ಹೋಂಡಾ ಗ್ರಾಜಿಯಾ ಸ್ಪೋರ್ಟ್ಸ್ ಎಡಿಷನ್ ಸ್ಕೂಟರ್ ಬಿಡುಗಡೆ: ಬೆಲೆ ಎಷ್ಟು?

ನವದೆಹಲಿ, ಜನವರಿ 19: ದೇಶದ ಪ್ರಮುಖ ದ್ವಿಚಕ್ರ ವಾಹನಗಳ ತಯಾರಕ ಜಪಾನ್‌ ಮೂಲದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಕಂಪನಿಯು ತನ್ನ ಹೊಸ ಹೋಂಡಾ ಗ್ರಾಜಿಯಾ ಸ್ಪೋರ್ಟ್ಸ್ ಎಡಿಶನ್ ಬೈಕ್ ಅನ್ನು ಮಂಗಳವಾರ ಬಿಡುಗಡೆ ಮಾಡಿದೆ.

ಬಿಎಸ್‌-VI ಮಾದರಿಯ ಆವೃತ್ತಿಯ 125ಸಿಸಿ ಎಂಜಿನ್ ಹೊಂದಿರುವ ಈ ಸ್ಕೂಟರ್‌ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಇದರ ಆರಂಭಿಕ ಬೆಲೆ (ಗುರುಗ್ರಾಮ್ ಶೋ ರೂಂ) 82,564 ರೂಪಾಯಿನಷ್ಟಿದೆ.

ಹೋಂಡಾ ಗ್ರಾಜಿಯಾ ಸ್ಪೋರ್ಟ್ಸ್ ಎಡಿಶನ್ ಸ್ಕೂಟರ್‌ನಲ್ಲಿ ಸೈಡ್ ಸ್ಟ್ಯಾಂಡ್ ಇಂಡಿಕೇಟರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ನೀಡಿದ್ದು, ಹೊಸ ಮಾದರಿಯಲ್ಲಿ ಪರಿಚಯಿಸುತ್ತಿದೆ.

 Honda Grazia 125: Price And Other Details Here

ಇನ್ನು ಈ ಗ್ರಾಜಿಯಾ ಸ್ಪೋರ್ಟ್ಸ್ ಎಡಿಷನ್ ಸ್ಕೂಟರ್ ಫ್ಯಾನ್-ಕೂಲ್ಡ್‌, 4 ಸ್ಟ್ರೋಕ್, ಎಸ್‌ಐ ಎಂಜಿನ್ ಅನ್ನು ಹೊಂದಿದೆ. ಎಂಜಿನ್ 6000 ಆರ್‌ಪಿಎಂನಲ್ಲಿ ಗರಿಷ್ಠ 6.07 ಕಿಲೋವ್ಯಾಟ್ ಮತ್ತು 5000 ಆರ್‌ಪಿಎಂನಲ್ಲಿ ಗರಿಷ್ಠ ಟಾರ್ಕ್ 10.3ಎನ್ಎಂ ಉತ್ಪಾದಿಸುತ್ತದೆ.

ಗ್ರಾಜಿಯಾ ಸಾಮಾನ್ಯ ಸ್ಕೂಟರ್‌ ಮತ್ತು ಸ್ಪೋರ್ಟ್ಸ್‌ ಎಡಿಷನ್‌ನಲ್ಲಿ ಹೆಚ್ಚಿನ ಬದಲಾವಣೆ ಮಾಡಲಾಗಿಲ್ಲ. ಹಿಂದಿನ ಸ್ಟ್ರಾಂಡರ್ಡ್‌ ಗ್ರಾಜಿಯಾ ಸ್ಕೂಟರ್‌ನಂತೆಯೇ ಇರುತ್ತದೆ. ಸ್ಕೂಟರ್ ಮಲ್ಟಿ-ಫಂಕ್ಷನ್ ಇಗ್ನಿಷನ್ ಸ್ವಿಚ್, ಡಿಜಿಟಲ್ ಮಾದರಿಯ ಡಿಸ್‌ಪ್ಲೇ, ಇಂಧನ ಫಿಲ್ಟರ್ ಕ್ಯಾಪ್ ಮತ್ತು ಸ್ಟಾರ್ಟ್-ಸ್ಟಾಪ್ ಸಿಸ್ಟಮ್ ಅನ್ನು ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+