ವೆಂಟಿಲೇಟರ್ ತಯಾರಿಕೆಗೆ ಎಚ್ ಪಿ 3ಡಿಪಿ ತಂತ್ರಜ್ಞಾನ ನೆರವು
ಬೆಂಗಳೂರು, ಜೂನ್ 8: ಕೋವಿಡ್-19 ಸವಾಲುಗಳನ್ನು 3ಡಿ ಪ್ರಿಂಟಿಂಗ್ ಮೂಲಕ ಎದುರಿಸುವ ನಿಟ್ಟಿನಲ್ಲಿ ಎಚ್ ಪಿ ಇಂಕ್ ಮುಂಚೂಣಿಯಲ್ಲಿರುವ ಕೆಲಸಗಾರರು ಮತ್ತು ಸಮುದಾಯಕ್ಕೆ ಅನುಕೂಲವಾಗುವ ಸೌಲಭ್ಯ ಒದಗಿಸುವಲ್ಲಿ ಪ್ರಮುಖ ಮೈಲುಗಲ್ಲನ್ನು ಸಾಧಿಸಿದೆ. ಭಾರತದಲ್ಲಿ ಎಚ್ ಪಿ ರೆಡಿಂಗ್ಟನ್ 3ಡಿ ಜತೆ ಪಾಲುದಾರಿಕೆ ಮಾಡಿಕೊಳ್ಳುವ ಮೂಲಕ ಎಜಿವಿಎ ಹೆಲ್ತ್ ಕೇರ್ ಗೆ 1,20,000 ವೆಂಟಿಲೇಟರ್ ಭಾಗಗಳನ್ನು ಯಶಸ್ವಿಯಾಗಿ ಉತ್ಪಾದನೆ ಮಾಡಿದೆ. ಈ ಉಪಕ್ರಮದ ಮೂಲಕ 12 ವಿಭಾಗಗಳ 3ಡಿ ಪ್ರಿಂಟೆಡ್ ಆಗಿದ್ದು, 10,000 ವೆಂಟಿಲೇಟರ್ ಗಳನ್ನು ತಯಾರಿಸಲು ಬಳಕೆಯಾಗಿವೆ.
ದೇಶಾದ್ಯಂತ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಈ ವೆಂಟಿಲೇಟರ್ ಗಳನ್ನು ನಿಯೋಜನೆ ಮಾಡಲಾಗಿದೆ. ಈ ಬಿಡಿಭಾಗಗಳು ಇನ್ ಹೇಲ್ ಮತ್ತು ಎಕ್ಸ್ ಹೇಲ್ ಕನೆಕ್ಟರ್, ವ್ಯಾಲ್ವ್ ಹೋಲ್ಡರ್ ಗಳು, ಆಕ್ಸಿಜನ್ ನಾಝಲ್ ಗಳು ಮತ್ತು ಸೋಲ್ ನಾಯಿಡ್ ಮೌಂಟ್ಸ್ ಸೇರಿದಂತೆ ಹಲವು ಇವೆ. ಈ ಬಿಡಿ ಭಾಗಗಳು ಸಂಕೀರ್ಣವಾದ ವಿನ್ಯಾಸಗಳು ಮತ್ತು ಅತ್ಯುತ್ತಮ ಸಂವೇದನಾಶೀಲವಾಗಿವೆ. ಸಾಂಪ್ರದಾಯಿಕ ಪ್ರಕ್ರಿಯೆಯಡಿ ಇಷ್ಟೊಂದು ಪ್ರಮಾಣದ ಬಿಡಿಭಾಗಗಳನ್ನು ತಯಾರಿಸಲು 4-5 ತಿಂಗಳು ತೆಗೆದುಕೊಳ್ಳಲಾಗಿದೆ. ಎಚ್ ಪಿ 3ಡಿ ಪ್ರಿಂಟಿಂಗ್ ತಂತ್ರಜ್ಞಾನದಿಂದ ಕೇವಲ 24 ಗಂಟೆಗಳಲ್ಲಿ ಪ್ರಿಂಟ್ ಮಾಡಲಾಗಿದೆ.
ಎಚ್ ಪಿ ನೆವರ್ ಸ್ಟಾಪ್ ಲೇಸರ್ ಪ್ರಿಂಟರ್ ಮಾರುಕಟ್ಟೆಗೆ ಬಿಡುಗಡೆ
ಎಜಿವಿಎ ಹೆಲ್ತ್ ಕೇರ್ ವೆಂಟಿಲೇಟರ್ ಒಂದು ಐಸಿಯು ವೆಂಟೆಲೇಟರ್ ಆಗಿದೆ. ಇದರಲ್ಲಿ ಶಬ್ಧ, ಒತ್ತಡ ಮತ್ತು ಫ್ಲೋ ಕಂಟ್ರೋಲ್ ಇರುತ್ತದೆ. ಇಡೀ ಸಿಸ್ಟಂ ಅನ್ನು ಸಂಕುಚಿತ ವೈದ್ಯಕೀಯ ಏರ್ ಅಗತ್ಯವಿಲ್ಲದೇ ಕೆಪ್ಯಾಸಿಟಿವ್ ಮಲ್ಟಿ-ಟಚ್ ಇಂಟರ್ ಫೇಸ್ ನಿಂದ ನಿಯಂತ್ರಿಸಲಾಗುತ್ತದೆ. ಇದು ಪೋರ್ಟೇಬಲ್ ಆಗಿದೆ ಮತ್ತು ಇದನ್ನು ಐಸಿಯು ಸಾಗಣೆ ಅಥವಾ ಮನೆಯ ಆರೈಕೆಯಲ್ಲಿ ಬಳಸಬಹುದಾಗಿದೆ.

2.3 ದಶಲಕ್ಷ 3ಡಿ ಪ್ರಿಂಟೆಡ್ ಭಾಗಗಳ ಉತ್ಪಾದನೆ
ಈ ಪಾಲುದಾರಿಕೆಯು ಕೋವಿಡ್-19 ವಿರುದ್ಧದ ಹೋರಾಟದ ಜಾಗತಿಕ ಬದ್ಧತೆಯ ಅಂಗವಾಗಿದೆ. ಇಲ್ಲಿವರೆಗೆ ಎಚ್ ಪಿ ಮತ್ತು ಪಾಲುದಾರರು 2.3 ದಶಲಕ್ಷ 3ಡಿ ಪ್ರಿಂಟೆಡ್ ಭಾಗಗಳನ್ನು ಉತ್ಪಾದನೆ ಮಾಡಿದೆ. ಈ ಉಪಕ್ರಮದ ಅಂಗವಾಗಿ ಎಚ್ ಪಿ ತನ್ನ 3ಡಿ ಪ್ರಿಂಟಿಂಗ್ ತಂಡವನ್ನು ಮತ್ತು ವಿನ್ಯಾಸ, ಮೌಲ್ಯೀಕರಣ ಮತ್ತು ಮೆಡಿಕಲ್ ರೆಸ್ಪಾಂಡರ್ಸ್ ಮತ್ತು ಆಸ್ಪತ್ರೆಗಳೋಇಗೆ ಅಗತ್ಯ ಭಾಗಗಳಿಗೆ ಜಾಗತಿಕ ಡಿಜಿಟಲ್ ಮ್ಯಾನ್ಯುಫ್ಯಾಕ್ಚರಿಂಗ್ ನೆಟ್ ವರ್ಕ್ ಅನ್ನು ತ್ವರಿತಗೊಳಿಸಿದೆ.

ಕೋವಿಡ್-19 ಗೆ ನೆರವಾದ 3ಡಿ ಪ್ರಿಂಟಿಂಗ್ ಬಿಡಿಭಾಗಗಳು
ಫೀಲ್ಡ್ ವೆಂಟಿಲೇಟರ್: ಮೆಕ್ಯಾನಿಕಲ್ ಬ್ಯಾಗ್ ವ್ಯಾಲ್ವ್ ಮಾಸ್ಕ್ (ಬಿವಿಎಂ)ಗೆ 3ಡಿ ಭಾಗಗಳನ್ನು ವಿನ್ಯಾಸಗೊಳಿಸಲಾಗಿದೆ. ಇದನ್ನು ಕೋವಿಡ್ -19 ರೋಗಿಗಳ ಅಲ್ಪಾವಧಿ ತುರ್ತು ವೆಂಟಿಲೇಷನ್ ಗೆ ಬಳಸಲೆಂದು ವಿನ್ಯಾಸಗೊಳಿಸಲಾಗಿದೆ. ಈ ಸರಳೀಕೃತ ವಿನ್ಯಾಸವು ಡಿವೈಸ್ ನ ಸಂಕೀರ್ಣತೆಯನ್ನು ಕಡಿಮೆಗೊಳಿಸುತ್ತದೆ. ಇದಲ್ಲದೇ, ಕ್ಷಿಪ್ರಗತಿಯಲ್ಲಿ ಉತ್ಪಾದನೆ ಮತ್ತು ಜೋಡಣೆ ಮಾಡಬಹುದಾಗಿದೆ.
ಎಫ್ಎಫ್ ಪಿ3 ಫೇಸ್ ಮಾಸ್ಕ್: ನಿರೀಕ್ಷಿತ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯಕೀಯ ಸೇವಾದಾರರಿಗೆ ಪೂರಕವಾದ ಮತ್ತು ಪರಿಣಾಮಕಾರಿಯಾದ ಗೇರ್ ನ ಅಗತ್ಯವಿದೆ. ಈ ದಿಸೆಯಲ್ಲಿ ಎಚ್ ಪಿ ಹಲವಾರು ಮೌಲ್ಯೀಕರಿಸಿದ ಹಾಸ್ಪಿಟಲ್-ಗ್ರೇಡ್ ಫೇಸ್ ಮಾಸ್ಕ್ ಗಳನ್ನು ಉತ್ಪಾದಿಸುತ್ತಿದೆ ಮತ್ತು ವೇಗವಾಗಿ ಲಭ್ಯವಾಗುವಂತೆ ಮಾಡುತ್ತಿದೆ.

ಕೋವಿಡ್-19 ಗೆ ನೆರವಾದ 3ಡಿ ಪ್ರಿಂಟಿಂಗ್
ಹ್ಯಾಂಡ್ಸ್-ಫ್ರೀ ಡೋರ್ ಓಪನರ್: ಮನೆಗಳಲ್ಲಿ, ಆಸ್ಪತ್ರೆಗಳಲ್ಲಿ, ಫ್ಯಾಕ್ಟರಿಗಳಲ್ಲಿ ಮತ್ತು ವೃದ್ಧಾಶ್ರಮಗಳಲ್ಲಿ ಹೆಚ್ಚು ಸೂಕ್ಷ್ಮಾಣುಗಳು ಸೋಂಕಿತ ಭಾಗವೆಂದರೆ ಡೋರ್ ಹ್ಯಾಂಡಲ್ ಗಳು. ಅಡಾಪ್ಟರ್ ಗಳು ಸುಲಭವಾಗಿ ಮತ್ತು ಹೆಚ್ಚು ಸ್ಯಾನಿಟರಿಯಾಗಿ ಮೊಣಕೈನಿಂದ ತೆಗೆಯಲು ಸಹಾಯ ಮಾಡುತ್ತದೆ.
ಮಾಸ್ಕ್ ಅಡ್ಜಸ್ಟರ್: ಬಹುತೇಕ ಆಸ್ಪತ್ರೆಗಳಲ್ಲಿ ಸಿಬ್ಬಂದಿ ದೀರ್ಘಾವಧಿವರೆಗೆ ಮಾಸ್ಕ್ ಗಳನ್ನು ಧರಿಸಬೇಕಾಗುತ್ತದೆ. ಇದರಲ್ಲಿನ ಕ್ಲಾಸ್ಪ್ ಅನ್ನು ಕಿವಿಯ ನೋವು ಇಲ್ಲದಂತೆ ಮಾಡುವುದು ಮತ್ತು ಆರಾಮದಾಯಕತೆಯನ್ನು ಹೆಚ್ಚು ಮಾಡಲು ನೆರವಾಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
ಫೇಸ್ ಶೀಲ್ಡ್ ಗಳು: ಫೇಸ್ ಶೀಲ್ಡ್ ಗಳು ಅತ್ಯಂತ ಹೆಚ್ಚು ಅಗತ್ಯವಿರುವ ವ್ಯಕ್ತಿಗತ ರಕ್ಷಣಾ ಉತ್ಪನ್ನಗಳಲ್ಲಿ ಒಂದಾಗಿದೆ. ಇದರಲ್ಲಿನ ಬ್ರಾಕೆಟ್ ಗಳು ಶೀಲ್ಡ್ ಗಳನ್ನು ಹಿಡಿದುಕೊಳ್ಳುವುದು ಮತ್ತು ಧರಿಸುವವರಿಗೆ ಆರಾಮದಾಯಕತೆಯನ್ನು ನೀಡುವ ಒಂದು ನಿರ್ಣಾಯಕ ಕಂಪೋನೆಂಟ್ ಆಗಿದೆ.

ಎಚ್ ಪಿ ಫೌಂಡೇಷನ್
ಎಚ್ ಪಿ ಫೌಂಡೇಷನ್ ಒಟ್ಟು 3 ದಶಲಕ್ಷ ಯುಎಸ್ ಡಾಲರ್ ನಷ್ಟು ಧನ ಸಹಾಯ ಮಾಡಿದೆ. ಈ ಪೈಕಿ 1 ದಶಲಕ್ಷ ಯುಎಸ್ ಡಾಲರ್ ನಷ್ಟು ಹಣವನ್ನು ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡಲು ಪೂರಕವಾದ ವೈದ್ಯಕೀಯ ಸೌಲಭ್ಯವನ್ನು ಕಲ್ಪಿಸಲು ಮತ್ತು 2 ದಶಲಕ್ಷ ಯುಎಸ್ ಡಾಲರ್ ನಷ್ಟು ಹಣವನ್ನು ಕೋವಿಡ್-19 ಪರಿಹಾರ ಕಾರ್ಯಗಳಿಗೆ ಬಿಡುಗಡೆ ಮಾಡಲಾಗಿದೆ. ಮುಂಬರುವ ವಾರಗಳು ಮತ್ತು ತಿಂಗಳುಗಳಲ್ಲಿ ಜಾಗತಿಕ ಮತ್ತು ಸ್ಥಳೀಯ ಮಟ್ಟದಲ್ಲಿ ಕೋವಿಡ್-19 ವಿರುದ್ಧ ಹೋರಾಟವನ್ನು ನಡೆಸುವ ಪಾಲುದಾರರಿಗೆ ನೆರವಾಗುವತ್ತ ಎಚ್ ಪಿ ಫೌಂಡೇಷನ್ ಗಮನಹರಿಸಿದೆ. ಇದಲ್ಲದೇ, HP LIFE ನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಕೋರ್ಸ್ ಗಳನ್ನು ನೀಡಲಿದೆ. ಉದ್ಯಮಶೀಲತ್ವ, ಮಾರ್ಕೆಟಿಂಗ್ ಮತ್ತು ವ್ಯವಹಾರ ಬೆಳವಣಿಗೆಗೆ ಪೂರಕವಾದ ಕೋರ್ಸ್ ಗಳನ್ನು ನೀಡುವ ಕಾರ್ಯಕ್ರಮ ಇದಾಗಿದೆ. ಈ ವರ್ಷ ಇದಕ್ಕಾಗಿ 4 ದಶಲಕ್ಷ ಯುಎಸ್ ಡಾಲರ್ ನಷ್ಟು ಹಣವನ್ನು ಮೀಸಲಿಡಲಾಗಿದ್ದು, ಇದಕ್ಕೆ ಎಚ್ ಪಿ ಸಿಬ್ಬಂದಿ ಕೊಡುಗೆ ನೀಡಿದ್ದಾರೆ.