ಇನ್ಫಿ ಷೇರು ಹಿಂತೆಗೆತ, ಪ್ರತಿ ಷೇರಿಗೆ 1,150 ರುಪಾಯಿ ನಿಗದಿ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 19: ಇನ್ಫೋಸಿಸ್ ಷೇರು ಹಿಂತೆಗೆತಕ್ಕೆ ಸಂಬಂಧಿಸಿದಂತೆ ಶನಿವಾರ ಮಹತ್ವದ ಘೋಷಣೆ ಹೊರಬಿದ್ದಿದೆ. ಕಂಪನಿಯ ಸಿಇಒ ಹಾಗೂ ಎಂ.ಡಿ. ಸ್ಥಾನಕ್ಕೆ ವಿಶಾಲ್ ಸಿಕ್ಕಾ ರಾಜೀನಾಮೆ ನೀಡಿದ ನಂತರ ಹದಿಮೂರು ಸಾವಿರ ಕೋಟಿ ಮೊತ್ತದ ಷೇರು ಹಿಂಪಡೆಯುವ ನಿರ್ಧಾರಕ್ಕೆ ಸಂಬಂಧಿಸಿದಂತೆ ಮಾಹಿತಿ ಹೊರಬಿದ್ದಿದೆ.

ಕೊಚ್ಚಿ ಹೋದ ಇನ್ಫಿ ಷೇರು ಮೌಲ್ಯದ 30 ಸಾವಿರ ಕೋಟಿ, ಇದು ಸಿಕ್ಕಾ ಎಫೆಕ್ಟ್

11,30,43,478 ಷೇರುಗಳನ್ನು ಹಿಂಪಡೆಯಲಿರುವ ಕಂಪನಿ, ಅದಕ್ಕಾಗಿ ಪ್ರತಿ ಷೇರಿಗೆ 1,150 ರುಪಾಯಿ ನೀಡಲಿದೆ. ಶುಕ್ರವಾರ ಮಾರುಕಟ್ಟೆ ಮುಕ್ತಾಯದ ವೇಳೆಗೆ ಇನ್ಫೋಸಿಸ್ ನ ಷೇರು ದರ ರು. 923.10 ಇದೆ. ಆ ಮೊತ್ತಕ್ಕಿಂತ ಶೇ ಇಪ್ಪತ್ತೈದರಷ್ಟು ಹೆಚ್ಚು ಮೊತ್ತವನ್ನು ಹಿಂತೆಗೆತಕ್ಕೆ ನಿಗದಿ ಮಾಡಲಾಗಿದೆ.

Infosys share buyback at Rs 1150 per share

ಕಳೆದ ಏಪ್ರಿಲ್ ನಲ್ಲಿ ಈ ಬಗ್ಗೆ ಇನ್ಫೋಸಿಸ್ ಘೋಷಣೆ ಮಾಡಿತ್ತು. ಡಿವಿಡೆಂಡ್ ಹಾಗೂ ಷೇರು ಹಿಂತೆಗೆತದ ಮೂಲಕ ಹದಿಮೂರು ಸಾವಿರ ಕೋಟಿ ನೀಡುವುದಾಗಿ ತಿಳಿಸಿತ್ತು. ಸದ್ಯಕ್ಕೆ ಕಂಪನಿ ಬಳಿ 6.1 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ಹೆಚ್ಚು ನಗದು ಇದೆ. ತಜ್ಞರು ಅಭಿಪ್ರಾಯ ಪಡುವ ಪ್ರಕಾರ, ಷೇರು ಹಿಂತೆಗೆತದ ನಂತರ ಈ ನಗದ ಪ್ರಮಾಣ ಮೂರನೇ ಒಂದು ಭಾಗದಷ್ಟು ಕಡಿಮೆ ಆಗುತ್ತದೆ.

ನಾರಾಯಣ ಮೂರ್ತಿ ಕಿರಿಕಿರಿಯಿಂದಲೇ ಸಿಕ್ಕಾ ರಾಜಿನಾಮೆ: ಇನ್ಫೋಸಿಸ್

ಇತ್ತೀಚೆಗೆ ಟಿಸಿಎಸ್ ಕಂಪನಿ 16 ಸಾವಿರ ಕೋಟಿ, ವಿಪ್ರೋ 11 ಸಾವಿರ ಕೋಟಿ ಹಾಗೂ ಎಚ್ ಸಿಎಲ್ ಟೆಕ್ನಾಲಜಿ 3,500 ಕೋಟಿ ಮೌಲ್ಯದ ಷೇರು ಹಿಂಪಡೆಯುವ ನಿರ್ಧಾರ ಪ್ರಕಟಿಸಿದ್ದವು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Infosys company would buy back 11 crore shares aggregating up to 4.92 per cent of the paid-up equity capital at a price of Rs 1,150.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X