Get Updates
Get notified of breaking news, exclusive insights, and must-see stories!

300 ಎಕರೆ ಐಫೋನ್‌ ತಯಾರಿಕಾ ಸ್ಥಾವರಕ್ಕೆ ಸಿದ್ದತೆ: ಬೆಂಗಳೂರು ಬಳಿಯ ಯಾವ ಜಾಗದಲ್ಲಿ? ಎಷ್ಟು ಲಕ್ಷ ಜನಕ್ಕೆ ಉದ್ಯೋಗ? ತಿಳಿಯಿರಿ

ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸುವುದಕ್ಕೋಸ್ಕರ ಭಾರತದಲ್ಲಿ ಹೊಸ ಸ್ಥಾವರಗಳನ್ನು ಸ್ಥಾಪಿಸಲು Apple Inc. ಪಾಲುದಾರ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್ ಮಂದಾಗಿದೆ. ಭಾರತ ಒಂದರಲ್ಲೇ ಸುಮಾರು $700 ಮಿಲಿಯನ್ ( ₹57,39,09,00,000 ) ಹೂಡಿಕೆ ಮಾಡಲು ಯೋಜನೆ ರೂಪಿಸಿದೆ.

ಬೆಂಗಳೂರು, ಮಾರ್ಚ್‌ 03: ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸುವುದಕ್ಕೋಸ್ಕರ ಭಾರತದಲ್ಲಿ ಹೊಸ ಸ್ಥಾವರಗಳನ್ನು ಸ್ಥಾಪಿಸಲು Apple Inc. ಪಾಲುದಾರ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್ ಮಂದಾಗಿದೆ. ಭಾರತ ಒಂದರಲ್ಲೇ ಸುಮಾರು $700 ಮಿಲಿಯನ್ ( ₹57,39,09,00,000 ) ಹೂಡಿಕೆ ಮಾಡಲು ಯೋಜನೆ ರೂಪಿಸಿದೆ. ಈ ಯೋಜನೆಗಳಿಂದ ರಾಜ್ಯದಲ್ಲಿ ಮಹತ್ವದ ಬೆಳವಣಿಗೆಗಳಾಗಲಿವೆ ಎಂದು ವರದಿಯಾಗಿದೆ.

 ಅಮೆರಿಕ- ಚೀನಾ ಮುಸುಕಿನ ಗುದ್ದಾಟ

ಅಮೆರಿಕ- ಚೀನಾ ಮುಸುಕಿನ ಗುದ್ದಾಟ

ಅಮೆರಿಕ ಹಾಗೂ ಚೀನಾ ನಡುವೆ ಮುಸುಕಿನ ಗುದ್ದಾಟ ಏರ್ಪಟ್ಟಿದೆ. ವಾಷಿಂಗ್ಟನ್-ಬೀಜಿಂಗ್ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚೀನಾದಲ್ಲಿನ ಉತ್ಪಾದನಾ ಸ್ಥಾವರಗಳನ್ನು ವರ್ಗಾಯಿಸಲು ಫಾಕ್ಸ್‌ಕಾನ್ ಟೆಕ್ನಾಲಜಿ ಮುಂದಾಗಿದೆ ಎಂದು ವರದಿ ಹೇಳಿದೆ.

 ತೈವಾನ್‌ ಮೂಲದ ಫಾಕ್ಸ್‌ಕಾನ್ ಟೆಕ್ನಾಲಜಿ

ತೈವಾನ್‌ ಮೂಲದ ಫಾಕ್ಸ್‌ಕಾನ್ ಟೆಕ್ನಾಲಜಿ

ತೈವಾನ್‌ ಮೂಲದ ಫಾಕ್ಸ್‌ಕಾನ್ ಟೆಕ್ನಾಲಜಿ ತನ್ನ ಪ್ರಮುಖ ಘಟಕವಾದ 'ಹೊನ್ ಹೈ ಪ್ರೆಸಿಷನ್ ಇಂಡಸ್ಟ್ರಿ ಕಂಪನಿ'ಗೆ ಹೆಸರುವಾಸಿಯಾಗಿದೆ. ಬೆಂಗಳೂರಿನ ವಿಮಾನ ನಿಲ್ದಾಣದ ಸಮೀಪವಿರುವ 300 ಎಕರೆ ಪ್ರದೇಶದಲ್ಲಿ ಐಫೋನ್ ಭಾಗಗಳನ್ನು ತಯಾರಿಸಲು ಸ್ಥಾವರವನ್ನು ನಿರ್ಮಿಸಲು ಯೋಜಿಸಿದೆ ಎಂದು 'ಎನ್‌ಡಿಟಿವಿ' ವರದಿ ಮಾಡಿದೆ.

ಆಪಲ್‌ನ ಹ್ಯಾಂಡ್‌ಸೆಟ್‌ ತಯಾರಿಕೆ

ಆಪಲ್‌ನ ಹ್ಯಾಂಡ್‌ಸೆಟ್‌ ತಯಾರಿಕೆ

ಈ ಮಾಹಿತಿಯು ಸಾರ್ವಜನಿಕವಾಗಿ ಹೊರಬಂದಿಲ್ಲ. ಆದರೆ, ಕಂಪನಿಯು ಆಪಲ್‌ನ ಹ್ಯಾಂಡ್‌ಸೆಟ್‌ಗಳನ್ನು ತಯಾರಿಸಲು ಈ ಸ್ಥಾವರಗಳನ್ನು ಬಳಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಫಾಕ್ಸ್‌ಕಾನ್ ತನ್ನ ಹೊಸ ಎಲೆಕ್ಟ್ರಿಕ್ ವಾಹನ ವ್ಯಾಪಾರಕ್ಕಾಗಿ ಕೆಲವು ಭಾಗಗಳನ್ನು ತಯಾರಿಸಲೂ ಈ ಜಾಗವನ್ನು ಬಳಸಿಕೊಳ್ಳಬಹುದು ಎಂಬ ಮಾತುಗಳೂ ಕೇಳಿಬಂದಿವೆ.

 ಫಾಕ್ಸ್‌ಕಾನ್‌ನ ಅತಿ ದೊಡ್ಡ ಹೂಡಿಕೆ

ಫಾಕ್ಸ್‌ಕಾನ್‌ನ ಅತಿ ದೊಡ್ಡ ಹೂಡಿಕೆ

ಈ ಹೂಡಿಕೆಯು ಭಾರತದಲ್ಲಿ ಇಲ್ಲಿಯವರೆಗಿನ ಫಾಕ್ಸ್‌ಕಾನ್‌ನ ಅತಿ ದೊಡ್ಡ ಹೂಡಿಕೆಗಳಲ್ಲಿ ಒಂದಾಗಿದೆ. ಒಂದು ವೇಳೆ ಇದು ಸಂಭವಿಸಿದರೆ ಚೀನಾ ದೇಶಕ್ಕೆ ಭಾರೀ ನಷ್ಟವಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ಗ್ರಾಹಕ ಎಲೆಕ್ಟ್ರಾನಿಕ್ಸ್‌ನ ವಿಶ್ವದ ಅತಿದೊಡ್ಡ ಉತ್ಪಾದಕ ಎಂಬ ಹೆಗ್ಗಳಿಕೆಯನ್ನು ಚೀನಾ ಕಳೆದುಕೊಳ್ಳಲಿದೆ ಎಂಬ ಮಾತುಗಳು ಮುನ್ನೆಲೆಗೆ ಬಂದಿವೆ. ಆಪಲ್ ಮತ್ತು ಇತರ US ಬ್ರ್ಯಾಂಡ್‌ಗಳು, ಭಾರತ ಮತ್ತು ವಿಯೆಟ್ನಾಂನಂತಹ ಪರ್ಯಾಯ ಸ್ಥಳಗಳನ್ನು ಹುಡುಕಲು ಚೀನೀ ಮೂಲದ ಪೂರೈಕೆದಾರರ ಮೇಲೆ ಒತ್ತಡ ಹೇರುತ್ತಿವೆ ಎಂದು ತಿಳಿದುಬಂದಿದೆ.

 ಸುಮಾರು 1,00,000 ಉದ್ಯೋಗ ಸೃಷ್ಟಿ

ಸುಮಾರು 1,00,000 ಉದ್ಯೋಗ ಸೃಷ್ಟಿ

ಭಾರತದಲ್ಲಿನ ಹೊಸ ಉತ್ಪಾದನಾ ಸ್ಥಾವರವು ಸುಮಾರು 1,00,000 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ. ಚೀನಾ ನಗರವಾದ ಝೆಂಗ್‌ಝೌದಲ್ಲಿನ ಕಂಪನಿಯ ಸ್ಥಾವರವು ಸುಮಾರು 200,000 ಉದ್ಯೋಗಿಗಳನ್ನು ಹೊಂದಿದೆ. ಗರಿಷ್ಠ ಉತ್ಪಾದನೆಯ ಅವಧಿಯಲ್ಲಿ ಆ ಸಂಖ್ಯೆಯು ಹೆಚ್ಚಾಗುತ್ತದೆ.

 ಚೀನಾದಲ್ಲಿ ಕುಸಿದ ಉತ್ಪಾದನೆ

ಚೀನಾದಲ್ಲಿ ಕುಸಿದ ಉತ್ಪಾದನೆ

ಕೋವಿಡ್-ಸಂಬಂಧಿತ ಅಡೆತಡೆಗಳಿಂದಾಗಿ ಝೆಂಗ್‌ಝೌ ಸ್ಥಾವರದಲ್ಲಿನ ಉತ್ಪಾದನೆಯು ವರ್ಷಾಂತ್ಯದ ರಜಾದಿನಗಳಿಗಿಂತ ಮುಂಚಿತವಾಗಿ ಕುಸಿಯಿತು. ಆಪಲ್ ತನ್ನ ಚೀನಾ-ಅವಲಂಬಿತ ಪೂರೈಕೆ ಸರಪಳಿಯನ್ನು ಮರು-ಪರಿಶೀಲಿಸಲು ಉತ್ತೇಜಿಸಿತು. ಫಾಕ್ಸ್‌ಕಾನ್‌ನ ನಿರ್ಧಾರವು ಇತ್ತೀಚಿನ ಕ್ರಮವಾಗಿದೆ.

 ಫಾಕ್ಸ್‌ಕಾನ್‌ ಹೊಸ ಯೋಜನೆ

ಫಾಕ್ಸ್‌ಕಾನ್‌ ಹೊಸ ಯೋಜನೆ

ಫಾಕ್ಸ್‌ಕಾನ್ ಹೂಡಿಕೆ ಮತ್ತು ಯೋಜನೆಯ ವಿವರಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿರುವುದರಿಂದ ಯೋಜನೆಗಳು ಇನ್ನೂ ಬದಲಾಗಬಹುದು ಎಂದು ಹೇಳಲಾಗುತ್ತಿದೆ. ಫಾಕ್ಸ್‌ಕಾನ್‌ ಹೊಸ ಯೋಜನೆಗಳನ್ನು ರೂಪಿಸುತ್ತಿದೆಯೇ? ಅಥವಾ, ಚೀನಾದಿಂದ ಸ್ಥಾವರಗಳನ್ನು ವರ್ಗಾಯಿಸುತ್ತಿದೆಯೇ ಎಂಬುದು ಅಸ್ಪಷ್ಟವಾಗಿದೆ ಎಂದೂ 'ಎನ್‌ಡಿಟಿವಿ' ವರದಿ ಮಾಡಿದೆ.

 ತೆಲಂಗಾಣದಲ್ಲಿ ಮತ್ತೊಂದು ಉತ್ಪಾದನಾ ಯೋಜನೆ

ತೆಲಂಗಾಣದಲ್ಲಿ ಮತ್ತೊಂದು ಉತ್ಪಾದನಾ ಯೋಜನೆ

ಈ ಕುರಿತು ಆಪಲ್ ಯಾವುದೇ ಪ್ರಕ್ರಿಯೆ ನೀಡಲು ನಿರಾಕರಿಸಿದೆ. ಕರ್ನಾಟಕ ಸರ್ಕಾರ ಕೂಡ ಯಾವುದೇ ಮಾಹಿತಿ ನೀಡಿಲ್ಲ. ಭಾರತದಲ್ಲಿ ಪ್ರವಾಸದಲ್ಲಿರುವ ಫಾಕ್ಸ್‌ಕಾನ್‌ ಅಧ್ಯಕ್ಷ ಲಿಯು ತೆಲಂಗಾಣದಲ್ಲಿ ಮತ್ತೊಂದು ಉತ್ಪಾದನಾ ಯೋಜನೆಗೆ ಬದ್ಧರಾಗಿದ್ದಾರೆ.

 ತಮಿಳುನಾಡಿನಲ್ಲಿ ಸ್ಥಾವರ

ತಮಿಳುನಾಡಿನಲ್ಲಿ ಸ್ಥಾವರ

ಕಳೆದ ವರ್ಷ ತಮಿಳುನಾಡಿನಲ್ಲಿ ಹೊಸ ಐಫೋನ್‌ಗಳನ್ನು ತಯಾರಿಸಲು ಫಾಕ್ಸ್‌ಕಾನ್‌ ಸ್ಥಾವರ ಸ್ಥಾಪಿಸಿದೆ. ಆಪಲ್ ಪೂರೈಕೆದಾರರಿಗೆ ಭಾರತವು ಆರ್ಥಿಕ ಪ್ರೋತ್ಸಾಹವನ್ನು ನೀಡಿದೆ. ಸಣ್ಣ ಪ್ರತಿಸ್ಪರ್ಧಿಗಳಾದ Wistron Corp. ಮತ್ತು Pegatron Corp. ಕೂಡ ಭಾರತದಲ್ಲಿ ಸ್ಥಾವರಗಳನ್ನು ಸ್ಥಾಪಿಸಲು ಮುಂದೆ ಬಂದಿವೆ. Jabil Inc. ನಂತಹ ಪೂರೈಕೆದಾರರು ಸ್ಥಳೀಯವಾಗಿ AirPods ಗಾಗಿ ಘಟಕಗಳನ್ನು ಸ್ಥಾಪಿಸಲು ಮುಂದಾಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+