• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್‌ಗೆ ಗೇಟ್‌ಪಾಸ್, ನೈಜೀರಿಯಾ ಎಂಟ್ರಿಗೆ ಕೂ ಆಪ್ ಸಜ್ಜು

|
Google Oneindia Kannada News

ಜನಪ್ರಿಯ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ತನ್ನ ನೀತಿ ನಿಯಮದ ಕಾರಣಕ್ಕಾಗಿ ಹಲವು ದೇಶಗಳಲ್ಲಿ ಹಿನ್ನಡೆ ಅನುಭವಿಸುತ್ತಿದೆ. ನೈಜೀರಿಯಾದ ಅಧ್ಯಕ್ಷ ಮೊಹಮ್ಮದ್ ಬುಹಾರಿ ಅವರ ಟ್ವೀಟ್ ಡಿಲೀಟ್ ಮಾಡಿದ ಬೆನ್ನಲ್ಲೇ ಟ್ವಿಟ್ಟರ್ ಮೇಲೆ ನಿಷೇಧ ಹೇರಲಾಗಿದೆ. ಇದೇ ಅವಕಾಶ ಬಳಸಿಕೊಳ್ಳಲು ಬೆಂಗಳೂರು ಮೂಲದ ದೇಶಿ ತಾಣ ಕೂ ಆಪ್ ಸಜ್ಜಾಗಿದೆ.

ಕೂ ಕಂಪನಿಯ ಸಹ ಸ್ಥಾಪಕ ಅಪ್ರೇಮಯ ರಾಧಾಕೃಷ್ಣ ಟ್ವೀಟ್ ಮಾಡಿ, ನೈಜೀರಿಯಾದಲ್ಲಿ ಕೂ ಲಭ್ಯವಿದೆ. ಅಲ್ಲೂ ಕೂಡಾ ಸ್ಥಳೀಯ ಭಾಷೆ ಸೌಲಭ್ಯ ಒದಗಿಸಲು ಯೋಚಿಸಲಾಗುತ್ತಿದೆ, ಏನಂತೀರಾ? ಎಂದಿದ್ದಾರೆ.

ಕನ್ನಡಿಗರಿಂದ ಎಲ್ಲರಿಗಾಗಿ 'Koo App', ಏನಿದರ ವಿಶೇಷ?ಕನ್ನಡಿಗರಿಂದ ಎಲ್ಲರಿಗಾಗಿ 'Koo App', ಏನಿದರ ವಿಶೇಷ?

ಕಳೆದ ವರ್ಷ 34 ಮಿಲಿಯನ್ ಡಾಲರ್ ಹೂಡಿಕೆ ಪಡೆದುಕೊಂಡ ಬೆಂಗಳೂರು ಮೂಲದ ಕೂ ಸಂಸ್ಥೆ ಸ್ಥಳೀಯ ಭಾಷೆ ಬಳಕೆ ಮೇಲೆ ಹೆಚ್ಚಿನ ಗಮನ ಹರಿಸಿದೆ.

ಕೂ ಭಾರತೀಯ ಭಾಷೆಗಳಲ್ಲಿ ಭಾರತದ ಸ್ವಂತ ಮೈಕ್ರೋಬ್ಲಾಗಿಂಗ್ ವೇದಿಕೆಯಾಗಿದೆ. ಕೂ ಹಿಂದಿ, ಕನ್ನಡ, ತೆಲುಗು, ತಮಿಳು, ಬಂಗಾಳಿ, ಗುಜರಾತಿ ಮತ್ತು ಮರಾಠಿ ಭಾಷೆಗಳಲ್ಲಿ ಲಭ್ಯವಿದ್ದು, ಇದು ಶೀಘ್ರದಲ್ಲೇ ಇಂಗ್ಲಿಷ್ ಭಾಷೆಯಲ್ಲಿ ಸಹ ಆರಂಭವಾಗಲಿದೆ. ಮೈಕ್ರೋಬ್ಲಾಗಿಂಗ್ ವೇದಿಕೆಯಲ್ಲಿ ಕೂ ನೇರವಾಗಿ ಟ್ವಿಟ್ಟರ್‌ನೊಂದಿಗೆ ಸ್ಪರ್ಧಿಸುತ್ತಿವೆ.

ಎಲ್ಲಾ ಹಂತದ ವೃತ್ತಿಯ ಹಾಗೂ ವಿಭಾಗದ ಜನರು ಕೂನಲ್ಲಿದ್ದಾರೆ - ರಾಜಕಾರಣಿಗಳು, ಕನ್ನಡ ಚಲನಚಿತ್ರೋದ್ಯಮಿಗಳು, ಕ್ರೀಡಾ ತಾರೆಗಳು, ಲೇಖಕರು, ಬರಹಗಾರರು, ಕವಿಗಳು, ಗಾಯಕರು, ಸಂಗೀತ ಸಂಯೋಜಕರು, ಪತ್ರಕರ್ತರು, ಸಂಪಾದಕರು ಮತ್ತು ಲಕ್ಷಾಂತರ ಬಳಕೆದಾರರು 1000 ಕ್ಕೂ ವಿವಿಧ ವೃತ್ತಿಗಳಲ್ಲಿರುವ ಜನರಿದ್ದಾರೆ. ರೈತರು, ಚಾಲಕರು, ಬಡಗಿಗಳು ಮತ್ತು ಎಲ್ಲೂ ಕೇಳದ ಸಮಾಜದ ಕೆಲವು ವರ್ಗಗಳಿಂದ ಕೂ ವೇದಿಕೆ ಧ್ವನಿಯಾಗಿದೆ.

English summary
Indian social networking company Koo on Saturday said it considering getting into Nigeria. After Twitter suspension
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X