ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಟ್ಸಪ್: ಬ್ಲಾಕ್ ಮಾಡಿದ್ರೆ UnBlock ಮಾಡ್ಕೊಳ್ಳೊದು ಹೇಗೆ?

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 29: ಅತ್ಯಂತ ಜನಪ್ರಿಯ ಚಾಟಿಂಗ್ ಅಪ್ಲಿಕೇಷನ್ ವಾಟ್ಸಪ್ ನಲ್ಲಿ ಯಾರಾದರೂ ನಿಮ್ಮನ್ನು(ನಿಮ್ಮ ನಂಬರ್) ಬ್ಲಾಕ್ ಮಾಡಿದ್ದರೆ, ಅದನ್ನು ಅನ್ ಬ್ಲಾಕ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ಉಪಾಯ.

ಹೌದು, ಆಂಡ್ರಾಯ್ಡ್, ಐಫೋನ್, ವಿಂಡೋಸ್ ಫೋನ್, ನೋಕಿಯಾ, ಬ್ಲಾಕ್ ಬರಿ ಯಾವುದೇ ಮಾದರಿ ಸ್ಮಾರ್ಟ್ ಫೋನ್ ಇರಲಿ ಯಾರದರೂ ನಿಮ್ಮನ್ನು ವಾಟ್ಸಪ್ ಬ್ಲಾಕ್ ಮಾಡಿದರೆ, ಏನಾಗುತ್ತೆ? ತಕ್ಷಣಕ್ಕೆ ನಿಮಗೆ ಬ್ಲಾಕ್ ಮಾಡಿರುವುದು ತಿಳಿಯುವುದೇ ಇಲ್ಲ.

ಬ್ಲಾಕ್ ಮಾಡಿದ ಖಾತೆಯ ಸಂದೇಶಗಳು, ಲಾಸ್ಟ್ ಸೀನ್, ಹಂಚಿದ ಚಿತ್ರಗಳು ಕಾಣಿಸುವುದಿಲ್ಲ, ಸ್ಟೇಟಸ್ ಸಂದೇಶಗಳು, ಫ್ರೊಫೈಲ್ ಫೋಟೊ ಕೂಡಾ ಕಾಣಿಸುವುದಿಲ್ಲ, ವಾಟ್ಸಪ್ ಕಾಲ್ ಕೂಡಾ ಮಾಡಲು ಆಗುವುದಿಲ್ಲ. ಆದರೆ, ಬ್ಲಾಕ್ ಮಾಡಿದ ಮಾತ್ರಕ್ಕೆ ಕಾಂಟ್ಯಾಕ್ಟ್ ಡಿಲೇಟ್ ಆಗಿರುವುದಿಲ್ಲ.[ವಾಟ್ಸಪ್ ಮೆಸೇಜ್ ಹ್ಯಾಕ್ ಹೇಗೆ? ಸೇಫ್ ಮಾಡೋದು ಹೇಗೆ?]

ಅನ್ ಬ್ಲಾಕ್ ಮಾಡುವುದು ಹೇಗೆ?:
ಯಾರೇ ನಿಮ್ಮನ್ನು ಬ್ಲಾಕ್ ಮಾಡಲಿ ಅವರು ನಿಮ್ಮನ್ನು ಅನ್ ಬ್ಲಾಕ್ ಮಾಡುವುದಕ್ಕೂ ಮೊದಲೇ ನೀವೆ ಅನ್ ಬ್ಲಾಕ್ ಮಾಡಿಕೊಳ್ಳಬಹುದು.
* ವಾಟ್ಸಪ್ ಮೆಸೆಂಜರ್ ಓಪನ್ ಮಾಡಿ [ವಾಟ್ಸಪ್ ರಿಪ್ಲೈ, ಉಲ್ಲೇಖ ಸಂದೇಶ ಸೌಲಭ್ಯ ಬಳಕೆ ಹೇಗೆ?]

How to un Block contact on WhatsApp

* Settings ಗೆ ಹೋಗಿ
* Account ಕ್ಲಿಕ್ ಮಾಡಿ
* Delete my account ಕ್ಲಿಕ್ ಮಾಡಿ(ಆಯ್ಯೋ ನನ್ನ ಅಕೌಂಟ್ ಕಥೆ? ಚಿಂತಿಸಬೇಡಿ ಎಲ್ಲವೂ ಪುನಃ ಸ್ಥಾಪಿಸಬಹುದು)
* ನಿಮ್ಮ ವಾಟ್ಸಪ್ ಬಳಕೆ ಫೋನ್ ನಂಬರ್ ನಮೂದಿಸಿ
* ವಾಟ್ಸಪ್ ಅಪ್ಲಿಕೇಷನ್ ಅನ್ ಇನ್ಸ್ಟಾಲ್ ಮಾಡಿ
* ನಿಮ್ಮ ಫೋನ್ ರೀಬೂಟ್ ಅಥವಾ ರೀಸ್ಟಾರ್ಸ್ ಮಾಡಿ
* ನಂತರ ಗೂಗಲ್ ಪ್ಲೇಸ್ಟೋರ್ ಗೆ ಹೋಗಿ ವಾಟ್ಸಪ್ ಅಪ್ಲಿಕೇಷನ್ ಇನ್ ಸ್ಟಾಲ್ ಮಾಡಿ
* ಎಲ್ಲಾ ಅಂಶಗಳನ್ನು ತುಂಬಿ, ಅಪ್ಡೇಟ್ ಕೇಳಿದರೆ ಅಪ್ಡೇಟ್ ಮಾಡಿಕೊಳ್ಳಿ [ವಾಟ್ಸಪ್ ಗೆ ಕಾಸು ಕೊಡಬೇಕಾಗಿಲ್ಲ, ಮಜಾ ಮಾಡಿ]

ಇಷ್ಟು ಮಾಡಿದರೆ, ನಿಮ್ಮ ಖಾತೆಯಲ್ಲಿರುವ ಎಲ್ಲ ಕಾಂಟ್ಯಾಕ್ಟ್ ಗಳು ಅನ್ ಬ್ಲಾಕ್ ಅಗಿರುತ್ತದೆ. ಇನ್ನೊಂದು ವಿಷ್ಯ, ಯಾರಾದರೂ ನಿಮ್ಮನ್ನು ಬ್ಲಾಕ್ ಮಾಡಿದರೂ ಚಿಂತೆ ಇಲ್ಲ, ಇಬ್ಬರು ಯಾವುದಾದರೂ ಕಾಮನ್ ಗ್ರೂಪ್ ನಲ್ಲಿದ್ದರೆ ಚಾಟ್ ಮಾಡಬಹುದು. ಆದರೆ, ವೈಯಕ್ತಿಕವಾಗಿ ಸಂದೇಶ ಕಳಿಸಲು ಅನ್ ಬ್ಲಾಕ್ ಮಾಡಿದರೆ ಮಾತ್ರ ಸಾಧ್ಯ. ಹೆಚ್ಚಿನ ಮಾಹಿತಿಗೆ ವಾಟ್ಸಪ್ FAQs ನೋಡಬಹುದು.

English summary
When you block people on WhatsApp, you will no longer receive WhatsApp messages or calls from them.Here are steps How to un Block contact on WhatsApp
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X