ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ 3,000 ಹೊಸ ನೇಮಕಾತಿ ಮಾಡಿದ ಇನ್ಫೋಸಿಸ್

|
Google Oneindia Kannada News

ಬೆಂಗಳೂರು, ಜೂನ್ 14: 2020-21ನೇ ಸಾಲಿನಲ್ಲಿ ಭಾರತದಿಂದ ಹೊರಗಡೆ ಸುಮಾರು 7,280 ಉದ್ಯೋಗಿಗಳ ನೇಮಕವಾಗಿದೆ. ಈ ಪೈಕಿ 3,000 ಮಂದಿ ಯುಎಸ್ಎಯಲ್ಲಿ ಹೊಸದಾಗಿ ಸೇರಿಸಿಕೊಂಡಿದ್ದು, ಒಟ್ಟು ಸಂಖ್ಯೆ 30,938ಕ್ಕೇರಿದೆ.

ಯುರೋಪ್ ವಿಭಾಗದಲ್ಲಿ ಇನ್ಫೋಸಿಸ್ ಉದ್ಯೋಗಿಗಳ ಸಂಖ್ಯೆ 16,412ರಿಂದ 17,671ಕ್ಕೇರಿದೆ. ಕಳೆದ ವಾರ 26,227.28 ಕೋಟಿ ಸೇರಿಸಿಕೊಂಡಿದ್ದು, ಮಾರುಕಟ್ಟೆ ಮೌಲ್ಯ 6,16,479.55ಕೋಟಿ ರು ಗೇರಿದೆ.

ಐಟಿ ಫ್ರೆಶರ್ಸ್ ಗಮನಕ್ಕೆ: ಈ ವರ್ಷ 1 ಲಕ್ಷಕ್ಕೂ ಅಧಿಕ ಉದ್ಯೋಗವಕಾಶಐಟಿ ಫ್ರೆಶರ್ಸ್ ಗಮನಕ್ಕೆ: ಈ ವರ್ಷ 1 ಲಕ್ಷಕ್ಕೂ ಅಧಿಕ ಉದ್ಯೋಗವಕಾಶ

ಮುಂದಿನ ಆರ್ಥಿಕ ವರ್ಷದಲ್ಲಿ ಪ್ರಮುಖ ಐಟಿ ಕಂಪನಿಗಳು ಸುಮಾರು 1 ಲಕ್ಷಕ್ಕೂ ಅಧಿಕ ಹೊಸ ನೇಮಕಾತಿ ಘೋಷಿಸಿವೆ. ಕಳೆದ ಆರ್ಥಿಕ ವರ್ಷದಲ್ಲಿ 21,00 ಫ್ರೆಶರ್ಸ್ ನೇಮಕ ಮಾಡಿಕೊಳ್ಳಲಾಗಿದೆ ಎಂದು ಇನ್ಫೋಸಿಸ್ ಪ್ರಕಟಿಸಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 25,000 ಹೊಸ ನೇಮಕಾತಿ ನಡೆಯಲಿದ್ದು, ಈ ಪೈಕಿ 24, 000 ಮಂದಿಯನ್ನು ಭಾರತದಲ್ಲೇ ನೇಮಕ ಮಾಡಲಾಗುತ್ತದೆ, ಕ್ಯಾಂಪಸ್ ಸಂದರ್ಶನ ಮೂಲಕ ಪದವೀಧರರನ್ನು ಆಯ್ಕೆ ಮಾಡಲಾಗುವುದು ಎಂದು ಪ್ರವೀಣ್ ರಾವ್ ಹೇಳಿದರು.

Infosys Hires 7,280 Employees outside India

ಮಾರ್ಚ್ 31, 2021ಕ್ಕೆ ಅನ್ವಯವಾಗುವಂತೆ ಇನ್ಫೋಸಿಸ್ 10, 307 ಹೊಸ ನೇಮಕಾತಿ ಮಾಡಿಕೊಂಡಿದ್ದು, ಒಟ್ಟಾರೆ, 2,59,619 ಉದ್ಯೋಗಿಗಳನ್ನು ಹೊಂದಿದೆ. ಶೇ 38.6ರಷ್ಟು ಮಹಿಳಾ ಸಿಬ್ಬಂದಿ ಇದ್ದಾರೆ.

ಕೋವಿಡ್ 19 ಕಾಲದಲ್ಲಿ ತನ್ನ ಉದ್ಯೋಗಿಗಳು ಹಾಗೂ ಕುಟುಂಬಕ್ಕೆ ಲಸಿಕೆ ಕೊಡಿಸಲು ಕೊವಿನ್ ವೇದಿಕೆ ಜೊತೆಗೆ ಇನ್ಫೋಸಿಸ್ ತನ್ನದೇ ಪ್ರತ್ಯೇಕ ವೇದಿಕೆ ಒದಗಿಸಿದೆ.

English summary
Infosys has hired 7,280 employees outside India in Financial Year of 2020-21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X