ಇನ್ಫೋಸಿಸ್ ಗೆ ವರ್ಷಾರಂಭದಲ್ಲಿ ನಿರೀಕ್ಷಿತ ಲಾಭ
ಬೆಂಗಳೂರು, ಜ.10: ದೇಶದ ಎರಡನೆ ಭಾರೀ ಉದ್ಯಮ ಕಂಪೆನಿಯಾಗಿರುವ ಇನ್ಫೋಸಿಸ್ ಡಿಸೆಂಬರ್ 31ಕ್ಕೆ ಅಂತ್ಯಗೊಂಡ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಒಟ್ಟು ಲಾಭಾಂಶದಲ್ಲಿ 2,875 ಕೋಟಿ ರೂ. ಹೆಚ್ಚಳ ಕಂಡಿದೆ ತನ್ನ ಆದಾಯವನ್ನು ಶೇ.21.4ರಷ್ಟು ಹೆಚ್ಚಿಸಿಕೊಂಡಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಡಿ.ಶಿಬುಲಾಲ್ ಶುಕ್ರವಾರ ಪ್ರಕಟಿಸಿದ್ದಾರೆ.
ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪೆನಿಯ 2,369 ಕೋಟಿ ರು ಗಳಿಸಿತ್ತು. ಮಾರುಕಟ್ಟೆ ತಜ್ಞರ ನಿರೀಕ್ಷೆ ಮೀರಿ ಲಾಭ ಗಳಿಸಿದೆ, ಈ ತ್ರೈಮಾಸಿಕದಲ್ಲಿ 2700 ಕೋಟಿ ರು ಗಳಿಕೆ ಮಾತ್ರ ಸಾಧ್ಯ ಎಂದು ಮಾರುಕಟ್ಟೆ ನಿಪುಣರು ಅಂದಾಜಿಸಿದ್ದರು. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ 13,026 ಕೋಟಿ ರು ಆದಾಯ ಗಳಿಕೆಯಾಗಿದೆ. ಕಳೆದ ಬಾರಿ ಈ ಅವಧಿಯಲ್ಲಿ 10,424 ಕೋಟಿ ರು ಇತ್ತು.

ತೆರಿಗೆ, ಬಡ್ಡಿ ಕಡಿತಕ್ಕೂ ಗಳಿಸಿರುವ ಆದಾಯವೇ 3259 ಕೋಟಿ ರು ದಾಟಿದೆ. EBIT ಮಾರ್ಜಿನ್ ಶೇ 25ರಷ್ಟಿದ್ದು, ಆರೋಗ್ಯಕರ ಬೆಳವಣಿಗೆಯಾಗಿದೆ. ಡಾಲರ್ ಆದಾಯದಲ್ಲಿ 2100 ಮಿಲಿಯನ್ ಡಾಲರ್ ಮಾತ್ರ ನಿರೀಕ್ಷೆಗಿಂತ ಸ್ವಲ್ಪ ಕೆಳಗಿದೆ. ಪ್ರಸಕ್ತ ಆರ್ಥಿಕ ವರ್ಷ ಡಾಲರ್ ಆದಾಯ ಸೂಚಿ ಶೇ11.5 ರಿಂದ ಶೇ 12ಕ್ಕೇರಿದೆ.
ಈ ತ್ರೈಮಾಸಿಕ ಅವಧಿಯಲ್ಲಿ ಇನ್ಫೋಸಿಸ್ ಸಂಸ್ಥೆ ಹಾಗೂ ಅದರ ಅಂಗ ಸಂಸ್ಥೆಗಳು ಒಟ್ಟು 54 ಗ್ರಾಹಕರನ್ನು ಸೆಳೆಯುವಲ್ಲಿ ಸಫಲವಾಗಿದೆ. ಒಟ್ಟಾರೆ 6682 ಉದ್ಯೋಗಿಗಳ ಸೇರ್ಪಡೆಯಾಗಿದೆ. ಡಿಸೆಂಬರ್ 31,2013ರ ಎಣಿಕೆಯಂತೆ ಒಟ್ಟಾರೆ 158,404 ಉದ್ಯೋಗಿಗಳು ಸಂಸ್ಥೆಯಲ್ಲಿದ್ದಾರೆ.
ಈ ನೂತನ ವರ್ಷದಲ್ಲಿ ಕಂಪೆನಿಯ ಆದಾಯವು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಸಂಸ್ಥೆ ಮುಖ್ಯ ಆರ್ಥಿಕ ಅಧಿಕಾರಿ ರಾಜೀವ್ ಬನ್ಸಾಲ್ ಹೇಳಿದ್ದಾರೆ.












Click it and Unblock the Notifications