ವಿಮಾನಯಾನ ರಿಯಾಯತಿ ಟಿಕೆಟ್ ಗಳ ಸಂಭ್ರಮ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 11 : ಭಾರತದಲ್ಲಿ ಈಗ ವಿಮಾನಯಾನ ಮಾಡಲು ಬಯಸುವವರಿಗೆ ಪರ್ವಕಾಲ. ಸ್ವಾತಂತ್ರೋತ್ಸವ ದಿನಾಚರಣೆ, ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಸಾಲು ಸಾಲು ರಜೆ ಲಭ್ಯವಾಗಿರುವುದರಿಂದ ವಿಹಾರ ಯಾತ್ರೆ ಕೈಗೊಳ್ಳುವವರಿಗೆ ಕೈಗೆಟುಕುವ ದರದಲ್ಲಿ ವಿಮಾನದ ಟಿಕೆಟ್ ದರ ಲಭ್ಯವಾಗುತ್ತಿದೆ.

ಟಾಟಾ ಸಂಸ್ಥೆಯ ಏರ್ ವಿಸ್ತಾರ ಮೊದಲಿಗೆ ಆರಂಭಿಸಿದ ಈ ರಿಯಾಯಿತಿ ಟಿಕೆಟ್ ದರ ಸಮರಕ್ಕೆ ಎಲ್ಲಾ ಪ್ರಮುಖ ಸಂಸ್ಥೆಗಳು ಧುಮುಕಿವೆ.

ಈ ವಿಸ್ತಾರ ಆಫರ್ ಯೋಜನೆಯಲ್ಲಿ ಟಿಕೆಟ್ ಮುಂಗಡ ಕಾದಿರಿಸುವಿಕೆ ಎರಡು ದಿನಗಳು ಅಂದರೆ ಆಗಸ್ಟ್ 8 ಹಾಗೂ 9ಕ್ಕೆ ಮಾಡಬಹುದು ಹಾಗೂ ಬುಕ್ಕಿಂಗ್ ಮಾಡಿದವರು ಆಗಸ್ಟ್ 23, 2017 ಹಾಗೂ ಏಪ್ರಿಲ್ 19, 2018 ನಡುವೆ ಪ್ರಯಾಣಿಸಬಹುದು.

ಈಗ ಏರ್ ಏಷ್ಯಾ, ಸ್ಪೈಸ್ ಜೆಟ್, ಇಂಡಿಗೋ, ಜೆಟ್ ಏರ್ ವೇಸ್ ಕೂಡಾ ರಿಯಾಯಿತಿ ದರದಲ್ಲಿ ಟಿಕೆಟ್ ಗಳನ್ನು ನೀಡುತ್ತಿವೆ. ಇನ್ನಷ್ಟು ವಿವರ ಮುಂದಿದೆ...

ಏರ್ ಏಷ್ಯಾ ಆಫರ್

ಏರ್ ಏಷ್ಯಾ ಆಫರ್

ಮೇಕ್ ಮೈ ಟ್ರಿಪ್ ಮೂಲಕ ಸಿಟಿ ಬ್ಯಾಂಕ್ ಗ್ರಾಹಕರಿಗೆ ಶೇ 15ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು, ದೇಶಿ ವಿಮಾನಯಾನಕ್ಕೆ ಇದು ಸೀಮಿತವಾಗಿದೆ. ಆಗಸ್ಟ್ 11, 2017ರಂದು ಇದು ಮುಕ್ತಾಯವಾಗಿದೆ.
ಅಕ್ಬರ್ ಟ್ರಾವೆಲ್.ಕಾಂ ಮ್ಜೂಲಕ ಟಿಕೆಟ್ ಬುಕ್ ಮಾಡಿದರೆ ದೇಶಿ ವಿಮಾನಯಾನದ ಮೇಲೆ 750 ರು ಹಾಗೂ ಅಂತಾರಾಷ್ಟ್ರೀಯ ವಿಮಾನದ ಪ್ರಯಾಣ ಟಿಕೆಟ್ ದರದ ಮೇಲೆ 1,000 ರು ರಿಯಾಯಿತಿ ನೀಡಲಾಗುತ್ತಿದೆ.

ವಿಸ್ತಾರ ನೀಡಿರುವ ಆಫರ್

ವಿಸ್ತಾರ ನೀಡಿರುವ ಆಫರ್

ವಿಸ್ತಾರ ನೀಡಿರುವ ಆಫರ್ : ದೆಹಲಿ-ಶ್ರೀನಗರ, ದೆಹಲಿ-ಅಹ್ಮದಾಬಾದ್ (1,499 ರು), ದೆಹಲಿ-ಮುಂಬೈ, ದೆಹಲಿ-ಪುಣೆ (2,099 ರು), ದೆಹಲಿ-ಕೊಲ್ಕತ್ತಾ (2,199 ರು) ಮತ್ತು ದೆಹಲಿ -ಗೋವಾ ನಡುವಿನ ಪ್ರಯಾಣಕ್ಕೆ 1,499 ರು ನಿಗದಿ ಪಡಿಸಲಾಗಿದೆ.

ಎಚ್ ಡಿ ಎಫ್ ಸಿ ಗ್ರಾಹಕರಿಗೆ

ಎಚ್ ಡಿ ಎಫ್ ಸಿ ಗ್ರಾಹಕರಿಗೆ

ಕಡಿಮೆ ದರದಲ್ಲಿ ಪ್ರಯಾಣ ಬಯಸುವವರಿಗೆ ಸೇವೆ ಒದಗಿಸುವ ಸ್ಪೈಸ್ ಜೆಟ್ ಲಿಮಿಟೆಡ್ ಸಂಸ್ಥೆಯಿಂದ ಎಚ್ ಡಿ ಎಫ್ ಸಿ ಬ್ಯಾಂಕ್ ಗ್ರಾಹಕರಿಗೆ ಉಚಿತ ಆದ್ಯತೆ ಚೆಕ್ ಇನ್, 1000 ರು ತನಕ ರಿಯಾಯಿತಿ ಇದೆ ಆಗಸ್ಟ್ 9 ಹಾಗೂ ಆಗಸ್ಟ್ 15, 2017.

ಇಂಡಿಗೋ ಆಫರ್

ಇಂಡಿಗೋ ಆಫರ್: ದೆಹಲಿ, ಕೇರಳ, ಉದಯಪುರ ಸೇರಿದಂತೆ ಹಲವೆಡೆ ವಿಮಾನಯಾನದ ಮೇಲೆ 1,111 ರು ರಿಯಾಯಿತಿ ಹಾಗೂ ಮುಂಬೈ, ಗೋವಾ, ಬೆಂಗಳೂರು, ಗುವಾಹಟಿ, ಕೋಲ್ಕತಾ ಹಾಗೂ ಚೆನ್ನೈ ವಿಮಾನಯಾನದ ಮೇಲೂ ರಿಯಾಯಿತಿ ನೀಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Independence Day Offer : Airlines namely AirAsia India, Jet Airways, SpiceJet, Indigo in India are wooing customers with discounted offers during Independence Day and Janmashtami holidays
Please Wait while comments are loading...