ಎಚ್ 1 ಬಿ ಎಫೆಕ್ಟ್: ಇನ್ಫಿ,ವಿಪ್ರೋ, ಟಿಸಿಎಸ್ ಷೇರು ಕುಸಿತ

Posted By:
Subscribe to Oneindia Kannada

ಬೆಂಗಳೂರು, ಜನವರಿ 31: ಅಮೆರಿಕದಲ್ಲಿ ಎಚ್ 1 ಬಿ ವೀಸಾ ಮಸೂದೆಗೆ ತಿದ್ದುಪಡಿ ತಂದಿರುವ ಸುದ್ದಿ ಹೊರ ಬರುತ್ತಿದ್ದಂತೆ ಭಾರತದಲ್ಲಿ ಐಟಿ ಕಂಪನಿಗಳ ಷೇರುಗಳು ಮಂಗಳವಾರ ನೆಲಕಚ್ಚಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವೀಸಾ ನೀತಿ, ಭಾರತ ಮೂಲದ ಮಾಹಿತಿ ಮತ್ತು ತಂತ್ರಜ್ಞಾನ ಸಂಸ್ಥೆಗಳಿಗೆ ಮಾರಕವಾಗಿ ಪರಿಣಮಿಸುವ ಸಾಧ್ಯತೆಯಿದೆ.

ಬಿಎಸ್ ಇ ನಲ್ಲಿ ಇನ್ಫೋಸಿಸ್ ಷೇರುಗಳು ಶೇ 4.5ರಷ್ಟು(ಕಳೆದ ಆರು ತಿಂಗಳಲ್ಲೇ ಗರಿಷ್ಠ ಕುಸಿತ), ಟಿಸಿಎಸ್ ಶೇ 5.5ರಷ್ಟು(ಕಳೆದ 27 ತಿಂಗಳಲ್ಲೇ ಗರಿಷ್ಠ ಕುಸಿತ), ಟೆಕ್ ಮಹೀಂದ್ರಾ ಶೇ 9.7ರಷ್ಟು(20 ತಿಂಗಳಲ್ಲೇ ಗರಿಷ್ಠ ಕುಸಿತ), ಎಚ್ ಸಿ ಎಲ್ ಟೆಕ್ನಾಲಜೀಸ್ ಲಿಮಿಟೆಡ್ ಶೇ 6.3ರಷ್ಟು ಕುಸಿತ (15ತಿಂಗಳಲ್ಲೇ ಅಧಿಕ ಕುಸಿತ) ಹಾಗೂ ವಿಪ್ರೋ ಶೇ 4.1ರಷ್ಟು ಇಳಿಕೆ(9 ತಿಂಗಳಲ್ಲೇ ಅಧಿಕ ಕುಸಿತ)

IT stocks plunge over H1B visa reform bill in USA

ಎಂಫಾಸಿಸ್ ಶೇ 3.9ರಷ್ಟು, ಜಿಯೋ ಮೆಟ್ರಿಕ್ ಶೇ 3.9ರಷ್ಟು, ಹೆಕ್ಸಾವೇರ್ ಟೆಕ್ನಾಲಜೀಸ್ ಶೇ 3.4ರಷ್ಟು, ಮೈಂಡ್ ಟ್ರೀ ಲಿಮಿಟೆಡ್ ಶೇ 3.3ರಷ್ಟು, ಕೆಪಿಐಟಿ ಟೆಕ್ನಾಲಜೀಸ್ ಲಿಮಿಟೆಡ್ ಶೇ 3.1ರಷ್ಟು ಕುಸಿತ ಕಂಡಿದೆ.[ಭಾರತಕ್ಕೆ ಎಚ್1 ಬಿ ವೀಸಾ ಬಿಸಿ ತಟ್ಟಿಸಿದ ಟ್ರಂಪ್]

ಎಚ್ 1 ಬಿ ವೀಸಾ ಹೊಂದಿರುವವರಿಗೆ ಸಿಗುವ ಕನಿಷ್ಠ ಸಂಬಳವನ್ನು 130,000 ಯುಎಸ್ ಡಾಲರ್ ಗೇರಿಸುವುದು ಪ್ರಮುಖ ಬದಲಾವಣೆಯಾಗಿದೆ. ಇದರಿಂದಾಗಿ ಭಾರತದಿಂದ ಕೌಶಲ್ಯವುಳ್ಳ ಅಭ್ಯರ್ಥಿಗಳನ್ನು ಅಯ್ಕೆ ಮಾಡಿ ಅಮೆರಿಕಕ್ಕೆ ಕಳಿಸುವ ಬದಲು ಅಲ್ಲಿನ ಪದವೀಧರರನ್ನೇ ಆಯ್ಕೆ ಮಾಡಲು ಮುಂದಾಗುವ ಪರಿಸ್ಥಿತಿ ನಿರ್ಮಿಸಲಾಗುತ್ತಿದೆ.

ಟ್ರಂಪ್ ಅವರ ವೀಸಾ ನೀತಿ ಬದಲಾವಣೆಯಿಂದಾಗಿ ಅಮೆರಿಕ ಮೂಲದ ಅಮೆಜಾನ್, ಆಪಲ್, ಮೈಕ್ರೋಸಾಫ್ಟ್ ಮುಂತಾದ ಸಂಸ್ಥೆಗಳು ಸಹಜವಾಗಿ ಸ್ಥಳೀಯರಿಗೆ ಆದ್ಯತೆ ನೀಡಲು ಮುಂದಾಗಬೇಕಿದೆ. ಇದರಿಂದಾಗಿ ಭಾರತದ ಇನ್ಫೋಸಿಸ್, ವಿಪ್ರೋ, ಟಿಸಿಎಸ್ ಮುಂತಾದ ಕಂಪನಿಗಳು ಬೇರೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Shares of information technology stocks on Tuesday slumped after Press Trust of India reported that the H1B visa reform bill introduced in the US House of Representatives.
Please Wait while comments are loading...