• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುಪಿಐ ವಹಿವಾಟು ಶುಲ್ಕ ವಾಪಸ್ ಮಾಡಲು ಬ್ಯಾಂಕಿಗೆ ಸೂಚನೆ

|

ನವದೆಹಲಿ, ಆ. 31: ರುಪೇ ಕಾರ್ಡ್, ಭೀಮ್ ಮುಂತಾದ ಯುಪಿಐ ಮೂಲಕ ವಹಿವಾಟು ನಡೆಸಿದ್ದಕ್ಕೆ ಶುಲ್ಕ ವಿಧಿಸಿದ್ದರೆ, ವಾಪಸ್ ಮಾಡುವಂತೆ ಬ್ಯಾಂಕುಗಳಿಗೆ ಆದಾಯ ತೆರಿಗೆ ಇಲಾಖೆ ಸೂಚಿಸಿದೆ. ಜನವರಿ 01 ರ ನಂತರ ಯುಪಿಐ ವ್ಯವಹಾರಕ್ಕೆ ಇದು ಅನ್ವಯವಾಗಲಿದೆ.ಇದಲ್ಲದೆ, ಎಲೆಕ್ಟ್ರಾನಿಕ್ ವಹಿವಾಟು, ಇ ಪೇಮೆಂಟ್ ವಿಧಾನದಲ್ಲಿ ಹೆಚ್ಚುವರಿ ಶುಲ್ಕ ವಿಧಿಸದಂತೆ ಕೂಡಾ ಬ್ಯಾಂಕುಗಳಿಗೆ ಆದಾಯ ತೆರಿಗೆ ಇಲಾಖೆ ಸೂಚಿಸಿದೆ.

ರುಪೇ ಕಾರ್ಡ್, ಭೀಮ್ ಯುಪಿಐ ಮಾದರಿ ಇ- ವಹಿವಾಟುಗಳ ಮೇಲೆ ವಿಧಿಸಲಾದ ಶುಲ್ಕವನ್ನು ಗ್ರಾಹಕರಿಗೆ ಹಿಂತಿರುಗಿಸಲು ಸೂಚಿಸಲಾಗಿದೆ. 2019ರ ಹಣಕಾಸು ಕಾಯ್ದೆಯ ಸೆಕ್ಷನ್ 269 ಎಸ್ ಯು ಅಡಿಯಲ್ಲಿ ಸರ್ಕಾರ ನಗದು ರಹಿತ ಆರ್ಥಿಕತೆ ಅಂದರೆ ಡಿಜಿಟಲ್ ಪೇಮೆಂಟ್ ವಿಧಾನಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿದೆ.

ಜಿಎಸ್ಟಿ ಬಲವರ್ಧನೆ: ಡಿಜಿಟಲ್ ವ್ಯವಹಾರಕ್ಕೆ ಕ್ಯಾಶ್ ಬ್ಯಾಕ್ ಆಫರ್

50 ಕೋಟಿ ರು ಗಿಂತ ಅಧಿಕ ವಾರ್ಷಿಕ ವಹಿವಾಟು ಹೊಂದಿರುವ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಡಿಜಿಟಲ್ ಪೇಮೆಂಟ್ ವಿಧಾನಗಳಾದ ಭೀಮ್ ಯುಪಿಐ, ಯುಪಿಐ ಕ್ಯೂಆರ್ ಕೋಡ್, ಆಧಾರ್ ಪೇ, ಕೆಲವು ಡೆಬಿಟ್ ಕಾರ್ಡ್, ಎನ್ಇಎಫ್ ಟಿ ಹಾಗೂ ಆರ್ ಟಿ ಜಿಎಸ್ ವಿಧಾನ ಬಳಸಲು ಉತ್ತೇಜಿಸಬೇಕು ಎಂದು ಸರ್ಕಾರವೇ ಸೂಚಿಸಿದೆ.

ಸರ್ಕಾರದ ಸೂಚನೆ ಪಾಲಿಸುತ್ತಿರುವ ಕೆಲ ಕಂಪನಿಗಳು ಪ್ರತಿ ವಹಿವಾಟಿನ ಮೇಲೆ 2.50 ರಿಂದ 5 ರು ತನಕ ಹೆಚ್ಚುವರಿ ಶುಲ್ಕ ವಿಧಿಸುತ್ತಿವೆ ಎಂದು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಅಗತ್ಯ ಕ್ರಮವನ್ನು ಜರುಗಿಸಿದೆ.

English summary
Income Tax Department on Sunday warned banks for levying penalty for charges on electronic transactions(e-payments) using UPI kind of tools.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X