• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಂತವಾಗಿ ಬೆಳೆದ ಪ್ರತಿಭೆ; ಫೋರ್ಬ್ಸ್ ಪಟ್ಟಿಯಲ್ಲಿ ಜಯಶ್ರೀ ಉಳ್ಳಾಲ

|
Google Oneindia Kannada News

ಅಮೆರಿಕದಲ್ಲಿ ಬೆಳಗುತ್ತಿರುವ ಭಾರತೀಯ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಹೆಚ್ಚೆಚ್ಚು ಭಾರತೀಯರು ಅತ್ಯುನ್ನತ ಹಂತಗಳಿಗೆ ಏರುತ್ತಿದ್ದಾರೆ. ವಿಶ್ವದ ಅನೇಕ ಬಲಿಷ್ಠ ಸಂಸ್ಥೆಗಳ ಆಡಳಿತ ಆಯಕಟ್ಟಿನ ಸ್ಥಾನಗಳಲ್ಲಿ ಭಾರತೀಯರೇ ಇದ್ದಾರೆ. ಈಗ ಅರಿಸ್ಟಾ ನೆಟ್ವರ್ಕ್ಸ್ ಎಂಬ ಕಂಪನಿಯ ಸಿಇಒ ಆಗಿರುವ ಜಯಶ್ರೀ ಉಲ್ಲಾಳ ಫೋರ್ಬ್ಸ್ ಪಟ್ಟಿಗೆ ಸೇರಿದ್ದಾರೆ.

ಸ್ವಂತವಾಗಿ ಬೆಳೆದು ಅತ್ಯಂತ ಶ್ರೀಮಂತರಾಗಿರುವ ಅಮೆರಿಕದ ಮಹಿಳೆಯರ ಪಟ್ಟಿಯಲ್ಲಿ ಜಯಶ್ರೀ ಉಳ್ಳಾಲ ಅವರಿದ್ದಾರೆ. ಈ ಪಟ್ಟಿಯಲ್ಲಿ ಉಳ್ಳಾಲ ಅವರು ಖ್ಯಾತ ನಟಿ ಕಿಮ್ ಕರ್ದಾಶಿಯನ್ ಅವರಿಗಿಂತ ಮೇಲಿದ್ದಾರೆ.

ಜಯಶ್ರೀ ಉಳ್ಳಾಲ ಇತ್ತೀಚಿನವರೆಗೂ ಹೊಂದಿದ್ದ ಆಸ್ತಿಮೌಲ್ಯ 2.1 ಬಿಲಿಯನ್ ಯುಕೆ ಡಾಲರ್ ಇತ್ತು. ಸುಮಾರು 16 ಸಾವಿರ ಕೋಟಿ ರೂಪಾಯಿ. ಷೇರುಪೇಟೆಯ ಅಲುಗಾಟದ ಕಾರಣ ಇವರ ಆಸ್ತಿಮೌಲ್ಯ 1.7 ಬಿಲಿಯನ್‌ಗೆ ಇಳಿದಿದೆ. ಅದರೂ ಕೂಡ ಸ್ವಂತವಾಗಿ ಬೆಳೆದು ಅತ್ಯಂತ ಶ್ರೀಮಂತರಾದ ನೂರು ಅಮೆರಿಕನ್ನರ ಪಟ್ಟಿಯಲ್ಲಿ 15ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಉದ್ಯಮಿ ಗೌತಮ್ ಅದಾನಿಗೆ 5ನೇ ಸ್ಥಾನಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಉದ್ಯಮಿ ಗೌತಮ್ ಅದಾನಿಗೆ 5ನೇ ಸ್ಥಾನ

ಕುತೂಹಲವೆಂದರೆ ಈ ನೂರು ಮಂದಿ ವಿಶೇಷ ಅಮೆರಿಕನ್ನರ ಪಟ್ಟಿಯಲ್ಲಿ ಭಾರತದ ಐವರು ಮಾತ್ರ ಇದ್ದಾರೆ. ಈ ಐವರಲ್ಲಿ ಜಯಶ್ರೀ ಉಲ್ಲಾಳ ಅಗ್ರಗಣ್ಯರು. ನೀರಜಾ ಸೇಥಿ 24ನೇ ಸ್ಥಾನದಲ್ಲಿದ್ದು ಸಮೀಪದಲ್ಲಿದ್ದಾರೆ. ಇವರಿಬ್ಬರು ಬಿಟ್ಟರೆ ಇಂದ್ರಾ ನೂಯಿ, ನೇಹಾ ನರ್ಖೆಡೆ, ರೇಷ್ಮಾ ಶೆಟ್ಟಿ ಈ ಪಟ್ಟಿಯಲ್ಲಿರುವ ಭಾರತೀಯ ಸಮುದಾಯದ ಇತರರು.

 ಅಗ್ರಮಾನ್ಯ ಅಮೆರಿಕನ್ ಶ್ರೀಮಂತೆಯರು

ಅಗ್ರಮಾನ್ಯ ಅಮೆರಿಕನ್ ಶ್ರೀಮಂತೆಯರು

1) ಡಯಾನೆ ಹೆಂಡ್ರಿಕ್ಸ್ (12.2 ಬಿಲಿಯನ್ ಡಾಲರ್)
2) ಜೂಡಿ ಫಾಲ್ಕ್ನರ್ (6.7 ಬಿಲಿಯನ್ ಡಾಲರ್)
3) ಜೂಡಿ ಲವ್ (5.2 ಬಿಲಿಯನ್ ಡಾಲರ್)
4) ಜೋನೆಲೆ ಹಂಟ್ (4.3 ಬಿಲಿಯನ್ ಡಾಲರ್)
5) ಮಾರಿಯನ್ ಇಲಿಚ್ (5.3 ಬಿಲಿಯನ್ ಡಾಲರ್)
6) ಥಾಯ್ ಲೀ (4.1 ಬಿಲಿಯನ್ ಡಾಲರ್)
7) ಗೇಲ್ ಮಿಲ್ಲರ್ (4 ಬಿಲಿಯನ್ ಡಾಲರ್)
8) ಲಿಂಡಾ ರೆಸ್ನಿಕ್ (4 ಬಿಲಿಯನ್ ಡಾಲರ್)
9) ಮೆಗ್ ವಿಟ್‌ಮ್ಯಾನ್ (3.1 ಬಿಲಿಯನ್ ಡಾಲರ್)
10) ಎರೆನ್ ಓಜ್‌ಮೆನ್ (2.6 ಬಿಲಿಯನ್ ಡಾಲರ್)
11) ಓಪ್ರಾ ವಿನ್‌ಫ್ರೇ (2.6 ಬಿಲಿಯನ್ ಡಾಲರ್)
12) ಪೆಗ್ಗಿ ಚೆರಂಗ್ (2.4 ಬಿಲಿಯನ್ ಡಾಲರ್)
13) ಡೋರಿಸ್ ಫಿಶರ್ (2.4 ಬಿಲಿಯನ್ ಡಾಲರ್)
14) ಅಲೈಸ್ ಶ್ವಾರ್ಟ್ಜ್ (2.3 ಬಿಲಿಯನ್ ಡಾಲರ್)
15) ಜಯಶ್ರೀ ಉಳ್ಳಾಲ (1.9 ಬಿಲಿಯನ್ ಡಾಲರ್)

Forbes' India billionaires 2022: ಭಾರತದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿಗೆ ಅಗ್ರಸ್ಥಾನForbes' India billionaires 2022: ಭಾರತದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿಗೆ ಅಗ್ರಸ್ಥಾನ

 ಪಟ್ಟಿಯಲ್ಲಿರುವ ಇತರ ಭಾರತೀಯರು

ಪಟ್ಟಿಯಲ್ಲಿರುವ ಇತರ ಭಾರತೀಯರು

24) ನೀರಜಾ ಸೇಠಿ, ಐಟಿ ಕನ್ಸಲ್ಟೆಂಟ್ ಕಂಪನಿ ಸಿಂಟೆಲ್‌ನ ಸಹ ಸಂಸ್ಥಾಪಕಿ
57) ನೇಹಾ ನರ್ಖೆಡೆ, ಕ್ಲೌಡ್ ಕಂಪ್ಯೂಟಿಂಗ್ ಕಂಪನಿ ಕಾನ್‌ಫ್ಲುಯೆಂಟ್‌ನ ಸಹ ಸಂಸ್ಥಾಪಕಿ
85) ಇಂದ್ರಾ ನೂಯಿ, ಪೆಪ್ಸಿಕೋ ಕಂಪನಿಯ ಸಿಇಒ
97) ರೇಷ್ಮಾ ಶೆಟ್ಟಿ, ಗಿಂಗ್‌ಕೋ ಬಯೋವರ್ಕ್ಸ್ ಕಂಪನಿಯ ಸಹ-ಸಂಸ್ಥಾಪಕಿ

 ಜಯಶ್ರೀ ಉಲ್ಲಾಳ ಯಾರು?

ಜಯಶ್ರೀ ಉಲ್ಲಾಳ ಯಾರು?

ಜಯಶ್ರೀ ಉಳ್ಳಾಲ ಅಮೆರಿಕದ ಅರಿಸ್ಟಾ ನೆಟ್ವರ್ಕ್ಸ್ ಕಂಪನಿಯ ಸಿಇಒ. ಇದು ಕಂಪ್ಯೂಟರ್ ನೆಟ್ವರ್ಕಿಂಗ್ ಕಂಪನಿ. 2008ರಿಂದಲೂ ಜಯಶ್ರೀ ಈ ಕಂಪನಿಯಲ್ಲಿ ಸಿಇಒ ಆಗಿದ್ದಾರೆ.

ಅರಿಸ್ಟಾ ನೆಟ್ವರ್ಕ್ಸ್ ಕಂಪನಿಗೆ ಈಕೆ ಸೇರಿದಾಗ ಒಟ್ಟು ಸಿಬ್ಬಂದಿ ಸಂಖ್ಯೆ ಇದ್ದದ್ದು 50 ಮಾತ್ರ. ಆದಾಯ ಕೂಡ ಶೂನ್ಯವಿತ್ತು. ಈಗ ಕಂಪನಿ ಆದಾಯ ಸಾವಿರಾರು ಕೋಟಿ ರೂ ಆಗಿದೆ. 2014ರಲ್ಲಿ ಅರಿಸ್ಟಾ ನೆಟ್ವರ್ಕ್ ಸಂಸ್ಥೆಯನ್ನು ಪಬ್ಲಿಕ್ ಲಿಸ್ಟಿಂಗ್‌ಗೆ ತೆಗೆದುಕೊಂಡು ಬಂದದ್ದು ಟರ್ನಿಂಗ್ ಪಾಯಿಂಟ್.

 ಭಾರತ ಮೂಲದವರು

ಭಾರತ ಮೂಲದವರು

61 ವರ್ಷದ ಜಯಶ್ರೀ ವಿ ಉಳ್ಳಾಲ ಅವರು ಮೂಲತಃ ತಮಿಳರು. ಇವರು ಹುಟ್ಟಿದ್ದು ಲಂಡನ್‌ನಲ್ಲಿ, ಬೆಳೆದದ್ದು ದೆಹಲಿಯಲ್ಲಿ. ನಂತರ ಸೆಟಲ್ ಆಗಿದ್ದು ಅಮೆರಿಕದಲ್ಲಿ. ಇವರ ಪತಿ ಕರ್ನಾಟಕ ಮೂಲದವರು. ಅಂತೆಯೇ, ಜಯಶ್ರೀ ಅವರೊಬ್ಬ ಪಕ್ಕಾ ಕಾಸ್ಮೊಪೊಲಿಟನ್.

"ಮನುಷ್ಯರಾಗಿ ನಾವೆಲ್ಲರೂ ಒಳ್ಳೆಯ ಕೆಲಸ ಮಾಡಬಯಸುತ್ತೇವೆ. ನಮ್ಮ ಕಾರ್ಯಕ್ಕೆ ಮೆಚ್ಚುಗೆ, ಸಮ್ಮತಿ ಸಿಗಲು ಇಚ್ಛಿಸುತ್ತೇವೆ. ನಿಮ್ಮ ಸಹೋದ್ಯೋಗಿಗಳನ್ನು ಮತ್ತು ತಂಡವನ್ನು ಗೌರವದಿಂದ ಕಾಣಿರಿ. ಅವರಲ್ಲಿ ಅಂತರ್ಗತವಾಗಿರುವ ಶಕ್ತಿಯನ್ನು ಉದ್ದೀಪನಗೊಳಿಸಿ ಅವರ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿ" - ಇದು ಜಯಶ್ರೀ ಉಳ್ಳಾಲ್ ಅವರ ಅನಿಸಿಕೆ.

 ಪ್ರಶಸ್ತಿ, ಗೌರವಗಳು

ಪ್ರಶಸ್ತಿ, ಗೌರವಗಳು

ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮತ್ತು ಎಂಜಿನಿಯರಿಂಗ್ ಮ್ಯಾನೇಜ್ಮೆಂಟ್‌ನಲ್ಲಿ ಮಾಸ್ಟರ್ಸ್ ಓದಿರುವ ಜಯಶ್ರೀ ಉಳ್ಳಾಲ ಅವರು ಎಎಂಡಿ ಕಂಪನಿ ಮೂಲಕ ವೃತ್ತಿ ಆರಂಭಿಸಿದರು. ೧೯೯೩ರಲ್ಲಿ ಸಿಸ್ಕೋ ಸಿಸ್ಟಮ್ಸ್ ಕಂಪನಿ ಸೇರಿದರು. 15 ವರ್ಷಗಳಿಗೂ ಹೆಚ್ಚು ಕಾಲ ಸಿಸ್ಕೋದಲ್ಲಿದ್ದ ಅವರು ಸೀನಿಯರ್ ವೈಸ್ ಪ್ರೆಸಿಡೆಂಟ್ ಸ್ಥಾನದವರೆಗೂ ಏರಿದ್ದರು. ಅದಕ್ಕಿಂತ ಹೆಚ್ಚಾಗಿ ಸಿಸ್ಕೋದ ಆದಾಯ ಹೆಚ್ಚಲು ಜಯಶ್ರೀ ಕೊಡುಗೆ ಬಹಳ ಇದೆ. ಸಿಸ್ಕೋ ಬಳಿಕ ಅವರು ಅರಿಸ್ಟಾ ನೆಟ್ವರ್ಕ್ಸ್ ಸೇರಿದರು.

2013ರಲ್ಲಿ ಅವರು ನೆಟ್ವರ್ಕಿಂಗ್ ಉದ್ಯಮದಲ್ಲಿರುವ ಐದು ಅತ್ಯಂತ ಪ್ರಭಾವಿ ಜನರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. 2018ರಲ್ಲಿ ಬ್ಯಾರಾನ್ ಪ್ರಕಟಿಸಿದ ವಿಶ್ವದ ಅತ್ಯುತ್ತಮ ಸಿಇಒಗಳ ಪಟ್ಟಿಯಲ್ಲಿ ಜಯಶ್ರೀ ಇದ್ದರು. ಹಾಗೆಯೇ, ಫಾರ್ಚೂನ್‌ನ ಟಾಪ್ 20 ಬ್ಯುಸಿನೆಸ್ ಪರ್ಸನ್ಸ್ ಪಟ್ಟಿಯಲ್ಲೂ ಜಯಶ್ರೀ ಇದ್ದಾರೆ.

ಇವೂ ಅಲ್ಲದೇ ಇನ್ನೂ ಅನೇಕ ಗೌರವ, ಸಾಧನೆ, ಮೈಲಿಗಲ್ಲುಗಳು ಜಯಶ್ರೀ ಉಳ್ಳಾಲ ಅವರದ್ದಾಗಿದೆ.

(ಒನ್ಇಂಡಿಯಾ ಸುದ್ದಿ)

English summary
Indian American Jayshree Ullal has found place in Forbe's list of self made 100 Richest American Women. Jayashree is the CEO of Arista Networks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X