LIC: ಎಲ್‌ಐಸಿ ಮೇಲೆ ಶತಕೋಟಿ ಭಾರತೀಯರ ನಂಬಿಕೆ, ಜಾಗತಿಕ ಮಟ್ಟದಲ್ಲೂ ಎಲ್‌ಐಸಿ ಸದ್ದು
ಎಲ್‌ಐಸಿ ಶತಕೋಟಿ ಭಾರತೀಯರ ನಂಬಿಕೆ ಗಳಿಸಿದೆ, ಹೀಗಾಗಿಯೇ ಕೋಟ್ಯಂತರ ಜನರು ನಮ್ಮ ದೇಶದ ಹೆಮ್ಮೆಯ ಸಂಸ್ಥೆ ಎಲ್‌ಐಸಿ ಮೇಲೆ ನಂಬಿಕೆ ಇಟ್ಟು ಹೂಡಿಕೆ ಮಾಡುತ್ತಿದ್ದಾರೆ. ಕೆಲವು ವರ್ಷಗಳಿಂದ ವಿದೇಶಿ ಮಾಧ್ಯಮಗಳು ತಪ್ಪಾಗಿ ಬಿಂಬಿಸುತ್ತಿವೆ ಎಂಬ ಆರೋಪದ ನಡುವೆ ಕೂಡ ಭಾರತೀಯರು ಮಾತ್ರ ಎಲ್‌ಐಸಿ ಮೇಲೆ ನಂಬಿಕೆ ಕಳೆದುಕೊಂಡಿಲ್ಲ. ಇದೇ ಕಾರಣಕ್ಕೆ ಈಗ ಮತ್ತೆ ಜಾಗತಿಕ ಮಟ್ಟದಲ್ಲೂ ಎಲ್‌ಐಸಿ ಸದ್ದು ಮಾಡುತ್ತಿದೆ.
ಭಾರತದ ಪ್ರತಿಯೊಬ್ಬರ ಅಚಲ ವಿಶ್ವಾಸದ ಸಂಕೇತ ಎಂದರೆ ಲೈಫ್ ಇನ್ಶೂರೆನ್ಸ್ ಕಾರ್ಪೊರೇಶನ್, ಅಂದರೆ ನಮ್ಮ ದೇಶದ ಹೆಮ್ಮೆಯ ಸಂಸ್ಥೆ ಎಲ್‌ಐಸಿ. ವಿಮಾ ಸಂಸ್ಥೆಯಾಗಿ ಮಾತ್ರವಲ್ಲದೆ ಭಾರತದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುತ್ತಾ ಬರುತ್ತಿದೆ ಎಲ್‌ಐಸಿ ಸಂಸ್ಥೆ. ಭಾರತದ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡುತ್ತಿರುವುದೆ ಲೈಫ್ ಇನ್ಶೂರೆನ್ಸ್ ಕಾರ್ಪೊರೇಶನ್. ಚಿಕ್ಕ ಪಟ್ಟಣಗಳ ಶಿಕ್ಷಕರಿಂದ ಹಿಡಿದು ದೊಡ್ಡ ದೊಡ್ಡ ನಗರಗಳ ತನಕ, ಪ್ರತಿಯೊಂದು ಪೀಳಿಗೆ ಕೂಡ ಭದ್ರತೆಗೆ ಎಲ್‌ಐಸಿ ಆರಿಸಿಕೊಂಡಿದೆ. ಮಗಳ ವಿವಾಹಕ್ಕಾಗಿ ಹಣಕಾಸು, ಮನೆ ನಿರ್ಮಾಣ, ಅಥವಾ ನಿವೃತ್ತಿ ಯೋಜನೆ ಸೇರಿದಂತೆ ಯಾವುದೇ ಆಗಿರಲಿ, ಎಲ್‌ಐಸಿ ಲಕ್ಷಾಂತರ ಕುಟುಂಬಗಳ ಜೊತೆಗೆ ನಿಶ್ಶಬ್ದವಾಗಿ ನಿಂತಿದೆ.

ಕೋಟ್ಯಂತರ ಜನರ ಬದುಕಿನ ಆಶಾಕಿರಣ
ಎಲ್‌ಐಸಿ ಹೇಗೆ ಭಾರತೀಯರ ಬದುಕಿನಲ್ಲಿ ಆರ್ಥಿಕ ಸ್ವಾತಂತ್ರ್ಯ ತರುತ್ತಿದೆ ಎಂಬುದಕ್ಕೆ ಪ್ರಮುಖ ಉದಾಹರಣೆ ಆಗಿ ಸತಾರಾದ ರಾಮೇಶ್ ಪಾಟೀಲ್ ಅವರ ಜೀವನವನ್ನು ವಿವರಿಸಬಹುದು. ಹೌದು
25 ವರ್ಷಗಳ ಹಿಂದೆ ರಾಮೇಶ್ ಪಾಟೀಲ್ ಎಲ್‌ಐಸಿ ಪಾಲಿಸಿ ಖರೀದಿಸಿದರು. 2025ರ ಸಮಯದಲ್ಲಿ ಅವರ ಮಗಳು ಮದುವೆ ಆದಾಗ ಎಲ್‌ಐಸಿ ಪಾಲಿಸಿಯೇ ಅವರ ಮಗಳ ಮದುವೆಗೆ ಆಧಾರವಾಯ್ತು. ಹಲವು ಕಂಪನಿಗಳು ಬಂದು ಹೋಗುತ್ತವೆ, ಆದರೆ ಎಲ್‌ಐಸಿ ಎಂದಿಗೂ ವಿಫಲವಾಗುವುದೇ ಇಲ್ಲ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.
ಅಂದಹಾಗೆ 1956ರಲ್ಲಿ ಸ್ಥಾಪಿತವಾದ ಎಲ್‌ಐಸಿ ಸ್ವಾತಂತ್ರ್ಯೋತ್ತರ ಪುನರ್‌ನಿರ್ಮಾಣದಿಂದ 1991ರ ಉದಾರೀಕರಣದ ತನಕ & 2020ರ ಸಾಂಕ್ರಾಮಿಕ ಸಮಸ್ಯೆ ತನಕವೂ ಹಲವು ಆರ್ಥಿಕ ಬದಲಾವಣೆ ಕಂಡಿದೆ. ಇವೆಲ್ಲದರ ನಡುವೆಯೂ ಸದಾ ನಿಷ್ಠೆ, ಪಾರದರ್ಶಕತೆ ಮತ್ತು ವಿಶ್ವಾಸ ಕಾಪಾಡಿಕೊಂಡು ಬಂದಿದೆ. ಇತ್ತೀಚೆಗೆ *ವಾಷಿಂಗ್ಟನ್ ಪೋಸ್ಟ್* ಎಲ್‌ಐಸಿ ಸರ್ಕಾರದ ಬೆಂಬಲದಡಿ ಆದಾನಿ ಗ್ರೂಪ್‌ಗೆ ನೆರವಾಯಿತು ಎಂದು ಆರೋಪಿಸಿದಾಗ ಭಾರತೀಯರು ಅದನ್ನ ತಳ್ಳಿಹಾಕಿದರು. ಎಲ್‌ಐಸಿ ಮಾಹಿತಿ ಪ್ರಕಾರ, ಅದರ ಆದಾನಿ ಹೂಡಿಕೆಗಳು ಒಟ್ಟು ಪೋರ್ಟ್ಫೋಲಿಯೊದ ಶೇಕಡಾ 1 ಕ್ಕಿಂತಲೂ ಕಡಿಮೆ, ಆದರೆ ಶೇಕಡಾ 120 ಲಾಭ ನೀಡಿವೆ. ಬಹುತೇಕ ಭಾರತೀಯರಿಗೆ ಅದು ಸಾಕ್ಷಿಯಾಗಿತ್ತು, ಎಲ್‌ಐಸಿ ಪ್ರಜ್ಞಾವಂತ & ಸ್ವತಂತ್ರ ನಿರ್ಣಯಗಳನ್ನು ತೆಗೆದುಕೊಳ್ಳುತ್ತದೆ ಎಂಬುದಕ್ಕೆ.
ಆರ್ಥಿಕ ಭದ್ರತೆಯ ಭಾವನೆಗೂ ಸಂಕೇತ
ವಿದೇಶಿ ಮಾಧ್ಯಮಗಳ ವರದಿಗಳು ಏನೇನೋ ಪ್ರಶ್ನೆ ಮಾಡಬಹುದು, ಆದರೆ ಜನರ ಅನುಭವ ಸತ್ಯ ಹೇಳುತ್ತದೆ. ಸಮಯಕ್ಕೆ ಸರಿಯಾಗಿ ಪರಿಹಾರ, ಸ್ಥಿರ ಆದಾಯ ಮತ್ತು ಮನುಷ್ಯನ ಬಂಧ ಹೀಗೆಲ್ಲಾ ಪ್ರತಿಯೊಂದು ಭಾರತೀಯರ ಕುಟುಂಬದಲ್ಲೂ ಎಲ್‌ಐಸಿ ಏಜೆಂಟ್ ಒಬ್ಬ ಬಂಧುವಿನಂತೆ ಇದ್ದಾರೆ. ಸಲಹೆ ನೀಡುವ, ಮಾರ್ಗದರ್ಶನ ಮಾಡುವ, ಮತ್ತು ಭರವಸೆ ನೀಡುತ್ತಾ ಬೆಂಬಲವಾಗಿ ನಿಂತಿದ್ದು ಗಮನಾರ್ಹ. ಈ ಕಾರಣದಿಂದ ವಿದೇಶಿ ಮಾಧ್ಯಮಗಳ ದಾಳಿಗಳಿಗೆ ಭಾರತೀಯರು ಕೋಪಗೊಳ್ಳದೇ, ಅಂತ ದಾಳಿಯನ್ನ ನಂಬದೆ ತಿರಸ್ಕಾರ ಮಾಡುತ್ತಿದ್ದಾರೆ. ಏಕೆಂದರೆ ಎಲ್‌ಐಸಿ ನಂಬಿಕೆ ಹೆಡ್‌ಲೈನ್ ಮೇಲೆ ನಿರ್ಮಾಣ ಆಗಿಲ್ಲ, ಅದು ಪೀಳಿಗೆಗಳ ವಿಶ್ವಾಸದಿಂದ ನಿರ್ಮಿತವಾಗಿದೆ. ಹೀಗೆ ಸರ್ಕಾರಗಳು ಬದಲಾಗಬಹುದು, ಮಾರುಕಟ್ಟೆ ಏರುಪೇರುಗೊಳ್ಳಬಹುದು, ಆದರೆ ಎಲ್‌ಐಸಿ ಎಂದಿಗೂ ಸ್ಥಿರ & ವಿಮಾ ಸಂಸ್ಥೆಯಷ್ಟೇ ಅಲ್ಲ, ಅದು ಭಾರತದ ಆರ್ಥಿಕ ಭದ್ರತೆಯ ಭಾವನೆಗೂ ಸಂಕೇತವಾಗಿದೆ.
ಗಮನಿಸಿ: ಈ ಸಂದೇಶ & ಅದಕ್ಕೆ ಸಂಬಂಧಿತವಾಗಿರುವ ಯಾವುದೇ ದಾಖಲೆಗಳಲ್ಲಿ ಗೌಪ್ಯ ಅಥವಾ ಸ್ವಂತತ್ವದ ವಸ್ತುಗಳಿರಬಹುದು. ಹೀಗಾಗಿ ಇದು ಉದ್ದೇಶಿತ ಸ್ವೀಕಾರರಿಗಾಗಿ ಮಾತ್ರ ನೀವು ಉದ್ದೇಶಿತ ಸ್ವೀಕಾರರಲ್ಲದಿದ್ದರೆ, ಈ ಸಂದೇಶದ ಪರಿಶೀಲನೆ, ಬಳಕೆ, ಬಹಿರಂಗಪಡಿಸುವಿಕೆ, ಪ್ರಸಾರ ಮತ್ತು ಹಂಚಿಕೆ, ಅಥವಾ ಪ್ರತಿಕೃತಿ ನಿರ್ಮಾಣ ನಿಷೇಧಿಸಲಾಗಿದೆ. ತಪ್ಪಾಗಿ ಸ್ವೀಕರಿಸಿದರೆ, ದಯವಿಟ್ಟು ಕಳುಹಿಸಿದವರನ್ನ ತಕ್ಷಣ ಮಾಹಿತಿ ನೀಡಿ ಮತ್ತು ಈ ಇಮೇಲನ್ನು ಯಾವುದೇ ಮಾದರಿಯಲ್ಲಾದರೂ (ಇಲೆಕ್ಟ್ರಾನಿಕ್ ಅಥವಾ ಮುದ್ರಿತ) ಅಳಿಸಿ. ಈ ಸಂದೇಶದಲ್ಲಿನ ಅಭಿಪ್ರಾಯಗಳು, ತೀರ್ಮಾನಗಳು ಅಥವಾ ಬದ್ಧತೆಗಳು ಕಳುಹಿಸಿದ ವ್ಯಕ್ತಿಯದೇ ಆಗಿದ್ದು, ಅವು ವರ್ಸೆ ಇನೋವೆಶನ್ ಪ್ರೈವೇಟ್ ಲಿಮಿಟೆಡ್‌ನ ನಿಲುವನ್ನು ಪ್ರತಿನಿಧಿಸುವುದಿಲ್ಲ.












Click it and Unblock the Notifications