ಟಾಪ್ 05 ಕಡಿಮೆದರ ವಿಮಾನಯಾನ ಪಟ್ಟಿಯಲ್ಲಿ ಇಂಡಿಗೋ

ಬೆಂಗಳೂರು, ಮೇ 28: ಅತ್ಯಂತ ಕಡಿಮೆ ದರದ ವಿಮಾನಯಾನ ಸಂಸ್ಥೆಗಳ ಟಾಪ್ 05 ಪಟ್ಟಿಯಲ್ಲಿ ಭಾರತದ ಇಂಡಿಗೋ(ಇಂಟರ್ ಗ್ಲೋಬ್ ಏವಿಯೇಷನ್ ಲಿಮಿಟೆಡ್) ಹಾಗೂ ಏರ್ ಇಂಡಿಯಾ ಎಕ್ಸ್ ಪ್ರೆಸ್ ಸಂಸ್ಥೆಗಳ ಹೆಸರು ಕಾಣಿಸಿಕೊಂಡಿದೆ.

ಸರ್ಕಾರ ಸ್ವಾಮ್ಯದ ಏರ್ ಇಂಡಿಯಾ ಅಧೀನದಲ್ಲಿರುವ ಏರ್ ಇಂಡಿಯಾ ಎಕ್ಸ್ ಪ್ರೆಸ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇಂಡಿಗೋ ಐದನೇ ಸ್ಥಾನದಲ್ಲಿದೆ ಎಂದು ಮೆಲ್ಬೋರ್ನ್ ಮೂಲದ ರೋಮ್ 2ರಿಯೋ ಸಂಸ್ಥೆ ಗ್ಲೋಬಲ್ ಫ್ಲೈಟ್ ಪ್ರೈಸಿಂಗ್ ರಿಪೋರ್ಟ್ ಆಧಾರದ ಮೇಲೆ ವಿಮಾನಯಾನ ಸಂಸ್ಥೆಗಳ ಪಟ್ಟಿ ಮಾಡಲಾಗಿದೆ.

ಪ್ರತಿ ಕಿಲೋಮೀಟರ್ ಮೇಲೆ ತಗುಲುವ ವೆಚ್ಚದ ಆಧಾರ ಮೇಲೆ ವಿಶ್ವದ 200ಕ್ಕೂ ಅಧಿಕ ಏರ್ ಲೈನ್ಸ್ ಬಗ್ಗೆ ಮಾಹಿತಿ ಕಲೆ ಹಾಕಿ ಈ ವರದಿ ನೀಡಲಾಗಿದೆ.

IndiGo, Air India Express among Top 5 cheapest airlines in the world

ಮಧ್ಯಪ್ರಾಚ್ಯ ದೇಶಗಳು ಹಾಗೂ ಸಿಂಗಪುರಕ್ಕೆ ಸಂಪರ್ಕ ಒದಗಿಸುವ ಏರ್ ಇಂಡಿಯಾ ಎಕ್ಸ್ ಪ್ರೆಸ್ ಸರಾಸರಿ ಪ್ರತಿ ಕಿ.ಮೀಗೆ 0.08ಯುಎಸ್ ಡಾಲರ್ ವೆಚ್ಚ ತಗುಲುತ್ತಿದೆ. ಇಂಡಿಗೋ ಅಂತಾರಾಷ್ಟ್ರೀಯ ವಿಮಾನಯಾನ ಪ್ರತಿ ಕಿ.ಮೀಗೆ 0.10 ಯುಎಸ್ ಡಾಲರ್ ವೆಚ್ಚವಾಗುತ್ತಿದೆ.

ಭಾರತದ ನಗರಗಳ ಜತೆ ಗಲ್ಫ್ ದೇಶಗಳು, ಬ್ಯಾಂಕಾಕ್, ಕೊಲಂಬೋ ಹಾಗೂ ಕಠ್ಮಂಡುಗೆ ಇಂಡಿಗೋ ಸಂಪರ್ಕ ಒದಗಿಸುತ್ತಿದೆ.

ಏಷ್ಯಾದಲ್ಲಿ ಇಂಡೋನೇಷಿಯಾ ಏರ್ ಏಷ್ಯಾ ಹಾಗೂ ಪ್ರೈಮೆರಾ ಏರ್ ಟಾಪ್ 5ರಲ್ಲಿ ಸ್ಥಾನ ಗಳಿಸಿವೆ. ಮಿಕ್ಕಂತೆ ಎಟಿಹಾಡ್, ರಾಯಾನಾರ್, ಕ್ವಾಂಟಾಸ್, ವಾವ್ ಏರ್ ಹಾಗೂ ವರ್ಜಿನ್ ಆಸ್ಟ್ರೇಲಿಯಾ ಟಾಪ್ 10 ಪಟ್ಟಿಯಲ್ಲಿವೆ. ದೆಹಲಿಯಿಂದ ಯುರೋಪ್ ಹಾಗೂ ಯುಎಸ್ ನಗರಗಳಿಗೆ ವಾವ್ ಏರ್ ಸಂಪರ್ಕ ಒದಗಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+