2030ರ ಹೊತ್ತಿಗೆ ಡಾಲರ್-ರುಪಾಯಿ ಮೌಲ್ಯ ಸಮ ಸಮ

Posted By:
Subscribe to Oneindia Kannada

ಬೆಂಗಳೂರು, ಜುಲೈ 15: ನೀವು ಉಪೇಂದ್ರ ನಿರ್ದೇಶಿಸಿ, ನಟಿಸಿದ 'ಸೂಪರ್' ಸಿನಿಮಾ ನೋಡಿದ್ದರೆ, ಅದರಲ್ಲಿನ ಆರಂಭದ ದೃಶ್ಯವನ್ನು ನೆನಪಿಸಿಕೊಳ್ಳಿ. ಹೆಚ್ಚು-ಕಡಿಮೆ ಅದೇ ದೃಶ್ಯಗಳನ್ನು ಹೋಲುವಂಥ ಮಾತುಗಳನ್ನು ಆಡಿದ್ದಾರೆ ಕೆನರಾ ಬ್ಯಾಂಕ್ ನ ಅಧ್ಯಕ್ಷ ಟಿ.ಎನ್.ಮನೋಹರನ್.

2030ರ ಹೊತ್ತಿಗೆ 7.25 ಟ್ರಿಲಿಯನ್ ಅಮೆರಿಕನ್ ಡಾಲರ್ ಆಗಲಿದೆ ಜಿಡಿಪಿ

ಅದೇನು ಅಂಥ ಮಾತು ಅಂತೀರಾ? ಜಿಡಿಪಿ ವಿಚಾರದಲ್ಲಿ ಭಾರತ ಮುನ್ನಡೆಯುತ್ತಿದೆ. ಇದೇ ವೇಗದಲ್ಲಿ ಸಾಗಿದರೆ 2030ಕ್ಕೆ ರೂಪಾಯಿ ಮತ್ತು ಡಾಲರ್‌ ವಿನಿಮಯ ಮೌಲ್ಯ ಸಮ ಆಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

Indian Rupee- US Dollar value equal by 2030

ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 2010ನೇ ಇಸವಿಯಲ್ಲಿ ಜಿಡಿಪಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದ ಭಾರತ, 2015ರಲ್ಲಿ ಏಳನೇ ಸ್ಥಾನಕ್ಕೆ ಏರಿಕೆ ಕಂಡಿದೆ. 2022ರ ಹೊತ್ತಿಗೆ ಐದನೇ ಸ್ಥಾನಕ್ಕೆ ಬರುವ ಗುರಿ ಇಟ್ಟುಕೊಂಡಿದೆ. ಹೀಗೇ ಮುಂದುವರಿದರೆ ಅಮೆರಿಕದವರು ಭಾರತದ ವೀಸಾ ಪಡೆಯಲು ಸಾಲಿನಲ್ಲಿ ನಿಲ್ಲುವ ಕಾಲವೂ ಬರುತ್ತದೆ ಎಂದು ಹೇಳಿದ್ದಾರೆ.

ಇನ್ನು ಕೇಂದ್ರ ಅಬಕಾರಿ ಪ್ರಧಾನ ಹೆಚ್ಚುವರಿ ಮಹಾನಿರ್ದೇಶಕ ಡಿ.ಪಿ. ನಾಗೇಂದ್ರ ಕುಮಾರ್ ಅವರು ಮಾತನಾಡಿ, ಸಮಗ್ರ ಜಿಎಸ್ ಟಿಯಿಂದ (ಐಜಿಎಸ್ ಟಿ) ಹತ್ತೇ ದಿನಗಳಲ್ಲಿ ದೇಶಕ್ಕೆ ನಾಲ್ಕು ಸಾವಿರ ಕೋಟಿ ರುಪಾಯಿ ವರಮಾನ ಬಂದಿದೆ. ಇದು ತೆರಿಗೆ ವ್ಯವಸ್ಥೆ ಸರಿಯಾದ ನಿಟ್ಟಿನಲ್ಲಿ ಸಾಗುತ್ತಿದೆ ಎಂಬುದರ ಸೂಚನೆ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian Rupee- US Dollar value equal by 2030, predicted by Canara bank president T.N.Manoharan in Bengaluru on Friday.
Please Wait while comments are loading...