ಐಪೋನ್ 12ಗೆ ನಿಷೇಧ ಹೇರಿ ಆಪಲ್ ಕಂಪೆನಿಗೆ ದಂಡ, ಯಾಕೆ?
ಬ್ರೇಜಿಲ್, ಸೆಪ್ಟೆಂಬರ್ 07: ಫೋನ್ ಚಾರ್ಜರ್‌ಗಳನ್ನು ನೀಡದಿದ್ದಕ್ಕಾಗಿ ಆಪಲ್ ಐಫೋನ್‌ಗಳನ್ನು ನಿಷೇಧಿಸಲು ಬ್ರೆಜಿಲ್ ಸರ್ಕಾರ ನಿರ್ಧರಿಸಿದೆ.
ಚಾರ್ಜರ್‌ಗಳೊಂದಿಗೆ ಪ್ಯಾಕ್ ಮಾಡದ ಐಫೋನ್‌ಗಳ ಸ್ಥಳೀಯ ಮಾರಾಟವನ್ನು ದೇಶವು ಸ್ಥಗಿತಗೊಳಿಸಿದೆ ಎಂದು ದಿ ವರ್ಜ್ ವರದಿ ಮಾಡಿದೆ. ಕಾನೂನು ಸಚಿವಾಲಯವು ಆಪಲ್‌ಗೆ 12.275 ಮಿಲಿಯನ್ ರಿಯಾಸ್ ($2.38 ಮಿಲಿಯನ್) ದಂಡವನ್ನು ವಿಧಿಸಿದೆ. ಐಫೋನ್ 12 ಮತ್ತು ಹೊಸ ಮಾದರಿಗಳ ಮಾರಾಟವನ್ನು ನಿರ್ಬಂಧಿಸಲು ಕಂಪನಿಯನ್ನು ಕೇಳಿದೆ.
ಆದರೆ ಮತ್ತೊಂದೆಡೆ Apple Inc ಬ್ರೆಜಿಲ್ ಸರ್ಕಾರದ ಆದೇಶವನ್ನು ಪ್ರಶ್ನಿಸಿದೆ. ಈ ವಿಷಯದಲ್ಲಿ ನಾವು ಈಗಾಗಲೇ ಬ್ರೆಜಿಲ್‌ನಲ್ಲಿ ಹಲವಾರು ನ್ಯಾಯಾಲಯದ ತೀರ್ಪುಗಳನ್ನು ಗೆದ್ದಿದ್ದೇವೆ. ನಮ್ಮ ಗ್ರಾಹಕರು ತಮ್ಮ ಸಾಧನಗಳನ್ನು ಚಾರ್ಜ್ ಮಾಡಲು ಮತ್ತು ಸಂಪರ್ಕಿಸಲು ವಿವಿಧ ಆಯ್ಕೆಗಳ ಬಗ್ಗೆ ತಿಳಿದಿದ್ದಾರೆ ಎಂದು ನಮಗೆ ವಿಶ್ವಾಸವಿದೆ ಎಂದು ಟೆಕ್ ದೈತ್ಯ ಹೇಳಿದೆ.

ಆಪಲ್ ಇಂಕ್ ಐಪೋನ್ 12 ಬಿಡುಗಡೆಯೊಂದಿಗೆ ಚಾರ್ಜರ್‌ಗಳ ಮಾರಾಟವನ್ನು ನಿಲ್ಲಿಸಿದೆ. ಟೆಕ್ ದೈತ್ಯ ಐಪೋನ್ 14 ಸರಣಿಯನ್ನು ಅನಾವರಣಗೊಳಿಸುವ ನಿರೀಕ್ಷೆಯಿರುವ ಆಪ್‌ಲ್‌ನ ಫಾರ್ ಔಟ್ ಕಾರ್ಯಕ್ರಮಕ್ಕೂ ನಿಷೇಧ ಅನ್ವಯವಾಗಲಿದೆ ಎನ್ನಲಾಗಿದೆ. ಆಪಲ್ ತನ್ನ 'ಫಾರ್ ಔಟ್' ಕಾರ್ಯಕ್ರಮದ ಭಾಗವಾಗಿ ತನ್ನ ಐಫೋನ್ 14 ಸರಣಿಯ ಕಾರ್ಯಕ್ರಮ ಅನ್ನು ಪ್ರಾರಂಭಿಸಲು ಸಿದ್ಧವಾಗಿದೆ.

ಕೋವಿಡ್ ಸಾಂಕ್ರಾಮಿಕ ರೋಗದ ಪ್ರಾರಂಭದ ನಂತರ ಆಪಲ್‌ನ ಮೊದಲ ಪ್ರಮುಖ ಬಹಿರಂಗ ಸಭೆ ಇದಾಗಿದೆ. ಕಳೆದ ಎರಡು ವರ್ಷಗಳಲ್ಲಿ ಲೈವ್‌ಸ್ಟ್ರೀಮ್ ಮಾಡಿ ಹೆಚ್ಚಿನ ಆಪಲ್ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಅದ್ಯಾಗೂ ಹೊಸ ಕಾರ್ಯಕ್ರಮವನ್ನು ಬಳಕೆದಾರರು ಆಪಲ್‌ನ ಅಧಿಕೃತ ವೆಬ್‌ಸೈಟ್ ಮೂಲಕ ಮತ್ತು ಆಪಲ್‌ನ ಅಧಿಕೃತ ಯೂಟ್ಯೂಬ್ ಚಾನೆಲ್ ಮೂಲಕ ಕಾರ್ಯಕ್ರಮವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.












Click it and Unblock the Notifications