ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಟ್ಸಪ್ ಹಳೆ ಸ್ಟೇಟಸ್ ಸಿಗುತ್ತಿದೆ? ಹೇಗೆ ಸೆಟ್ ಮಾಡಿಕೊಳ್ಳೋದು

ಫೇಸ್ ಬುಕ್ ಒಡೆತನದ ವಾಟ್ಸಪ್ ಚಾಟಿಂಗ್ ಅಪ್ಲಿಕೇಷನ್ ನಲ್ಲಿ ಹೊಸ ಸ್ಟೇಟಸ್ ಸ್ಟೋರಿ ಅಪ್ಡೇಟ್ ಬಗ್ಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತೆ ಹಳೆ ಸ್ಟೇಟಸ್ ಸಿಗುತ್ತಿದೆ, ಹೇಗೆ ಸೆಟ್ ಮಾಡ್ಕೊಳ್ಳೋದು?

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 23: ಭಾರಿ ಪ್ರತಿರೋಧದ ನಂತರ ಫೇಸ್ ಬುಕ್ ಒಡೆತನದ ವಾಟ್ಸಪ್ ಅಪ್ಲಿಕೇಷನ್ ನಲ್ಲಿ ಮತ್ತೆ ಹಳೆ ಸ್ಟೇಟಸ್ ಸೌಲಭ್ಯ ನೀಡಲಾಗಿದೆ. ಈಗ ಸುಲಭವಾಗಿ ಸ್ಟೇಟಸ್ ಹಾಕಿಕೊಳ್ಳಬಹುದಾಗಿದೆ. ಇದು 2.17107 ಹಾಗೂ ನಂತರದ ಅಪ್ಡೇಟೆಡ್ ವರ್ಷನ್ ನಲ್ಲಿ ಲಭ್ಯವಿದೆ.

ಇದರ ಜೊತೆಗೆ ಹೊಸ ಸ್ಟೇಟಸ್ ಸ್ಟೋರಿ ಕೂಡಾ ಬಳಕೆದಾರರಿಗೆ ಲಭ್ಯವಿರಲಿದೆ. 24 ಗಂಟೆಗಳ ಕಾಲ ಇರುವ ಹೊಸ ಸ್ಟೇಟಸ್ ಸೌಲಭ್ಯ ಮೂಲಕ ಪಠ್ಯದ ಜತೆಗೆ ಚಿತ್ರಗಳು, ವಿಡಿಯೋ, ಅನಿಮೇಷನ್ ಹಾಕಿಕೊಳ್ಳಬಹುದು. [ವಾಟ್ಸಪ್ ಮೆಸೇಜ್ ಹ್ಯಾಕ್ ಹೇಗೆ? ಸೇಫ್ ಮಾಡೋದು ಹೇಗೆ?]

ಅಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಹಳೆ ಸ್ಟೇಟಸ್ ಸೌಲಭ್ಯ ಲಭ್ಯವಾಗಿದೆ. ವಾಟ್ಸಪ್ ಅಪ್ಲಿಕೇಷನ್ ಆವೃತ್ತಿ ಅಪ್ಡೇಟ್ ಮಾಡಿದರೆ ಬಳಕೆದಾರರಿಗೆ ಹಳೆ ಫೀಚರ್ ಸಿಗುತ್ತದೆ. [ವಾಟ್ಸಪ್ ಕಿರಿಕಿರಿ, ಎಲ್ಲರ 'ಸ್ಟೇಟಸ್' ಕಳಚಿದ ಫೇಸ್ಬುಕ್!]

ಈ ಹಿಂದಿನಂತೆ ಒಮ್ಮೆ ಸ್ಟೇಟಸ್ ಬದಲಾಯಿಸಿದರೆ ಎಷ್ಟು ದಿನ ಬೇಕಾದರೆ ಹಾಗೆ ಉಳಿಸಿಕೊಳ್ಳಬಹುದು. ಹೊಸ ಸ್ಟೇಟಸ್ ಸೌಲಭ್ಯದಂತೆ 24 ಗಂಟೆಗಳ ಕಿರಿಕಿರಿ ಇಲ್ಲ. ಜತೆಗೆ ಎಂದಿನಂತೆ ನಿಮ್ಮ ಖಾಸಗಿತನವನ್ನು ಉಳಿಸೊಳ್ಳಬಹುದು.. ಇನ್ನಷ್ಟು ಮಾಹಿತಿ ಮುಂದೆ ಓದಿ...

#1 ವಿಧಾನ

#1 ವಿಧಾನ

* ನಿಮ್ಮ ಮೊಬೈಲ್ ನಲ್ಲಿ ವಾಟ್ಸಪ್ ಓಪನ್ ಮಾಡಿ
* ಚಾಟಿಂಗ್ ಪಟ್ಟಿ ಎಲ್ಲವೂ ಓಪನ್ ಆದ ಬಳಿಕ
* ಚಾಟ್ ಸ್ಕ್ರೀನ್ ನ ಮೇಲ್ತುದಿಯಲ್ಲಿರುವ ಮೂರು ಡಾಟೆಟ್ ಚಿನ್ಹೆಯನ್ನು ಒತ್ತಿ.
* ಹೊಸ ಗುಂಪು, ಬ್ರಾಡ್ ಕಾಸ್ಟ್, ವಾಟ್ಸಪ್ ವೆಬ್, ಸ್ಟಾರ್ಟ್ಡ್ ಮೆಸೇಜ್ ನಂತರ ಕಾಣುವ Settings ಆಯ್ಕೆ ಮಾಡಿಕೊಳ್ಳಿ.

#2 ವಿಧಾನ

#2 ವಿಧಾನ

* About and phone number ಒತ್ತಿ, ಪ್ರೊಫೈಲ್ ಪಿಕ್ಚರ್/ ನೇಮ್ ಆಯ್ಕೆ ಮಾಡಿಕೊಳ್ಳಿ
* ಈ ಮುಂಚೆ ಇದ್ದ About ಬದಲಾಯಿಸುವ ಕಡೆಯಲ್ಲೇ ಸ್ಟೇಟಸ್ ಕೂಡಾ ಬದಲಾಯಿಸಬಹುದು. ಇದನ್ನು ನಿಮ್ಮ ಬಗ್ಗೆ ಹೇಳಿಕೊಳ್ಳುವ ಸಂದೇಶದಂತೆ ಬಿಂಬಿಸಲಾಗಿದ್ದು, ಹೊಸ ಸ್ಟೇಟಸ್ ಕೂಡಾ ಹಾಗೆ ಉಳಿಸಿಕೊಳ್ಳಲಾಗಿದೆ.
* ಪೆನ್ಸಿಲ್ ರೀತಿಯ ಚಿನ್ಹೆ ಒತ್ತಿ, ನಿಮ್ಮ ಆಯ್ಕೆಯ ಸ್ಟೇಟಸ್ ಹಾಕಿಕೊಳ್ಳಿ.

ವಾಟ್ಸಪ್ ಹಳೆ ಸ್ಟೇಟಸ್

ವಾಟ್ಸಪ್ ಹಳೆ ಸ್ಟೇಟಸ್

* ಈ ಮುಂಚೆ ನೀವು ಬಳಕೆ ಮಾಡಿದ ಎಲ್ಲಾ ಸ್ಟೇಟಸ್ ಗಳು ಮತ್ತೆ ಲಭ್ಯವಿದ್ದು, ಹಳೆಯ ಸ್ಟೇಟಸ್ ಸಂದೇಶವನ್ನು ಬಳಸಬಹುದಾಗಿದೆ.
* ಹೊಸ ಪಠ್ಯ(text) ಸಂದೇಶಗಳನ್ನು ಸೇರಿಸಬಹುದಾಗಿದ್ದು, ಇದಕ್ಕೆ ಸಮಯ, ದಿನಗಳ ಮಿತಿ ಇಲ್ಲ. ಹೊಸ ಸ್ಟೇಟಸ್ ಸೌಲಭ್ಯದಲ್ಲಿ 24 ಗಂಟೆ ಮಿತಿ ಮಾತ್ರ ನೀಡಲಾಗಿದೆ.

ಸ್ಟೇಟಸ್ ಹೇಗೆ ಕಾಣುತ್ತದೆ

ಸ್ಟೇಟಸ್ ಹೇಗೆ ಕಾಣುತ್ತದೆ

ಒಂದು ವೇಳೆ ಗೂಗಲ್ ಪ್ಲೇ ಸ್ಟೋರಿಗೆ ಹೋದರೂ ವಾಟ್ಸಪ್ ಅಪ್ಡೇಟ್ ಆಗುತ್ತಿಲ್ಲ ಎಂದರೆ ಕೊರಗಬೇಡಿ, ವಾಟ್ಸಪ್ ನಲ್ಲೆ ಅಪ್ಡೇಟ್ ಮಾಡಿಕೊಳ್ಳಲು ಸಂದೇಶ ಇಂದಲ್ಲ ನಾಳೆ ಸಿಗುತ್ತದೆ. ಮುಂಬರುವ ವಾರಗಳಲ್ಲಿ ಈ ಹಳೆ ಸ್ಟೇಟಸ್ ಸೌಲಭ್ಯ iOS ನ ಸಾಧನಗಳಲ್ಲೂ ಲಭ್ಯವಿರಲಿದೆ.

English summary
Facebook-owned WhatsApp officially brought its ‘text Status’ feature back recently. The new feature is available in WhatsApp’s latest Android app version, 2.17.107. WhatsApp 'Status' story feature which allows users to share photos, videos, GIFs is also available.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X