಿದೆ ಹಾಗೂ ಲಾವಾ ಕ್ಷೇತ್ರಗಳ ಸಮೀಪದಲ್ಲಿದೆ ಎಂದು ಪಿಬಿಎನ್‌ ವರದಿ ಮಾಡಿದೆ.

ಬ್ಲೂ ಒರಿಜಿನ್‌ನ ಮೊದಲ ಮಾನವ ಬಾಹ್ಯಾಕಾಶ ಹಾರಾಟದತ್ತ ಚಿತ್ತ: ಏನಿದು ಪ್ರವಾಸ? ಇಲ್ಲಿದೆ ಮಾಹಿತಿಬ್ಲೂ ಒರಿಜಿನ್‌ನ ಮೊದಲ ಮಾನವ ಬಾಹ್ಯಾಕಾಶ ಹಾರಾಟದತ್ತ ಚಿತ್ತ: ಏನಿದು ಪ್ರವಾಸ? ಇಲ್ಲಿದೆ ಮಾಹಿತಿ

ಜೆಫ್ ಬೇಜೋಸ್ ಪ್ರಸ್ತುತ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಜೆಫ್ ಬೇಜೋಸ್ ಒಟ್ಟು ಆದಾಯವು 191 ಬಿಲಿಯನ್‌ ಡಾಲರ್‌ ಆಗಿದೆ ಎಂದು ಬ್ಲೂಮ್‌ಬರ್ಗ್‌ನ ಬಿಲಿಯನೇರ್ಸ್ ಇಂಡೆಕ್ಸ್ ಹೇಳುತ್ತದೆ. ಈ ವರ್ಷದ ಆರಂಭದಲ್ಲಿ ಅಮೆಜಾನ್‌ ಸಿಇಒ ಸ್ಥಾನದಿಂದ ಕೆಳಗಿಳಿದ ಅಮೆಜಾನ್ ಸಂಸ್ಥಾಪಕರು, ಯುಎಸ್‌ನಾದ್ಯಂತ ಹಲವಾರು ಇತರ ಆಸ್ತಿಗಳನ್ನು ಹೊಂದಿದ್ದಾರೆ. ಬೆವರ್ಲಿ ಹಿಲ್ಸ್‌ನಲ್ಲಿ 175 ಮಿಲಿಯನ್ ಡಾಲರ್‌ನ ಆಸ್ತಿ ಹಾಗೂ ವಾಷಿಂಗ್ಟನ್‌ ಡಿಸಿಯಲ್ಲಿ 23 ಮಿಲಿಯನ್ ಡಾಲರ್‌ ಮೌಲ್ಯದ ಬಂಗಲೆಯನ್ನು ಹೊಂದಿದ್ದಾರೆ.

 Jeff Bezos bought a new house on Maui after spending weeks donating to local charities: Report

"ಜೆಫ್‌ ಮತ್ತು ಲಾರೆನ್‌ ಮಾಯಿ ದ್ವೀಪ ಅ‌ಚ್ಚುಮೆಚ್ಚಿನ ಪ್ರದೇಶ. ದ್ವೀಪದಲ್ಲಿ ಮನೆ ಹೊಂದಿದ್ದಾರೆ. ಆಗಾಗ್ಗೆ ಅಲ್ಲಿಗೆ ಭೇಟಿ ನೀಡುತ್ತಾರೆ. ಸ್ಥಳೀಯ ಸಮುದಾಯಕ್ಕೆ ಬೆಂಬಲ ನೀಡಿ ದೇಣಿಗೆಯನ್ನು ನೀಡುತ್ತಿದ್ದಾರೆ," ಎಂದು ಈ ಜೋಡಿಗೆ ಹತ್ತಿರವಾಗಿರುವ ವ್ಯಕ್ತಿಯೊಬ್ಬರು ಪಿಬಿಎನ್‌ಗೆ ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿಯಲ್ಲಿ ಉಲ್ಲೇಖ ಮಾಡಿದೆ. ಇನ್ನು ಈ ಬಗ್ಗೆ ಯಾವುದೇ ಜೆಫ್‌ ಮತ್ತು ಲಾರೆನ್‌ ವಕ್ತಾರರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ವಿಶ್ವದ ಶ್ರೀಮಂತ ವ್ಯಕ್ತಿ ಜೆಫ್ ಬೇಜೋಸ್ ಜನಿಸಿದಾಗ, ಆತನ ತಾಯಿಯ ವಯಸ್ಸು 17ವಿಶ್ವದ ಶ್ರೀಮಂತ ವ್ಯಕ್ತಿ ಜೆಫ್ ಬೇಜೋಸ್ ಜನಿಸಿದಾಗ, ಆತನ ತಾಯಿಯ ವಯಸ್ಸು 17

ಹಲವಾರು ಸಂಸ್ಥೆಗಳಿಗೆ ದೇಣಿಗೆ ನೀಡುತ್ತಿರುವ ಜೆಫ್ ಬೇಜೋಸ್

ಕಳೆದ ಕೆಲವು ವಾರಗಳಿಂದ ಅಮೆಜಾನ್ ಸಂಸ್ಥಾಪಕ ಜೆಫ್ ಬೇಜೋಸ್ ಸ್ಥಳೀಯ ಸಂಸ್ಥೆಗಳಿಗೆ ಹಲವಾರು ಬಾರಿ ದೇಣಿಗೆಯನ್ನು ನೀಡಿದ್ದಾರೆ. ಈ ನಡುವೆ ಈಗ ಮಾವಿ ದ್ವೀಪದಲ್ಲಿ ಜೆಫ್ ಬೇಜೋಸ್ ಮನೆಯನ್ನು ಖರೀದಿ ಮಾಡಿರುವ ಬಗ್ಗೆ ವರದಿ ಆಗಿದೆ. ಆಗಸ್ಟ್‌ನಲ್ಲಿ, ಬೆಜೋಸ್ ಮಕ್ಕಳ ನ್ಯಾಯ ಕೇಂದ್ರದ ಸ್ನೇಹಿತರಿಗೆ ದೇಣಿಗೆ ನೀಡಿದರು. ಇದು ದುರುಪಯೋಗಕ್ಕೊಳಗಾದ ಅಥವಾ ನಿರ್ಲಕ್ಷ್ಯಕ್ಕೊಳಗಾದ ಮಕ್ಕಳಿಗೆ ಸಹಾಯ ಮಾಡುವ ಸಂಸ್ಥೆಯಾಗಿದೆ. ಬಳಿಕ ಅಮೆಜಾನ್ ಸಂಸ್ಥಾಪಕ ಜೆಫ್ ಬೇಜೋಸ್‌ ಮಾಯಿ ಫಾರ್ಮ್‌ಗೆ ದೇಣಿಗೆ ನೀಡಿದ್ದರು. ಇದು ದೌರ್ಜನ್ಯಕ್ಕೆ ಒಳಗಾಗಿರುವ ನಿರಾಶ್ರಿತರಾಗಿರುವ ಮಹಿಳೆ ಹಾಗೂ ಮಕ್ಕಳಿಗೆ ವಸತಿಯನ್ನು ನೀಡುವ ಕೇಂದ್ರವಾಗಿದೆ.

ಇನ್ನು ಸೆಪ್ಟೆಂಬರ್‌ನಲ್ಲಿ, ಬೆಜೋಸ್ ಹವಾಯಿ ಲ್ಯಾಂಡ್ ಟ್ರಸ್ಟ್‌ಗೆ ಮಾವಿಯ ನಾಲ್ಕು ಪ್ರದೇಶಗಳ ಸಂರಕ್ಷಣೆಗಾಗಿ ನೀಡಿದರು. ಬಳಿಕ ಮಾದಕ ವ್ಯಸನದ ಚಟಕ್ಕೆ ಗುರಿಯಾಗಿ ಅದರಿಂದ ಹೊರಬರುವ ಮಹಿಳೆಯರಿಗೆ ಚಿಕಿತ್ಸೆ ನೀಡುವ ಮಲಾಮಾ ಫ್ಯಾಮಿಲಿ ರಿಕವರಿ ಸೆಂಟರ್‌ಗೆ ದೇಣಿಗೆ ನೀಡಿದರು. ಇನ್ನು ಈ ಎಲ್ಲಾ ಸಂಸ್ಥೆಗೆ ಎಷ್ಟು ಹಣವನ್ನು ಬೆಜೋಸ್ ದೇಣಿಗೆಯಾಗಿ ನೀಡಿದ್ದಾರೆ ಎಂದು ಬಹಿರಂಗಪಡಿಸಿಲ್ಲ.

ಟೆಕ್ ನಾಯಕರಲ್ಲಿ ಬೆಳೆಯುತ್ತಿರುವ ಪ್ರವೃತ್ತಿಯ ಭಾಗವಾಗಿ ಬೆಜೋಸ್‌ನ ಆಸಕ್ತಿಯು ಈಗ ಹವಾಯಿಯಲ್ಲಿ ಇದೆ. 2012 ರಲ್ಲಿ, ಆರೇಕಲ್ ಕೋಫೌಂಡರ್ ಲ್ಯಾರಿ ಎಲಿಸನ್, ಲಾನೈ ದ್ವೀಪದ ಶೇಕಡ 98 ರಷ್ಟು ಭಾಗವನ್ನು ಖರೀದಿ ಮಾಡಿದ್ದಾರೆ. ಆ ಬಳಿಕ ಅದನ್ನು ತಮ್ಮ ಕಂಪನಿಯಾದ ಸೆನ್ಸೆ ಮೂಲಕ ಅಭಿವೃದ್ಧಿ ಪಡಿಸುವ ಕಾರ್ಯವನ್ನು ಮಾಡಿದ್ದಾರೆ. ಮೇ 2021 ರಲ್ಲಿ, ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಕೌವಾಯ್‌ನಲ್ಲಿ ಹೆಚ್ಚಿನ ಭೂ ಭಾಗವನ್ನು 53 ಮಿಲಿಯನ್ ಡಾಲರ್‌ ವೆಚ್ಚದಲ್ಲಿ ಖರೀದಿ ಮಾಡಿದ್ದರು.

(ಒನ್‌ಇಂಡಿಯಾ ಸುದ್ದಿ)

English summary
Jeff Bezos bought a new house on Maui after spending weeks donating to local charities: Report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X