ಹನಿಗೇಟ್ ವಿವಾದ: ಮಾರಿಕೊ ಜೇನುತುಪ್ಪ ಶುದ್ಧತೆ ಪರೀಕ್ಷೆ ವಿರುದ್ಧ ASCI ಮೆಟ್ಟಿಲೇರಿದ ಡಾಬರ್
ನವದೆಹಲಿ, ಡಿಸೆಂಬರ್ 07: ಭಾರತದ ಹಲವಾರು ಪ್ರಮುಖ ಬ್ರಾಂಡ್ ಕಂಪನಿಗಳ ಜೇನುತುಪ್ಪದಲ್ಲಿ ಸಕ್ಕರೆ ಪಾಕದ ಕಲಬೆರಕೆಯಾಗಿದೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ (ಸಿಎಸ್‌ಇ) ಹೇಳಿದ ಬಳಿಕ, ಡಾಬರ್ ಹಾಗೂ ಮಾರಿಕೊ ಕಂಪನಿಗಳು ಪರಸ್ಪರ ಜೇನುತುಪ್ಪ ಶುದ್ಧತೆ ಪರೀಕ್ಷೆಗೆ ಮುಂದಾಗಿದ್ದು, ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ(ಎಎಸ್‌ಸಿಐ) ಮೆಟ್ಟಿಲೇರಿವೆ.
ಮಾರಿಕೊನ ಸಫೊಲಾ ಹನಿ, ಮಾರ್ಕ್‌ಫೆಡ್‌ನ ಸೊಹ್ನಾ ಮತ್ತು ನೇಚರ್ ನಕ್ಟಾ ಈ ಮೂರು ಕಂಪನಿಗಳಿಗೆ ಸಿಎಸ್‌ಇ ತನ್ನ ವರದಿಯಲ್ಲಿ ಮಾಡಿದ್ದ ಆರೋಪವನ್ನು, ಎಲ್ಲಾ ಪರೀಕ್ಷೆಗಳನ್ನು ತೆರವುಗೊಳಿಸಿದೆ. ಅದರಲ್ಲೂ ಮಾರಿಕೊನ ''ಶೇಕಡಾ 100ರಷ್ಟು ಪರಿಶುದ್ಧ ಜೇನು'' ಹಕ್ಕಿನ ವಿರುದ್ಧ ಡಾಬರ್ ಸಿಟ್ಟಿಗೆದ್ದಿದ್ದು, ಮಾರಿಕೊನ ಸಫೊಲಾ ಹನಿ ವಿರುದ್ಧ ದೂರು ನೀಡಲು ಡಾಬರ್ ಯೋಚಿಸಿದೆ.
ಸಿಎಸ್‌ಇ ಇತ್ತೀಚೆಗಷ್ಟೇ ದೇಶದ ಪ್ರಮುಖ ಬ್ರಾಂಡ್‌ಗಳಾದ ಡಾಬರ್, ಪತಂಜಲಿ, ಬೈದ್ಯನಾಥ್, ಜಂಡೂ, ಹಿಟ್ಕರಿ ಮತ್ತು ಆಪಿಸ್ ಹಿಮಾಲಯದ ಜೇನುತುಪ್ಪದ ಮಾದರಿಗಳು ಶುದ್ಧತೆಯ ಪರೀಕ್ಷೆಯಲ್ಲಿ ವಿಫಲವಾಗಿವೆ ಎಂದು ವರದಿ ನೀಡಿದ ಬಳಿಕ ಈ ಹನಿಗೇಟ್ ವಿವಾದ ಹುಟ್ಟುಕೊಂಡಿದೆ. ಈ ಬ್ರಾಂಡ್‌ಗಳಲ್ಲಿ ಶೇಕಡಾ 77 ರಷ್ಟು ಸಕ್ಕರೆ ಪಾಕವನ್ನು ಸೇರಿಸುವುದರೊಂದಿಗೆ ಕಲಬೆರಕೆ ಮಾಡಲಾಗಿದೆ ಎಂದು ವರದಿ ಮಾಡಿದೆ.

ಈ ಕಂಪನಿಗಳು ತಮ್ಮ ಉತ್ಪನ್ನಗಳ ಎನ್‌ಎಂಆರ್ ಪರೀಕ್ಷೆಯಲ್ಲಿ ಉತ್ತೀರ್ಣವಾಗಿದೆ ಎಂದು ಹೇಳಿಕೊಂಡರೂ ಸಿಎಸ್‌ಇ ಈ ಬ್ರಾಂಡ್‌ಗಳು ಪ್ರಮುಖ ಪರೀಕ್ಷೆಯಲ್ಲಿ ವಿಫಲವಾಗಿವೆ ಎಂದು ಅವುಗಳ ಹಕ್ಕನ್ನು ತಿರಸ್ಕರಿಸಿದೆ.
ಇದರ ನಡುವೆ ಎನ್ಎಂಆರ್ ಪರೀಕ್ಷೆಯ ಬಗ್ಗೆ ಡಾಬರ್ ಹೇಳಿಕೆಯನ್ನು ಪ್ರಶ್ನಿಸಿ ಮಾರಿಕೊ ಡಿಸೆಂಬರ್ 3 ರಂದು ದೂರು ದಾಖಲಿಸಿದೆ. ಎಎಸ್‌ಸಿಐ ದೂರನ್ನು ಒಪ್ಪಿಕೊಂಡಿದೆ ಮತ್ತು ಹೆಚ್ಚಿನ ವಿಚಾರಣೆಗೆ ದಾಖಲೆಯನ್ನು ತೆಗೆದುಕೊಂಡಿದೆ ಎಂದು ವರದಿಯಾಗಿದೆ. ವಿಶೇಷವೆಂದರೆ, ಮಾರಿಕೊ ತನ್ನ ಎನ್‌ಎಂಆರ್ ಶುದ್ಧ ಜೇನು ಹಕ್ಕುಗಳನ್ನು ಪರೀಕ್ಷಿಸಿದ ಬಗ್ಗೆ ಅಕ್ಟೋಬರ್‌ನಲ್ಲಿ ಡಾಬರ್ ವಿರುದ್ಧ ದೂರು ದಾಖಲಿಸಿತ್ತು, ಇದೀಗ ಅದನ್ನು ಎಎಸ್‌ಸಿಐ ಎತ್ತಿಹಿಡಿದಿದೆ.
Recommended Video
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications