N.R.Narayana Murthy: 70 ಗಂಟೆ ಇನ್ಫೋಸಿಸ್ ನಾರಾಯಣ ಮೂರ್ತಿಯವರ ವಿವಾದಾತ್ಮಕ ಹೇಳಿಕೆಗಳು
N.R.Narayana Murthy: ಇನ್ಫೋಸಿನ್ ಸಂಸ್ಥೆ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಅದರಲ್ಲೂ ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಚ್ಚು. ಹಾಗಾದರೆ ಅವರು ಯಾವೆಲ್ಲ ವಿವಾದಾತ್ಮಕ ಹೇಳಿಕೆಗಳನ್ನು ಯಾವಾ ನೀಡಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಇನ್ಫೋಸಿಸ್ ನಾರಾಯಣ ಮೂರ್ತಿ ತಮ್ಮ ಕೆಲವು ಹೇಳಿಕೆಗಳಿಂದಲೇ ಭಾರೀ ಸುದ್ದಿಯಾಗಿದ್ದಾರೆ. ನಾರಾಯಣ ಮೂರ್ತಿ ಅವರ ಹೇಳಿಕೆಗಳ ವಿರುದ್ಧ ಇಂದಿನ ಯುವ ಸಮುದಾಯ ತೀವ್ರವಾಗಿ ಕೆಂಡಕಾರುತ್ತಲೇ ಇದ್ದಾರೆ.

ಬೆಂಗಳೂರಿನ ಯುಬಿ ಸಿಟಿಯ ಕಿಂಗ್ ಫಿಷರ್ ಟವರ್‌ನಲ್ಲಿ ಐಷಾರಾಮಿ ಬಂಗಲೆಯನ್ನು ಖರೀದಿ, ಅಳಿಯನೊಂದಿಗೆ ಕ್ರಿಕೆಟ್ ವೀಕ್ಷಣೆ ಟ್ರೋಲ್, ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕೆಂಬ ಹೇಳಿಕೆಗಳು ಕಾರ್ಪೋರೇಟ್ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದವು. ಇದರ ಮೊದಲು ಸಹ ನಾರಾಯಣ ಮೂರ್ತಿ ನೀಡಿದ ಕೆಲ ಹೇಳಿಕೆಗಳು ತೀವ್ರ ಚರ್ಚೆಗೆ ಕಾರಣವಾಗಿವೆ.
ಭಾರೀ ಚರ್ಚೆಗೆ ಕಾರಣವಾದ ಹೇಳಿಕೆಗಳು
* ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಾರಾಯಣ ಮೂರ್ತಿ ಅವರು, ಮಕ್ಕಳಲ್ಲಿ ಶೈಕ್ಷಣಿಕ ಹವ್ಯಾಸಗಳನ್ನು ರೂಪಿಸುವಲ್ಲಿ ಪೋಷಕರ ಪಾತ್ರ ಪ್ರಮುಖ ಆಗುತ್ತದೆ. ಮಕ್ಕಳಿಗೆ ಅಧ್ಯಯನದ ವಾತಾವರಣ ನಿರ್ಮಿಸುವ ಬದಲು ಮನರಂಜನೆಗೆ ಆದ್ಯತೆ ನೀಡುವ ಕೆಲವು ಪೋಷಕರಲ್ಲಿ ಶಿಸ್ತಿನ ಕೊರತೆಯಿದೆ ಎಂಬ ಹೇಳಿಕೆ ನೀಡಿ ಸುದ್ದಿಯಾಗಿದ್ದರು.
ಅಲ್ಲದೆ, ಪೋಷಕರು ಸಿನಿಮಾ ನೋಡಲು ಹೋಗಿ, ಮಕ್ಕಳಿಗೆ ಓದಲು ಹೇಳುತ್ತಾರೆ. ಆದರೆ ಇದರಿಂದ ಏನು ಉಪಯೋಗ ಆಗುವುದಿಲ್ಲ. ಪೋಷಕರು ಮಕ್ಕಳೊಂದಿಗೆ ಮಾತನಾಡಿ ಅಧ್ಯಯನದ ಬಗ್ಗೆ ಹೇಳಬೇಕು ಎಂದಿದ್ದರು. ಇದೇ ವೇಳೆ ಸುಧಾಮೂರ್ತಿ ಹೇಗೆ ಮಕ್ಕಳೊಂದಿಗೆ ದಿನದಲ್ಲಿ 3.5 ಗಂಟೆ ಸಮಯ ಕಳೆಯುತ್ತಿದ್ದರು ಎಂದು ಉದಾಹರಣೆ ನೀಡಿದ್ದರು. ಈ ಹೇಳಿಕೆಗೆ ಪೋಷಕರ ವಲಯದಿಂದ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು.
* ಕೋಚಿಂಗ್ ಸಂಸ್ಥೆಗಳ ಕೇಂದ್ರ ಆಗಿರುವ ರಾಜಸ್ಥಾನದ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ಬಗ್ಗೆ ಮಾತನಾಡಿದ್ದ ನಾರಾಯಣಮೂರ್ತಿ ಅವರು, ಮಕ್ಕಳ ಉತ್ತಮ ಕಲಿಕೆಗೆ ಕೋಚಿಂಗ್ ಕ್ಲಾಸ್ ಅಗತ್ಯವಿಲ್ಲ. ಮಕ್ಕಳು ಸಾಮಾನ್ಯ ಕಲಿಕೆಯ ಪಾಠ ನಿರ್ಲಕ್ಷ್ಯ ಮಾಡುತ್ತಾರೆ. ಪೋಷಕರು ದುಬಾರಿ ಕೋಚಿಂಗ್ ಕೇಂದ್ರದ ಹಿಂದೆ ಬಿದ್ದಿದ್ದಾರೆ ಎಂದು ಹೇಳಿಕೆ ನೀಡಿ ಸುದ್ದಿಯಾಗಿದ್ದರು.
* ಮಹಾಮಾರಿ ಕೋವಿಡ್ ಸಮಯದಲ್ಲು ಕಾರ್ಪೋರೇಟ್ ಕಂಪನಿಗಳ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಆಯ್ಕೆ ನೀಡಲಾಗಿತ್ತು. ಕೊರೊನಾ ವೈರಸ್ ತೀವ್ರತೆ ಕಡಿಮೆಯಾಗುತ್ತಲೇ ಉದ್ಯೋಗಿಗಳು ಕಚೇರಿಗೆ ಬಂದು ಕೆಲಸ ಮಾಡುವಂತೆ ಕರೆ ನೀಡಿದ್ದರು. ಸಮಾರು 24ರಿಂದ 30 ತಿಂಗಳು ಮನೆಯಲ್ಲಿದ್ದ ಉದ್ಯೋಗಿಗಳು ಕಚೇರಿಗೆ ಬರಲು ಆರಂಭದಲ್ಲಿ ಹಿಂದೇಟು ಹಾಕಿದ್ದರು. ಈ ಹೇಳಿಕೆ ಬಗ್ಗೆಯೂ ವ್ಯಾಪಕ ಚರ್ಚೆಯಾಗಿತ್ತು.
* ಅಲ್ಲದೆ ಹಲವು ಬಾರಿ 70 ಗಂಟೆ ಕೆಲಸದ ಬಗ್ಗೆ ಪ್ರಸ್ತಾಪ ಮಾಡಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಮತ್ತು ವಾರಕ್ಕೆ ಎರಡರ ಬದಲಾಗಿ ಒಂದು ರಜೆ ಸಾಕು ಎಂದಯ ನಾರಾಯಣ ಮೂರ್ತಿ ಅವರು ಹಲವು ಬಾರಿ ಹೇಳಿಕೆ ನೀಡಿ ಸುದ್ದಿಯಾಗುತ್ತಲೇ ಬಂದಿದ್ದಾರೆ. ಇದು ನನ್ನ ದೇಶ, ನಾನು ವಾರಕ್ಕೆ 70 ಗಂಟೆ ಕೆಲಸ ಮಾಡುವೆ ಎಂದು ಯುವ ಸಮುದಾಯ ಸಂಕಲ್ಪ ಮಾಡಬೇಕೆಂದು ಹೇಳಿಯೂ ಭಾರೀ ಚರ್ಚೆಗೆ ಕಾರಣರಾಗಿದ್ದರು.












Click it and Unblock the Notifications