• search

ಆಲಿಬಾಬಾ ಸಹಸ್ಥಾಪಕ ಜಾಕ್ ಮಾ ನಿವೃತ್ತಿ ಸದ್ಯಕ್ಕಿಲ್ಲ!

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಸೆಪ್ಟೆಂಬರ್ 09: ಇ ಕಾಮರ್ಸ್ ಕ್ಷೇತ್ರದ ದೈತ್ಯ ಸಂಸ್ಥೆ ಆಲಿಬಾಬಾ ಕಂಪೆನಿಯ ಸಹಸ್ಥಾಪಕ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷ ಮಾ ಯೂನ್ ಆಲಿಯಾಸ್ ಜಾಕ್ ಮಾ ಅವರು ತಮ್ಮ ನಿವೃತ್ತಿ ದಿನಾಂಕವನ್ನು ಮುಂದೂಡಿದ್ದಾರೆ.

  ತಮ್ಮ 54ನೇ ಹುಟ್ಟುಹಬ್ಬದ ದಿನ(ಸೆಪ್ಟಂಬರ್ 10) ದಂದು ನಿವೃತ್ತಿಯಾಗುವುದಾಗಿ ಘೋಷಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್​ ವರದಿ ಮಾಡಿದೆ. 1999ರಲ್ಲಿ ಸ್ಥಾಪನೆಗೊಂಡಿದ್ದ ಆಲಿಬಾಬಾ ಸಂಸ್ಥೆಯ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸುತ್ತಿರುವ ಜಾಕ್ ಮಾ ಅವರು ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

   Jack Ma says he isn’t about to retire from Alibaba but is planning a gradual succession

  ಚೀನಾದ ಅತಿದೊಡ್ಡ ಇ-ಕಾಮರ್ಸ್ ಸಂಸ್ಥೆ ಅಲಿಬಾಬಾ ಕಂಪನಿಯು ಇ ಕಾಮರ್ಸ್ ಕ್ಷೇತ್ರವಷ್ಟೇ ಅಲ್ಲದೆ ಆನ್​ಲೈನ್ ಪಾವತಿ, ಬ್ಯಾಂಕಿಂಗ್, ಮನರಂಜನೆ. ಕ್ಲೌಡ್ ಕಂಪ್ಯೂಟಿಂಗ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇತ್ತೀಚೆಗೆ ಮಾಧ್ಯಮ ಕ್ಷೇತ್ರದಲ್ಲು ಬಂಡವಾಳ ಹೂಡಿಕೆಗೆ ಮುಂದಾಗಿರುವ ಸುದ್ದಿ ಬಂದಿದೆ.

  ಸದ್ಯ ನಿವೃತ್ತಿಯ ಸುದ್ದಿ ಹೊರ ಬಿದ್ದಿದ್ದರೂ ಮುಂಬರುವ ದಿನಗಳಲ್ಲಿ ಕಂಪೆನಿಯ ನಿರ್ದೇಶಕರ ಮಂಡಳಿಯಲ್ಲಿ ಜಾಕ್ ಮಾ ಮುಂದುವರೆಯಲಿದ್ದಾರೆ ಹಾಗೆಯೇ ಕಂಪೆನಿಯ ಆಡಳಿತ ಮಂಡಳಿಗೆ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

  524 ಮಿಲಿಯನ್ ಗ್ರಾಹಕರನ್ನು ಹೊಂದಿರುವ ಅಲಿಬಾಬಾ ಕಂಪನಿಯು ಕಳೆದ ವರ್ಷ 40 ಬಿಲಿಯನ್ ಡಾಲರ್ ಆದಾಯ ಗಳಿಸಿಕೊಂಡಿತ್ತು. ಅಲ್ಲದೆ ಸಂಸ್ಥೆಯ ಇತ್ತೀಚಿನ ತ್ರೈಮಾಸಿಕ ಆದಾಯ 10 ಮಿಲಿಯನ್ ಡಾಲರ್ ಎಂದು ಇದೇ ವರದಿಯಲ್ಲಿ ಸೂಚಿಸಲಾಗಿದೆ. ನಿವೃತ್ತಿಯ ಸುದ್ದಿಗಳು ಪ್ರಕಟವಾಗುತ್ತಿದ್ದಂತೆ ಅಲಿಬಾಬಾ ಸಂಸ್ಥೆಯ ಷೇರುಗಳು ಶೇ.2ರಷ್ಟು ಕುಸಿತ ಕಂಡಿದೆ ಎನ್ನಲಾಗಿದೆ.

  ಇಂಗ್ಲಿಷ್ ಶಿಕ್ಷಕರಾಗಿದ್ದ ಜ್ಯಾಕ್ ಮಾ, ತನ್ನ ನಿವೃತ್ತಿ ಜೀವನವನ್ನು ಶಿಕ್ಷಣ ಮತ್ತು ಸಾಮಾಜಿಕ ಕೆಲಸಗಳಿಗೆ ಮೀಸಲಿಡುವುದಾಗಿ ಹೇಳಿದ್ದಾರೆ.

  ಭಾರತದ ಟೀ, ಸಾಂಬಾರು ಪದಾರ್ಥಗಳಿಗೆ ಚೀನಾದಲ್ಲಿ ಅತ್ಯಂತ ಹೆಚ್ಚಿನ ಬೇಡಿಕೆ ಇದೆ. ಮೋದಿ ಅವರ ಕಾಲದಲ್ಲಿ ಭಾರತ ಹಾಗೂ ಚೀನಾದ ನಡುವೆ ಹೆಚ್ಚು ಔದ್ಯೋಗಿಕ ಒಪ್ಪಂದಗಳಿಗೆ ಉತ್ತೇಜನ ನೀಡಲಿದೆ ಎಂದು ಮಾ ತಿಳಿಸಿದ್ದರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Reports of Jack Ma’s impending retirement are greatly exaggerated, it seems. Ma, the co-founder and executive chairman of Alibaba, has pushed back on claims that he is on the cusp of leaving the $420 billion Chinese e-commerce firm.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more