ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ 2ನೇ ಅತಿದೊಡ್ಡ ಐಟಿ ಕಂಪನಿ ಸಿಇಒ ಸಂಬಳ ವಿವರ ಬಹಿರಂಗ

|
Google Oneindia Kannada News

ಬೆಂಗಳೂರು, ಮೇ 26: ಇನ್ಫೋಸಿಸ್ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸಲಿಲ್ ಎಸ್ ಪರೇಖ್ ಇನ್ನೊಂದು ಅವಧಿಗೆ ಮರು ನೇಮಕವಾದ ಬಳಿಕ, ಅವರಿಗೆ ಸಿಗುವ ವಾರ್ಷಿಕ ಸಂಬಳ, ಭತ್ಯೆ ವಿವರ ಬಹಿರಂಗವಾಗಿದೆ.

ದೇಶದ 2ನೇ ಅತಿದೊಡ್ಡ ಐಟಿ ಕಂಪನಿ ಸಿಇಒ ಸಲೀಲ್ ಪರೇಖ್ ಅವರ ವಾರ್ಷಿಕ ಪ್ಯಾಕೇಜ್ ಶೇ 88ರಷ್ಟು ಏರಿಕೆಯಾಗಿದ್ದು, ವಾರ್ಷಿಕ 79.75 ಕೋಟಿ ರುಗೆ ಪರಿಷ್ಕರಿಸಲಾಗಿದೆ, ಈ ಮೂಲಕ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕಾರ್ಯನಿರ್ವಾಹಕ ಅಧಿಕಾರಿಗಳ ಸಾಲಿಗೆ ಸೇರಿದ್ದಾರೆ. ಇನ್ಫೋಸಿಸ್‌ನ ಉದ್ಯಮ-ಪ್ರಮುಖ ಬೆಳವಣಿಗೆಯನ್ನು ಪರಿಗಣಿಸಿ ಪರೇಖ್ ಸಂಬಳ ಹೆಚ್ಚಿಸಲಾಗಿದೆ.

ಕಂಪನಿಯು ಗುರುವಾರ ಬಿಡುಗಡೆ ಮಾಡಿದ ತನ್ನ ವಾರ್ಷಿಕ ವರದಿಯಲ್ಲಿ ಅಸಾಧಾರಣವಾದ ದೀರ್ಘ ವಿವರಣೆಯನ್ನು ನೀಡಿ, ಪರೇಖ್‌ಗೆ ಏಕೆ ಇಷ್ಟು ದೊಡ್ಡ ಕೊಡುಗೆ ನೀಡಲು ನಿರ್ಧರಿಸಿದೆ ಎಂಬುದನ್ನು ವಿವರಿಸಿದೆ. ಜುಲೈ 1, 2022 ರಿಂದ ಮಾರ್ಚ್ 31, 2027 ರವರೆಗೆ ಇನ್ನೂ ಐದು ವರ್ಷಗಳ ಕಾಲ ಸಲೀಲ್ ಪರೇಖ್ ಅವರನ್ನು ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮರುನೇಮಕಗೊಳಿಸಲಾಗಿದೆ. ಕಂಪನಿಯಲ್ಲಿ ಸ್ಥಿರತೆಯನ್ನು ಮರುಸ್ಥಾಪಿಸಿದ ಪರೇಖ್ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸಿ, ಈ ಕ್ರಮ ಕೈಗೊಳ್ಳಲಾಗಿದೆ.

ಕಂಪನಿಯು ಒಟ್ಟು ಷೇರುದಾರರ ಆದಾಯ, ಮಾರುಕಟ್ಟೆ ಮೌಲ್ಯ ಹೆಚ್ಚಳ ಮತ್ತು ಬೆಳವಣಿಗೆಯಂತಹ ಪ್ರಮುಖ ಅಂಶಗಳನ್ನು ಪರಿಗಣಿಸಿ ಅವರ ಮರು ನೇಮಕಾತಿ ಮತ್ತು ಸಂಭಾವನೆಯಲ್ಲಿ ಬದಲಾವಣೆಯನ್ನು ಶಿಫಾರಸು ಮಾಡಲಾಗಿದೆ.

ನಾಲ್ಕನೇ ತ್ರೈಮಾಸಿಕ ವರದಿ

ನಾಲ್ಕನೇ ತ್ರೈಮಾಸಿಕ ವರದಿ

ಬೆಂಗಳೂರು ಮೂಲದ ಪ್ರಮುಖ ಐಟಿ ರಫ್ತು ಕಂಪನಿ ಇನ್ಫೋಸಿಸ್ ಏಪ್ರಿಲ್ 13ರಂದು ತನ್ನ ನಾಲ್ಕನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ. ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಲೆಕ್ಕದಲ್ಲಿ ಶೇ 12ರಷ್ಟು ಲಾಭ ಕಂಡು ಬಂದಿದ್ದರೂ, ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 2ರಷ್ಟು ಲಾಭ ಇಳಿಕೆಯಾಗಿದೆ.

ಈ ತ್ರೈಮಾಸಿಕದಲ್ಲಿ 5,686 ಕೋಟಿ ರು ನಿವ್ವಳ ಲಾಭ ದಾಖಲಿಸಿದೆ. FY22 ರ ಕೊನೆಯಲ್ಲಿ ಕಂಪನಿಯು 3,14,015 ಉದ್ಯೋಗಿಗಳನ್ನು ಹೊಂದಿತ್ತು. Q3FY22 ರ ಕೊನೆಯಲ್ಲಿ ಉದ್ಯೋಗಿಗಳ ಸಂಖ್ಯೆ 2,92,067 ರಷ್ಟಿದೆ. ಮಹಿಳಾ ಉದ್ಯೋಗಿಗಳು ಒಟ್ಟು ಉದ್ಯೋಗಿ ಸಾಮರ್ಥ್ಯದ ಶೇ 39.6 ರಷ್ಟು ಹೊಂದಿದ್ದಾರೆ. Q3FY22 ರ ಅವಧಿಯಲ್ಲಿ 25.5 ಶೇಕಡಾಕ್ಕೆ ಹೋಲಿಸಿದರೆ ತ್ರೈಮಾಸಿಕದಲ್ಲಿ ಕಂಪನಿಯ ಕ್ಷೀಣತೆ(attrition)ಯು 27.7 ಶೇಕಡಾಕ್ಕೆ ಏರಿದೆ.

 ಇತರೆ ಕಂಪನಿಗಳಿಗೆ ಹೋಲಿಸಿದರೆ ಅತ್ಯಧಿಕ

ಇತರೆ ಕಂಪನಿಗಳಿಗೆ ಹೋಲಿಸಿದರೆ ಅತ್ಯಧಿಕ

"ಸಲೀಲ್ ಸಿಇಒ ಆಗಿ ಮೊದಲ ಅವಧಿಯಲ್ಲಿ, ಕಂಪನಿಯ ಒಟ್ಟು ಷೇರುದಾರರ ಆದಾಯವು (ಟಿಎಸ್ಆರ್) ಪ್ರಭಾವಶಾಲಿ 314% ಆಗಿತ್ತು, ಇದು ಇತರೆ ಕಂಪನಿಗಳಿಗೆ ಹೋಲಿಸಿದರೆ ಅತ್ಯಧಿಕವಾಗಿದೆ ಸಲೀಲ್ ನಾಯಕತ್ವದಲ್ಲಿ ಕಂಪನಿಯ ಆದಾಯದ ಬೆಳವಣಿಗೆಯು ವೇಗವನ್ನು ಹೆಚ್ಚಿಸಿದೆ ಮತ್ತು '70,522 ಕೋಟಿ (2018 ರ ಹಣಕಾಸು ವರ್ಷ) ನಿಂದ 1,21,641 ಕೋಟಿ (2022 ರ ಹಣಕಾಸು ವರ್ಷ)ಕ್ಕೆ ಏರಿದೆ., ಶೇ15 ನ CAGR (ಹಿಂದಿನ ನಾಲ್ಕು ವರ್ಷಗಳ CAGR 9%) ಮತ್ತು ಲಾಭಗಳು ಸಹ '16,029 ಕೋಟಿಗಳಿಂದ '22,110 ಕೋಟಿಗೆ ಏರಿಕೆಯಾಗಿದೆ" ಎಂದು ವರದಿ ಹೇಳಿದೆ.

ದೊಡ್ಡ ಒಪ್ಪಂದಗಳಿಗೆ ಸಹಿ ಹಾಕಿದೆ.

ದೊಡ್ಡ ಒಪ್ಪಂದಗಳಿಗೆ ಸಹಿ ಹಾಕಿದೆ.

ಇದಲ್ಲದೆ, ಕಂಪನಿಯು ಡಿಜಿಟಲ್ ಆದಾಯದ ಪಾಲನ್ನು ಶೇ 25.5 (ಆರ್ಥಿಕ 2018) ನಿಂದ ಶೇ 57.0 (ಹಣಕಾಸು 2022) ಗೆ ದ್ವಿಗುಣಗೊಳಿಸಿದೆ ಮತ್ತು ಈಗ ಉದ್ಯಮದ ವಿಶ್ಲೇಷಕರು 32 ವಿಭಾಗಗಳಲ್ಲಿ ನಾಯಕನಾಗಿ ರೇಟಿಂಗ್ ಹೊಂದಿರುವ ಪ್ರಮುಖ ಡಿಜಿಟಲ್ ಕಂಪನಿ ಎಂದು ಪರಿಗಣಿಸಲಾಗಿದೆ. ಮತ್ತು ಹಣಕಾಸಿನ 2019 ರಿಂದ 2022 ರವರೆಗಿನ ನಾಲ್ಕು ವರ್ಷಗಳ ಅವಧಿಗೆ ~ US $ 39 ಶತಕೋಟಿಯ ಒಟ್ಟು ಮೌಲ್ಯದೊಂದಿಗೆ ದೊಡ್ಡ ಒಪ್ಪಂದಗಳಿಗೆ ಸಹಿ ಹಾಕಿದೆ.

ಪ್ರಮುಖ ಐಟಿ ಕಂಪನಿಗಳ ಜೊತೆ ಹೋಲಿಕೆ

ಪ್ರಮುಖ ಐಟಿ ಕಂಪನಿಗಳ ಜೊತೆ ಹೋಲಿಕೆ

ಆಕ್ಸೆಂಚರ್ ಪಿಎಲ್‌ಸಿ, ಕಾಗ್ನಿಜಂಟ್ ಟೆಕ್ನಾಲಜಿ ಸೊಲ್ಯೂಷನ್ಸ್ ಕಾರ್ಪೊರೇಷನ್, ಡಿಎಕ್ಸ್‌ಸಿ ಟೆಕ್ನಾಲಜಿ ಕಂಪನಿ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್, ವಿಪ್ರೋ ಲಿಮಿಟೆಡ್, ಟೆಕ್ ಮಹೀಂದ್ರಾ, ಕ್ಯಾಪ್ಜೆಮಿನಿ, ಎಚ್‌ಸಿಎಲ್ ಟೆಕ್ನಾಲಜೀಸ್ ಲಿಮಿಟೆಡ್, ಇಂಟರ್‌ನ್ಯಾಶನಲ್ ಬ್ಯುಸಿನೆಸ್ ಮೆಷಿನ್ಸ್ ಕಾರ್ಪೊರೇಷನ್, ಮತ್ತು ಅಟೋಸ್ ಎಸ್‌ಇ ಸಿಇಒಗಳಿಗೆ ಪಾವತಿಸಿದ ಸಂಭಾವನೆಗೆ ಹೋಲಿಸಿದರೆ ಸಲೀಲ್ ಅವರ ಉದ್ದೇಶಿತ ಒಟ್ಟು ಗುರಿ ಸಂಭಾವನೆಯು ಸರಾಸರಿಯಲ್ಲಿದೆ ಎಂದು ವಿಶ್ಲೇಷಿಸಲಾಗಿದೆ.

ಕಾರ್ಯಕ್ಷಮತೆ ಆಧಾರಿತ ಪ್ಯಾಕೇಜ್

ಕಾರ್ಯಕ್ಷಮತೆ ಆಧಾರಿತ ಪ್ಯಾಕೇಜ್

ಹೆಚ್ಚುವರಿಯಾಗಿ, ಸಲೀಲ್‌ನ ಕಾರ್ಯಕ್ಷಮತೆ ಆಧಾರಿತ ಪ್ಯಾಕೇಜ್ ಶೇ70 ಅನ್ನು RSU ಅಥವಾ PSU ಅನುದಾನದ ರೂಪದಲ್ಲಿ ನೀಡಲಾಗುತ್ತದೆ ಮತ್ತು ಆದ್ದರಿಂದ ಕಂಪನಿಯ ಷೇರು ಬೆಲೆಯ ಕಾರ್ಯಕ್ಷಮತೆಯನ್ನು ಊಹಿಸಲಾಗಿದೆ. ಪರೇಖ್ ಅವರಿಗೆ ~2,21,000 PSUಗಳು (34.75 ಕೋಟಿ) 2023 ರ ಆರ್ಥಿಕ ಕಾರ್ಯಕ್ಷಮತೆಗಾಗಿ ನೀಡಲಾಗುವುದು, ಇದು ಅವರ ಮೊದಲ ಬಾರಿಗೆ ನೀಡಲಾದ 2,17,200 8 (ಬೋನಸ್ ಷೇರುಗಳಿಗೆ ಸರಿಹೊಂದಿಸಲಾಗಿದೆ) PSU ಗಳಿಗೆ (13 ಕೋಟಿ) ಸಮಾನವಾಗಿದೆ

Recommended Video

ಕ್ಯಾಪ್ಟನ್ ಅಭಿಲಾಷಾ ಬಾರಕ್ ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್‌! | #Defence | Oneindia Kannada

English summary
Software major Infosys CEO Salil Parekh’s compensation has been revised upwards by 88% to Rs 79.75 crore per annum, making him one of the highest paid executives in India. The software firm justified the massive pay hike, citing Infosys’ industry-leading growth in recent years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X