• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ-ಅಮೆರಿಕನ್ ದಂಪತಿಯ ಐಟಿ ಕಂಪೆನಿ $2 ಬಿಲಿಯನ್‌ಗೆ ಮಾರಾಟ

|

ಬೆಂಗಳೂರು, ಜುಲೈ 24: ಭಾರತೀಯ-ಅಮೆರಿಕನ್ ಜೋಡಿ ಭರತ್ ದೇಸಾಯಿ ಮತ್ತು ನೀರಜಾ ಸೇಥಿ ತಮ್ಮ ಐಟಿ ಸೇವಾ ಕಂಪೆನಿ 'ಸಿಂಟೆಲ್'ಅನ್ನು ಫ್ರೆಂಚ್ ಐಟಿ ದಿಗ್ಗಜ ಅಟೋಸ್‌ಗೆ 3.4 ಬಿಲಿಯನ್ ಡಾಲರ್‌ಗೆ ಮಾರಾಟ ಮಾಡಿದ್ದಾರೆ.

ಇಬ್ಬರೂ ಕಂಪೆನಿಯ ಶೇ 57ರಷ್ಟು ಪಾಲುದಾರಿಕೆ ಉಳಿಸಿಕೊಂಡಿದ್ದು, ಇದರಿಂದ ಅವರು ಈ ಒಪ್ಪಂದದ ಪ್ರಕಾರ ಸುಮಾರು 2 ಬಿಲಿಯನ್ ಡಾಲರ್ ಪಡೆದುಕೊಳ್ಳಲಿದ್ದಾರೆ.

ವಿಪ್ರೋಗೆ ಜೂನ್ 30ರ ತ್ರೈ ಮಾಸಿಕದಲ್ಲಿ 2,121 ಕೋಟಿ ನಿವ್ವಳ ಲಾಭ

ಕೀನ್ಯಾದಲ್ಲಿ ಜನಿಸಿದ ದೇಸಾಯಿ, ಮೊಂಬಾಸಾ ಮತ್ತು ಅಹ್ಮದಾಬಾದ್‌ನಲ್ಲಿ ಬೆಳೆದಿದ್ದರು. ಐಐಟಿ ಬಾಂಬೆಯಲ್ಲಿ ಎಲೆಕ್ರ್ಟಿಕಲ್ ಎಂಜಿನಿಯರಿಂಗ್ ಪದವಿ ಪೂರೈಸಿದ್ದರು.

ಟಿಸಿಎಸ್‌ನಲ್ಲಿ ಕೆಲ ಕಾಲ ಕೆಲಸ ಮಾಡಿದ್ದ ಅವರು ಬಳಿಕ ಎಂಬಿಎ ಓದಲು ಮಿಚಿಗನ್ ವಿಶ್ವವಿದ್ಯಾಲಯಕ್ಕೆ ತೆರಳಿದ್ದರು. 1980ರಲ್ಲಿ ಅಲ್ಲಿ ಸೇಥಿ ಅವರನ್ನು ಭೇಟಿ ಮಾಡಿದ್ದರು.

ಓದು ಮುಂದುವರಿಸುತ್ತಿರುವಾಗಲೇ ಇಬ್ಬರೂ ಕಂಪೆನಿಯೊಂದನ್ನು ಪ್ರಾರಂಭಿಸಲು ನಿರ್ಧರಿಸಿದ್ದರು. ಟಿಸಿಎಸ್ ಮಾದರಿಯಲ್ಲಿಯೇ ಅವರು ಕಂಪೆನಿ ತೆರದಿದ್ದರು.

ಬಿಲ್ ಗೇಟ್ಸ್ ಹಿಂದಿಕ್ಕಿ ಅತ್ಯಂತ ಶ್ರೀಮಂತ ಎನಿಸಿದ ಜೆಫ್!

2017 ರ ಹಣಕಾಸು ವರ್ಷದಲ್ಲಿ $923 ಮಿಲಿಯನ್ ಆದಾಯ ಪಡೆದಿದ್ದ ಸಿಂಟೆಲ್‌ಗೆ ಅವರು ಆರಂಭದಲ್ಲಿ ಹೂಡಿದ್ದ ಬಂಡವಾಳ $2,000 ಮಾತ್ರ.

ಮೊದಲ ವರ್ಷ $30,000 ಆದಾಯ ಗಳಿಸಿದ್ದ ಕಂಪೆನಿ, 1982ರಲ್ಲಿ ಜನರಲ್ ಮೋಟಾರ್ಸ್ ಜತೆ ಗ್ರಾಹಕರಾಗಿ ಸಹಿ ಹಾಕಿದ ಬಳಿಕ ಸಾಕಷ್ಟು ವೇಗವಾಗಿ ಬೆಳೆಯತೊಡಗಿತು.

ಸಿಂಟೆಲ್ ಆರಂಭವಾದ ಒಂದು ವರ್ಷದಲ್ಲಿಯೇ ಆರಂಭವಾಗಿದ್ದ ಇನ್ಫೋಸಿಸ್, ಈಗ ವಾರ್ಷಿಕ $10 ಬಿಲಿಯನ್‌ಗೂ ಅಧಿಕ ಆದಾಯ ಹೊಂದಿದ್ದು, ಇದು ಸಿಂಟೆಲ್‌ಗಿಂತಲೂ 10 ಪಟ್ಟು ಅಧಿಕವಾಗಿದೆ.

English summary
Indian-American couple Bharat Desai and Neerja Sethi have sold their IT services company Cyntel for $3.4 billion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X