ಡಿಜಿಟಲ್ ಮೀಡಿಯಾದಲ್ಲಿ ಜಾಹೀರಾತು ನೀಡಿಕೆ ಇನ್ನಷ್ಟು ಸುಲಭ

ಬೆಂಗಳೂರು, ಜ. 20: ಡಿಜಿಟಲ್ ಮೀಡಿಯಾದಲ್ಲಿ ಹೆಸರು ಮಾಡಿರುವ ಐನುಕ್ಸು ಮತ್ತೊಂದು ಹೊಸ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ವಾರ ಜಾಹೀರಾತು ವಿಭಾಗದಲ್ಲಿ ಹೊಸ ಸಂಚಲನ ಮೂಡಿಸುವ ಸಲುವಾಗಿ 'ಆಡ್ ಜೀಬ್ರಾ' ಎಂಬ ವಿಧಾನವನ್ನು ಜಾರಿ ಮಾಡಿದೆ. ನಿಮ್ಮ ಯಾವುದೇ ಜಾಹೀರಾತನ್ನು ಬಹು ಸುಲಭವಾಗಿ ಜನರಿಗೆ ತಲುಪಿಸುವ ಸಾಧ್ಯತೆಯನ್ನು ಇದು ಒದಗಿಸಿ ಕೊಡುತ್ತಿದೆ.

'ಗೊ ಪ್ರೊಗ್ರಾಮಿಟಿಕ್' ಎಂಬ ಹೆಸರಿನಲ್ಲಿ ಆಡ್ ಜೀಬ್ರಾ ಕಾರ್ಯನಿರ್ವಹಿಸುತ್ತದೆ. ಸ್ಲೈಡರ್, ಚಿತ್ರಗಳು, ವಿಡಿಯೋ ಯಾವುದರ ಮೂಲಕ ಬೇಕಾದರೂ ಜಾಹೀರಾತು ನೀಡಲು ಅವಕಾಶ ಕಲ್ಪಿಸಿಕೊಡುತ್ತಿದೆ. ವೀಕ್ಷಕರ ನಿರೀಕ್ಷೆ ಮತ್ತು ಪ್ರೀತಿಗೆ ಪಾತ್ರವಾಗುವಂತೆ ಜಾಹೀರಾತು ಹಂಚಿಕೆ ಮಾಡುತ್ತದೆ.

advertisement

ಕಡಿಮೆ ದರದಲ್ಲಿ ಅತ್ಯುತ್ತಮ ಗುಣಮಟ್ಟದ ಜಾಹಿರಾತು ಸೌಲಭಭ್ಯ ಪಡೆಯಲು ಐನುಕ್ಸು ನೆರವಾಗಲಿದೆ. ನಿಮ್ಮ ವಸ್ತುಗಳಿಗೆ ಒಂದು ಸಮರ್ಪಕ ಮತ್ತು ಸೂಕ್ತ ವೇದಿಕೆಯನ್ನು ಆಡ್ ಜೀವಬ್ರಾ ಕಲ್ಪಿಸಿಕೊಡುತ್ತಿದೆ. ಇಲ್ಲಿ ವ್ಯವಹಾರಗಳಿ ಪಾರದರ್ಶಕ ಮತ್ತು ಮುಕ್ತವಾಗಿರುತ್ತದೆ.[ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ]

ಜನರಿಗೆ ಕೆಲವೊಮ್ಮೆ ಜಾಹಿರಾತಿನ ಮೂಲ ಹುಡುಕಲೇ ಸಾಧ್ಯವಾಗುವುದಿಲ್ಲ. ಆದರತೆ ಇಲ್ಲಿ ಅಂಥ ಸಮಸ್ಯೆಗಳು ಎದುರಾಗುವುದಿಲ್ಲ. ವೀಕ್ಷಕರನ್ನು ಗಮನದಲ್ಲಿರಿಸಿಕೊಂಡು ಸೈಟ್ ಅಭಿವೃದ್ಧಿ ಪಡಿಸಲಾಗಿದ್ದು ಖಂಡಿತ ಜನರಿಗೆ ಇಷ್ಟವಾಗಲಿದೆ ಎಂದು ಐನುಕ್ಸ್ ಪ್ರೊಡೆಕ್ಟ್ ವಿಭಾಗದ ನಿರ್ದೇಶಕ ಶಶಿಕಾಂತ್ ತಿಳಿಸುತ್ತಾರೆ.

ಸಂಸ್ಥೆಯ ಮುಖ್ಯ ಕಚೇರಿ ಪುಣೆಯಲ್ಲಿದೆ, ನೆಟ್ ಕೋರ್ ಸೆಲ್ಯೂಷನ್ ಮತ್ತು ಗ್ರೇನಿಯಮ್ ಟೆಕ್ನಾಲಜಿ ಬೆಂಬಲದಲ್ಲಿ ಮುಂದುವರಿಯಲು ಸಿದ್ಧತೆ ಮಾಡಿಕೊಂಡಿದೆ. ಎರಡು ವರ್ಷದ ಅವಧಿಯಲ್ಲಿ 100 ಕ್ಕೂ ಹೆಚ್ಚು ಖಾಯಂ ಗ್ರಾಹಕರನ್ನು ಹೊಂದಲು ತಯಾರಿ ನಡೆಸಿದೆ. ವಿದೇಶದ ಹಲವು ಕಡೆ ಯೋಜನೆ ವಿಸ್ತರಿಸಲಾಗುವುದು ಎಂದು ಶಶಿಕಾಂತ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+